MS Dhoni Police look: ಪೊಲೀಸ್ ಅವತಾರದಲ್ಲಿ ಎಂ.ಎಸ್ ಧೋನಿ : ಮಾಹಿಯ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ

ಬೆಂಗಳೂರು: (MS Dhoni Police look) ಕ್ಯಾಪ್ಟನ್ ಕೂಲ್ ಖ್ಯಾತಿಯ ಟೀಮ್ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಸದಾ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ರಾಂಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದ ವೇಳೆ ಟೀಮ್ ಇಂಡಿಯಾ ಆಟಗಾರರು ಧೋನಿ ಅವರನ್ನು ಭೇಟಿ ಮಾಡಿದ್ದರು. ಪಂದ್ಯದ ದಿನ ಕ್ರೀಡಾಂಗಣಕ್ಕೆ ಆಗಮಿಸಿದ್ದ ಧೋನಿ ಪತ್ನಿ ಸಾಕ್ಷಿ ಜೊತೆ ಭಾರತ Vs ಕಿವೀಸ್ ಟಿ20 ಪಂದ್ಯ ವೀಕ್ಷಿಸಿದ್ದರು.

ಇದೀಗ ಎಂ.ಎಸ್ ಧೋನಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಿರೋದು ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿರುವುದಕ್ಕೆ. ಧೋನಿ ಪೊಲೀಸ್ ಸಮವಸ್ತ್ರದಲ್ಲಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ನೋಡಿರುವ ಕೆಲವರು ಧೋನಿ ಅವರು ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಯವರ ಸಿನಿಮಾದಲ್ಲೇನಾದ್ರೂ ನಟಿಸ್ತಾ ಇದ್ದಾರಾ ಅಂತ ಪ್ರಶ್ನಿಸ್ತಿದ್ದಾರೆ. ಆದ್ರೆ ಅಸಲಿ ಸಂಗತಿ ಬೇರೆಯೇ ಇದೆ. ಧೋನಿ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿರುವುದು ಜಾಹೀರಾತು ಒಂದರ ಶೂಟಿಂಗ್’ಗಾಗಿ. ಇನ್ನೇನು ಕೆಲವೇ ದಿನಗಳಲ್ಲಿ ಧೋನಿ ಪೊಲೀಸ್ ಪಾತ್ರದಲ್ಲಿ ನಟಿಸಿರುವ ಜಾಹೀರಾತು ತೆರೆಯ ಮೇಲೆ ಬರಲಿದೆ.

41 ವರ್ಷದ ಎಂ.ಎಸ್ ಧೋನಿ 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್ ಬೈ ಹೇಳಿದ್ದರು. ಈ ವರ್ಷದ ಐಪಿಎಲ್ ನಂತರ ಧೋನಿ ಕ್ರಿಕೆಟ್’ನ ಎಲ್ಲಾ ಪ್ರಕಾರಗಳಿಗೆ ನಿವೃತ್ತಿ ಘೋಷಿಸಲಿದ್ದಾರೆ. ಐಪಿಎಲ್’ನಲ್ಲಿ ಒಟ್ಟು 13 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂ.ಎಸ್ ಧೋನಿ ಮುನ್ನಡೆಸಿದ್ದಾರೆ. ಧೋನಿ ಸಾರಥ್ಯದಲ್ಲಿ ಚೆನ್ನೈ ತಂಡ 9 ಬಾರಿ ಬಾರಿ ಫೈನಲ್ ಪ್ರವೇಶಿಸಿದ್ದು, ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ (2010, 2011, 2018, 2021). ಕ್ರಿಕೆಟ್ ಜಗತ್ತು ಕಂಡ ಸರ್ವಶ್ರೇಷ್ಠ ನಾಯಕರಾಗಿರುವ ಧೋನಿ ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಜಗತ್ತಿನ ಮೊದಲ ಮತ್ತು ಏಕೈಕ ನಾಯಕನೆಂಬ ವಿಶ್ವದಾಖಲೆ ಹೊಂದಿದ್ದಾರೆ. ಈ ಬಾರಿಯ ಐಪಿಎಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್”ನಿಂದ ಧೋನಿ ನಿವೃತ್ತಿಯಾಗಲಿದ್ದು, ಕ್ರಿಕೆಟ್ ದಿಗ್ಗಜನ ಮಹೋನ್ನತ ವೃತ್ತಿಜೀವನಕ್ಕೆ 2023ರಲ್ಲಿ ತೆರೆ ಬೀಳಲಿದೆ.

ಇದನ್ನೂ ಓದಿ : Washington Sundar : ಟೀಮ್ ಇಂಡಿಯಾ ಸ್ಟಾರ್ ವಾಷಿಂಗ್ಟನ್ ಸುಂದರ್‌ಗೆ ಒಂದು ಕಿವಿ ಕಿವುಡು; ಅಚ್ಚರಿಯಾದ್ರೂ ಇದು ಸತ್ಯ

ಇದನ್ನೂ ಓದಿ : KY Venkatesh: ಕರ್ನಾಟಕ ಪ್ರತಿಭಾವಂತ ಕ್ರಿಕೆಟ್‌ ಪಟುಗಳ ತವರೂರು: ಪದ್ಮಶ್ರೀ ಕೆ.ವೈ.ವೆಂಕಟೇಶ್

MS Dhoni in Police look Fans are excited for Mahendra Singh Dhoni new look

Comments are closed.