ಕರ್ನಾಟಕದ ಹಿರಿಮೆಗೆ ಮತ್ತೊಂದು ಗರಿ : ಗೂಗಲ್ ಸರ್ಚ್ ನಲ್ಲಿ ತಾಜಮಹಲ್ ಹಿಂದಿಕ್ಕಿದ ಮೈಸೂರು ಪ್ಯಾಲೇಸ್

ಮೈಸೂರು : ಕರ್ನಾಟಕದ ಹಿರಿಮೆ ಯಲ್ಲಿ ದೊಡ್ಡ ಸ್ಥಾನ ಮೈಸೂರು ಅರಮನೆಗಿದೆ. ಮೈಸೂರು ಅರಮನೆ, ಅರಮನೆಯ ಆಚರಣೆ, ಸಂಪ್ರದಾಯ ಹಾಗೂ ದಸರಾ ಆಚರಣೆಯಿಂದ ವಿಶ್ವವಿಖ್ಯಾತಿ ಪಡೆದಿದೆ. ಈ ಮಧ್ಯೆ ಕರ್ನಾಟಕದ ಏಕೈಕ ಅತಿದೊಡ್ಡ ರಾಜಮನೆತನ‌ ಖ್ಯಾತಿಯ ಮೈಸೂರು ಪ್ಯಾಲೇಸ್ ಕಿರೀಟಕ್ಕೆ ಈಗ ಮತ್ತೊಂದು ಗರಿ ದೊರೆತಿದ್ದು, ಮೈಸೂರು ಪ್ಯಾಲೇಸ್ ಗೂಗಲ್ ಸರ್ಚ್ ನಲ್ಲಿ ತಾಜ‌ಮಹಲ್ (Taj Mahal Vs Mysore Palace) ಹಿಂದಿಕ್ಕಿದೆ.

ಗೂಗಲ್ ನ ಸರ್ಚ್ ಇಂಜಿನ್ ದಾಖಲೆಯಲ್ಲಿ ಅರಮನೆಗೆ 20 ನೇ ಸ್ಥಾನ ದೊರೆತಿದೆ. ಅಷ್ಟೇ ಅಲ್ಲ ಈ ಸ್ಥಾನ ಪಡೆದುಕೊಳ್ಳುವ ಮೂಲಕ ಮೈಸೂರು ಅರಮನೆ ಸರ್ಚ್ ಲಿಸ್ಟ್ ನಲ್ಲಿ ಪ್ರೇಮಸೌಧ ಎಂಬ ಖ್ಯಾತಿಯ ತಾಜ್ ಮಹಲ್ ನ್ನೆ ಮೀರಿಸಿದೆ. ಗೂಗಲ್ ಟಾಪ್ ವೀವ್ಹಡ್ ಟೂರಿಸ್ಟ್ ಪ್ಲೇಸ್ ಗಳ ಪಟ್ಟಿ ನೀಡಿದೆ. ಈ ಪಟ್ಟಿಯಲ್ಲಿ ಮೈಸೂರು ಅರಮನೆ 15 ನೇ ಸ್ಥಾನದಲ್ಲಿದೆ. ಗೂಗಲ್ ನಲ್ಲಿ ಅಂಬಾವಿಲಾಸ ಅರಮನೆ, ದಸರಾ, ಜಂಬೂಸವಾರಿ ಮಾಹಿತಿಗಾಗಿ ಕೋಟ್ಯಾಂತರ ಜನರು ಹುಡುಕಾಟ ನಡೆಸಿದ್ದಾರಂತೆ.

ಇಂಟರ್ನೆಟ್ ನಲ್ಲಿ ಟಾಪ್ 20 ರಿವ್ಯೂ ತಾಣಗಳಲ್ಲಿ ಅರಮನೆಗೆ 15ನೇ ಸ್ಥಾನ ಪಡೆದಿದೆ. ಗೂಗಲ್ ಮ್ಯಾಪ್ ಗೆ ವಿಸಿಟರ್ಸ್ ಭೇಟಿ ನೀಡಿದ ವೇಳೆ ಪ್ರತಿಕ್ರಿಯೆ ಆಧರಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆಯಂತೆ. ಈ ಬಾರಿ ಗೂಗಲ್‌ನಲ್ಲಿ 193, 177 ಪ್ರತಿಕ್ರಿಯೆಗಳು ಅರಮನೆಗೆ ಬಂದಿದೆ. ಇನ್ನು ಪ್ರವಾಸಿಗರು ಅರಮನೆ ಸೌಂದರ್ಯಕ್ಕೆ ಮಾರುಹೋಗಿದ್ದಾರಂತೆ. ವಿಶ್ವಭೂಪಟ ದಲ್ಲಿ ತನ್ನದೇ ಚಾಪು ಮೂಡಿಸಿದ ಅಂಬಾವಿಲಾಸ ಅರಮನೆಗೆ ಪ್ರತಿವರ್ಷ ಆರು ದಶ ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ.

ಚಿನ್ನದ ಅಂಬಾರಿ, ಸಾರ್ವಜನಿಕ ದರ್ಬಾರ್ ಹಾಲ್, ಅರಮನೆಯ ಗೋಡೆಗಳಲ್ಲಿ ದಸರಾ ಮೆರವಣಿಗೆ ಮತ್ತು ಹಿಂದಿನ ಇತರ ಅದ್ಭುತ ಕ್ಷಣಗಳನ್ನು ಚಿತ್ರಿಸುವ ವರ್ಣಚಿತ್ರಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದು, ಮದುವೆ ಮಂಟಪ, ಕುಸ್ತಿ ಅಂಗಳ, ರಾಜ ಮನೆತನದವರು ಉಪಯೋಗಿಸುತ್ತಿದ್ದ ಪೀಠೋಪಕರಣಗಳನ್ನು ಇಲ್ಲಿ ನೋಡಲು ಅವಕಾಶವಿದೆ.

ಈ ಬಗ್ಗೆ ಅರಮನೆಯ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾತನಾಡಿದ್ದು, ಗೂಗಲ್ ರಿವ್ಯೂವ್‌ನಲ್ಲಿ ಮೈಸೂರು ಅರಮನೆ 15 ಸ್ಥಾನ ಪಡೆದುಕೊಂಡಿದೆ.ಅರಮನೆಯ ಬಗ್ಗೆ ತಿಳಿಯಲು, ಗೂಗಲ್ ಮ್ಯಾಪ್‌ನಲ್ಲಿ ಸರ್ಚ್ ಆಗ್ತಿದೆ.ಅಷ್ಟೇ ಅಲ್ಲದೆ ಅರಮನೆ ವೆಬ್ಸೈಟ್‌ನಲ್ಲೂ ಹುಡಕಾಟ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಮೂಲಕ ಪ್ರವಾಸಿಗರು ಅರಮನೆಯತ್ತ ಬರುವ ಸಂಖ್ಯೆಯೂ ಹೆಚ್ಚಾಗಿಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ಅತ್ಯುತ್ತಮ 5 ಪ್ರವಾಸಿ ತಾಣಗಳಿವು; ಪ್ರವಾಸಕ್ಕೆಂದು ಪ್ಯಾಕ್ ಮಾಡುವ ಮುನ್ನ ಈ ಮಾಹಿತಿ ತಿಳಿದಿರಲಿ

ಇದನ್ನೂ ಓದಿ : ಕೇರಳದಲ್ಲಿ ಮಿಸ್ ಮಾಡ್ದೆ ನೋಡಬೇಕಾದ ಪ್ರವಾಸಿ ತಾಣಗಳಿವು

( Mysore Palace, overlooking the Taj Mahal in Google search )

Comments are closed.