ಕೊರೊನಾದಿಂದ ಜನರು ಸಾಯ್ತಿದ್ರೆ, ಶವ ಸಂಸ್ಕಾರದಲ್ಲೂ ಪ್ರಚಾರಗಿಟ್ಟಿಸುತ್ತಿದ್ದಾರೆ ಜನಪ್ರತಿನಿಧಿಗಳು…!!!

ಬೆಂಗಳೂರು : ಕೊರೊನಾ ಸೋಂಕು ಜನರನ್ನು ಕಂಗೆಡಿಸಿದೆ. ಒಂದೆಡೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆಯ ಆತಂಕ, ಮೃತರ ಕಡೆಯವರಿಗೆ ಅಂತ್ಯ ಸಂಸ್ಕಾರದ‌ ಚಿಂತೆ.‌ ಆದ್ರೆ ನಮ್ಮ ಜನಪ್ರತಿನಿಧಿಗಳು ಮಾತ್ರ ಅಂತ್ಯ ಸಂಸ್ಕಾರದಲ್ಲೂ ಪ್ರಚಾರಗಿಟ್ಟಿಸುತ್ತಿದ್ದಾರೆ.

ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಿಡ್ಡೇನಹಳ್ಳಿಯ ಚಿತಾಗಾರಕ್ಕೆ ತೆರಳುವ ಮಾರ್ಗದಲ್ಲಿ ನಾಮಫಲಕವೊಂದನ್ನು ಅಳವಡಿಸಲಾಗಿದೆ. ಈ ಫಲಕವನ್ನು ನೋಡಿದ್ರೆ ಎಂತಹವರಿಗೂ ಬೇಸರವಾಗದೆ ಇರದು. ಕೊವಿಡ್ ಸೋಂಕಿತರ ಅಂತ್ಯ ಸಂಸ್ಕಾರದ ಸ್ಥಳಕ್ಕೆ ತೆರಳುವ ಮಾರ್ಗದಲ್ಲಿ ಅಳವಡಿಸುವ ಬ್ಯಾನರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ  ಮರಿಸ್ವಾಮಿ, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ ಅವರ ಪೋಟೊವನ್ನು ಬಳಸಿಕೊಂಡು ಕೀಳುಮಟ್ಟದ ಪ್ರಚಾರವನ್ನು ನಡೆಸಲಾಗುತ್ತಿದೆ. ಈ ಬ್ಯಾನರ್ ನೋಡಿದ ಮಂದಿ ಸಾಮಾಜಿಕ‌ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾ ಜಾಗೃತಿಗಾಗಿ ನಾಮಫಲಕ‌ ಅಳವಡಿಸುವುದು ಸರಿ. ಆದ್ರೆ ಸ್ಮಶಾನಕ್ಕೆ ತೆರಳುವ ಮಾರ್ಗದಲ್ಲಿ ನಗುತ್ತಿರುವ ಪೋಟೊವನ್ನು ಅಳವಡಿಸಲಾಗಿದೆ. ಸ್ಮಶಾನದಲ್ಲಿ ಉಚಿತವಾಗಿ ನೀರು, ಕಾಫಿ, ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಬರೆಯಲಾಗಿದೆ. ತಮ್ಮವ ರನ್ನು ಕಳೆದುಕೊಂಡವರಿಗೆ ಇದೆಲ್ಲಾ ಬೇಕಾ ಅಂತಾ ಜನರು ಪ್ರಶ್ನಿಸುತ್ತಿದ್ದಾರೆ.

Comments are closed.