Street Side Business Certificate : ಇನ್ನುಂದೆ ಬೀದಿ ಬದಿ ವ್ಯಾಪಾರಕ್ಕೂ ಬೇಕು ಸರ್ಟಿಫಿಕೇಟ್ : ನಗರದಲ್ಲಿ ಹೊಸ ನಿಯಮ ಜಾರಿ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಮಾಲ್,ಶಾಪಿಂಗ್ ಕಾಂಪ್ಲೆಕ್ಸ್ ಗಳಷ್ಟೇ ಗಮನ ಳೆಯೋರು ಬೀದಿ ಬದಿ ವ್ಯಾಪಾರಿಗಳು. ನಗರದ ಹಲವು ರಸ್ತೆಗಳು ಬೀದಿಬದಿ ವ್ಯಾಪಾರಕ್ಕೆ ಸಖತ್ ಫೇಮಸ್. ಆದರೆ ಈಗ ಈ ಬೀದಿ ಬದಿ ವ್ಯಾಪಾರಕ್ಕೂ FSSAI ಪ್ರಮಾಣ ಪತ್ರ ಕಡ್ಡಾಯಗೊಳಿಸಲು (Street Side Business Certificate ) ಬಿಬಿಎಂಪಿ ಮುಂದಾಗಿದೆ. ‌ ಅಷ್ಟೇ ಅಲ್ಲ ಈ ಪ್ರಮಾಣ ಪತ್ರ ಪಡೆಯಲು ತರಬೇತಿ ನೀಡಲಿದ್ದು, ತರಬೇತಿಗೆ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಿದೆ.

ಬೀದಿ ಬದಿ ವ್ಯಾಪಾರಿಗಳ ಆಹಾರದ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಸ್ವಚ್ಛತೆ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ತಿಳುವಳಿಕೆ ನೀಡಲು ತರಬೇತಿ ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಈ ತರಬೇತಿ ಬಳಿಕ ವ್ಯಾಪಾರಿಗಳಿ FSSAI ನಿಂದ ಪ್ರಮಾಣ ಪತ್ರ ಸಿಗಲಿದೆ. ಇನ್ಮುಂದೆ ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟು ನಡೆಸಲು ಈ ಪ್ರಮಾಣ ಪತ್ರ ಕಡ್ಡಾಯ.

ಹೀಗಾಗಿ ತರಬೇತಿಗೆ ಬಿಬಿಎಂಪಿ ಅರ್ಜಿ ಆಹ್ವಾನಿಸಿದೆ. ತರಬೇತಿಗೆ ನೋಂದಣಿ ಮಾಡಿಕೊಳ್ಳಲು ಫೆಬ್ರವರಿ 28 ಕೊನೆಯ ದಿನವಾಗಿದೆ. ಆರ್‌ಆರ್ ನಗರ ಕಲ್ಯಾಣಾಧಿಕಾರಿಗಳ ಕಚೇರಿ ಯಲ್ಲಿ ನೋಂದಣಿಗೆ ಸೂಚನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ತರಬೇತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಗುಟಮಟ್ಟ & ಸುರಕ್ಷಿತೆ ಬಗ್ಗೆ ಟ್ರೈನಿಂಗ್ ನೀಡಲಾಗುತ್ತದೆ. ಸದ್ಯ ಪ್ರಾಯೋಗಿಕವಾಗಿ ಪಾಲಿಕೆಯ ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿಯಮ ಜಾರಿಗೆ ತರಲು ಪಾಲಿಕೆ ಮುಂದಾಗಿದೆ. ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರ & ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ನಿಯಮ ಜಾರಿಯಾಗಲಿದ್ದು, ಆರ್‌ಆರ್ ನಗರದ 9 ವಾರ್ಡ್ ಗಳು ಹಾಗೂ ಯಶವಂತಪುರದ 5 ವಾರ್ಡ್ ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರುತ್ತದೆ.

ಇಲ್ಲಿನ ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೆ FSSAI ಅಡಿಯಲ್ಲಿ ಆಹಾರದ ಗುಣಮಟ್ಟ & ಸುರಕ್ಷಿತೆ ಬಗ್ಗೆ ಟ್ರೈನಿಂಗ್ ನೀಡಿ ಬಳಿಕ FSSAI ನಿಂದ ಅಧಿಕೃತವಾಗಿ ಪ್ರಮಾಣ ಪತ್ರ ನೀಡಲಾಗುತ್ತದೆ. ಇನ್ಮುಂದೆ ಈ ಪ್ರಮಾಣ ಪತ್ರ ಹೊಂದಿರುವವರಿಗೆ ಮಾತ್ರ ಬೀದಿ ಬದಿಗಳಲ್ಲಿ ಮಾರಾಟ ಮಾಡಲು ಅನುಮತಿ ನೀಡುತ್ತದೆ. ಮುಂದಿನ ದಿನಗಳಲ್ಲಿ ಈ ನಿಯಮ ಇಡೀ ಬೆಂಗಳೂರಿನಲ್ಲಿ ಜಾರಿಯಾಗಲಿದೆ. ಆದರೆ ಬಿಬಿಎಂಪಿ ಈ ನಿಯಮಕ್ಕೆ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಬೀದಿ ಬದಿ ವ್ಯಾಪಾರಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಮತ್ತೆ ಕೊರೋನಾ ಕರಿನೆರಳು : ರದ್ದಾಗುತ್ತಾ ಬೆಂಗಳೂರು ಕರಗ, ಜಾರಿಯಾಗುತ್ತಾ ಪ್ರತ್ಯೇಕ ಗೈಡ್ ಲೈನ್ಸ್

ಇದನ್ನೂ ಓದಿ : ರಾಜ್ಯದಲ್ಲಿ 31 ಪ್ರತಿಶತ ಐಸಿಯು ಪ್ರಕರಣಗಳಿಗೆ ಓಮಿಕ್ರಾನ್​ ಕಾರಣ : ಬಿಬಿಎಂಪಿ

( FSSAI certificate must for Bangalore Street side business compulsory says bbmp)

Comments are closed.