ಬೆಂಗಳೂರು : ಗೃಹಲಕ್ಷ್ಮೀ (Gruha Lakshmi Scheme) , ಗೃಹಜ್ಯೋತಿ (Gruha Jyothi Scheme), ಅನ್ನಭಾಗ್ಯ (Anna Bhagya Scheme), ಶಕ್ತಿ ಯೋಜನೆ ( Shakthi Scheme) ಹಾಗೂ ಯುವ ನಿಧಿ ಯೋಜನೆ (Yuva Nidhi Scheme) ಸೇರಿದಂತೆ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ(Congress Gurantee) ಸದ್ದು ಜೋರಾಗಿದೆ. ಕಾಂಗ್ರೆಸ್ ಸರಕಾರದ ಈ ಗ್ಯಾರಂಟಿ ಯೋಜನೆಗಳು ಜನಮನಗೆದ್ದಿದೆ. ಆದರೆ ಈ ಯೋಜನೆಗಳ ಜಾರಿ ಮಧ್ಯೆ ಸರ್ಕಾರದ ಹಳೆ ಯೋಜನೆಗಳ ಸ್ಥಿತಿ ಹೇಗಿದೆ ಎಂಬ ರಿಯಾಲಿಟಿ ಚೆಕ್ ನಲ್ಲಿ ಇಂದಿರಾ ಕ್ಯಾಂಟಿನ್ (Indiara Canteen) ಅಸಲಿ ರೂಪ ಬಯಲಿಗೆ ಬಂದಿದೆ.
ದುಡಿಯುವ ಹಾಗೂ ಕಾರ್ಮಿಕ ವರ್ಗದ ಹಸಿವು ತೀರಿಸುವುದಕ್ಕಾಗಿ ಜಾರಿಗೆ ಬಂದಿದ್ದೇ ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟಿನ್ ಯೋಜನೆ. 2016ರಲ್ಲಿ ಇದೇ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಜಾರಿ ಮಾಡಿದ ಯೋಜನೆ ಇಂದಿರಾ ಕ್ಯಾಂಟೀನ್ ಅತ್ಯಂತ ಕಡಿಮೆ ಬೆಲೆಗೆ ಮೂರು ಹೊತ್ತಿನ ಊಟ-ಉಪಹಾರ ಕೊಡುವ ಪ್ರಯತ್ನವಾಗಿತ್ತು.

ಒಂದಿಷ್ಟು ವರ್ಷಗಳ ಕಾಲ ಸರಿಯಾಗಿ ನಡೆದ ಇಂಧಿರಾ ಕ್ಯಾಂಟಿನ್ ಯೋಜನೆ ಕೊನೆಗೆ ಹಳ್ಳ ಹಿಡಿಯಲು ಆರಂಭಿಸಿತ್ತು. ಅದರಲ್ಲೂ ಕಳೆದ ಬಿಜೆಪಿ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ಗೆ ಅನುದಾನ ನೀಡದೆ ರಾಜ್ಯದಾದ್ಯಂತ ಹಲವು ಇಂಧಿರಾ ಕ್ಯಾಂಟಿನ್ ಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪಿತ್ತು. ಆದರೀಗ ಸಿದ್ದರಾಮಯ್ಯನವರೇ ಸಿಎಂ ಆಗಿರುವಾಗಲೂ ಇಂದಿರಾ ಕ್ಯಾಂಟೀನ್ ದುರಸ್ತಿ ನಡೆಯುತ್ತಿಲ್ಲ.
ಇದನ್ನೂ ಓದಿ : ಮೀಸಲಾತಿ ಸಂಕಷ್ಟ: ಸದ್ಯಕ್ಕಿಲ್ಲ ಬಿಬಿಎಂಪಿ ಎಲೆಕ್ಷನ್
ಇದುವರೆಗೆ ಬಿಬಿಎಂಪಿ 23 ಇಂದಿರಾ ಕ್ಯಾಂಟೀನ್ ಗೆ ಬೀಗ ಜಡಿದಿದೆ. ಈ ಪೈಕಿ 17 ಮೊಬೈಲ್ ಇಂದಿರಾ ಕ್ಯಾಂಟೀನ್ ಗಳು, 6 ನಿಗದಿ ಜಾಗದಲ್ಲಿ ನಿರ್ಮಿಸಲಾಗಿರುವ ಕ್ಯಾಂಟೀನ್ ಗಳು ಬಾಗಿಲು ಮುಚ್ಚಿವೆ. ನಗರದಲ್ಲಿ ಒಟ್ಟು 198 ಕ್ಯಾಂಟೀನ್ ಹಾಗೂ 24 ಮೊಬೈಲ್ ಇಂದಿರಾ ಕ್ಯಾಂಟೀನ್ ಗಳಿವೆ. ಈ ಪೈಕಿ ಮಾರತಹಳ್ಳಿ, ಪದ್ಮನಾಭನಗರ, ಕುಮಾರಸ್ವಾಮಿ ಲೇಔಟ್, ಹನುಮಂತನಗರ ಸೇರಿದಂತೆ ನಗರದ ಪ್ರಮುಖ ಸ್ಥಳಗಳ ಇಂದಿರಾ ಕ್ಯಾಂಟೀನ್ ಹಲವು ಕಾರಣಗಳಿಂದ ಬಂದ್ ಆಗಿದೆ.
ಇದರ ಜೊತೆಗೆ ಅಲ್ಲಲ್ಲಿ ಸ್ಥಾಪಿಸಲಾಗಿರುವ 17 ಮೊಬೈಲ್ ಇಂದಿರಾ ಕ್ಯಾಂಟೀನ್ ಗಳು ಕೂಡ ಉಪಯೋಗಕ್ಕೆ ಬಾರದೆ ತುಕ್ಕು ಹಿಡಿದು ನಿಂತಿದೆ. ಇಂಧಿರಾ ಕ್ಯಾಂಟಿನ್ ಬಾಗಿಲು ಮುಚ್ಚುತ್ತಿರೋದಿಕ್ಕೆ ಪ್ರಮುಖ ಕಾರಣ ಅನುದಾನದ ಕೊರತೆ. ರಾಜ್ಯ ಸರ್ಕಾರದಿಂದ ಇಂಧಿರಾ ಕ್ಯಾಂಟೀನ್ ನಡೆಸುವ ಕಂಪನಿಗಳಿಗೆ ಲಕ್ಷಾಂತರ ರೂಪಾಯಿ ಅನುದಾನ ಬಾಕಿ ಇದೆ.
ಇದನ್ನೂ ಓದಿ : ನಮ್ಮ ಮೆಟ್ರೋ ದಾಖಲೆ : ಒಂದೇ ದಿನ 7 ಲಕ್ಷ ಮಂದಿ ಪ್ರಯಾಣಿಕರಿಂದ ಪ್ರಯಾಣ
ಸದ್ಯ ನಗರದಲ್ಲಿ 23 ಕ್ಯಾಂಟಿನ್ ಬಾಗಿಲು ಮುಚ್ಚಿದೆ. ಈ 23 ಕ್ಯಾಂಟೀನ್ ಮುಚ್ಚಿ ಹೋಗಲು ಪ್ರಮುಖ ಕಾರಣ ಅನುದಾನದ ಕೊರತೆ ಹಾಗೂ ಪಾಲಿಕೆಯ ಕಳಪೆ ನಿರ್ವಹಣೆ. ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಿಯೇ ಹಲವು ಕಡೆಗಳಲ್ಲಿ ಬಿಬಿಎಂಪಿ ಛೀಮಾರಿ ಹಾಕಿಸಿಕೊಂಡಿತ್ತು.

ಆದರೆ ಇದೀಗ 23 ಕ್ಯಾಂಟೀನ್ ಗಳನ್ನು ಬಂದ್ ಮಾಡಲಾಗಿದೆ. ಇದರ ಜೊತೆಗೆ 50ಕ್ಕೂ ಅಧಿಕ ಕ್ಯಾಂಟೀನ್ ಗಳನ್ನು ದುರಸ್ತಿ ಮಾಡಬೇಕಿರುವ ಅನಿರ್ವಾಯತೆ ಇದೆ. ಈ ಎಲ್ಲಾ ಕಾರಣಕ್ಕೆ ಇಂಧಿರಾ ಕ್ಯಾಂಟಿನ್ ಬಾಗಿಲುಮುಚ್ಚಿದೆ. ಇದರೊಂದಿಗೆ ಸಿದ್ಧರಾಮಯ್ಯನವರ ಸರ್ಕಾರ ಇಂಧಿರಾ ಕ್ಯಾಂಟಿನ್ ಗೆ ಅನುದಾನ ನೀಡಿಲ್ಲ ಅನ್ನೋದು ಅಷ್ಟೇ ಸತ್ಯ.
ಇದನ್ನೂ ಓದಿ : ನಮ್ಮ ಮೆಟ್ರೋದಿಂದ ಐಟಿ ಮಂದಿಗೆ ಗಿಫ್ಟ್: ಕೆಂಗೇರಿಯಿಂದ ವೈಟ್ ಫಿಲ್ಡ್ಕೆ, .ಆರ್. ಪುರಂವರೆಗೆ ಮೆಟ್ರೋ ಪ್ರಯಾಣ
ಸದ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಆದರೂ ಸರ್ಕಾರ ಘೋಷಿಸಿದ ಗ್ಯಾರಂಟಿಗಳನ್ನು ನೀಡಲೇ ಬೇಕಾದ ಅನಿವಾರ್ಯತೆ ಸರ್ಕಾರದ ಮುಂದಿದೆ. ಲೋಕಸಭಾ ಎಲೆಕ್ಷನ್ ಹಾಗೂ ವಿರೋಧ ಪಕ್ಷಗಳ ಟೀಕೆಯ ಕಾರಣಕ್ಕಾದರೂ ಸರಕಾರ ಗ್ಯಾರಂಟಿಗಳನ್ನು ನೀಡಲೇ ಬೇಕು. ಹೀಗಾಗಿ ಇಂಧಿರಾ ಕ್ಯಾಂಟಿನ್ ಸಮಸ್ಯೆ ಪರಿಹರಿಸಲು ಸರ್ಕಾರ ಆಸಕ್ತಿ ತೋರುತ್ತಿಲ್ಲ.
ಇಂಧಿರಾ ಕ್ಯಾಂಟಿನ್ ಗುತ್ತಿಗೆ ಪಡೆದವರು ಕೂಡ ಅನುದಾನ ಬಾಕಿ ಉಳಿದಿರೋದರಿಂದ ಕಾರ್ಮಿಕರ ಸಂಬಳ, ಊಟ ತಿಂಡಿಗೆ ಅಗತ್ಯ ಸರಂಜಾಮು ಖರೀದಿಗೂ ಹಣವಿಲ್ಲದೇ ಕ್ಯಾಂಟಿನ್ ಬಾಗಿಲು ಮುಚ್ಚಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತುಕೊಳ್ಳುವ ಸರ್ಕಾರ ಈ ಭಾರಿಯಾದರೂ ಇಂಧಿರಾ ಕ್ಯಾಂಟಿನ್ ಸಮಸ್ಯೆಗೊಂದು ಶಾಶ್ವತ ಪರಿಹಾರ ಕಂಡುಕೊಳ್ಳತ್ತಾ ಕಾದುನೋಡಬೇಕಿದೆ.
congress guarantee scheme effect: Indira Canteen is closing its doors without funding during CM Siddaramaiahs tenure