Uttarakhand Accident 14 died: ಮದುವೆಯಿಂದ ಮನೆಗೆ ಹೊರಟವರು ಮಸಣ ಸೇರಿದ್ರು : ವಾಹನ ಕಂದಕಕ್ಕೆ ಉರುಳಿ 14 ದುರ್ಮರಣ

ಉತ್ತರಾಖಂಡ್‌ : ಮದುವೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ವಾಹನವೊಂದು ಕಂದಕಕ್ಕೆ ಉರುಳಿ ವಾಹನದಲ್ಲಿದ್ದ 14 ಮಂದಿ ಸಾವನ್ನಪ್ಪಿರುವ (Uttarakhand Accident 14 died) ಘಟನೆ ಉತ್ತರಾಖಂಡ್‌ ರಾಜ್ಯ ಚಂಪಾವತ್‌ ಜಿಲ್ಲೆಯಲ್ಲಿ ನಡೆದಿದೆ.

ಚಂಪಾವತ್ ಜಿಲ್ಲೆಯ ತನಕ್‌ಪುರ ಪ್ರದೇಶದ ಸುಖಿಧಾಂಗ್-ದಂಡಮಿನಾರ್-ರೀತಾ ಸಾಹಿಬ್ ಸಂಪರ್ಕ ರಸ್ತೆಯಲ್ಲಿ ಪಿಕಪ್‌ ವಾಹನದಲ್ಲಿ ಮದುವೆ ಮನೆಯಿಂದ ತಮ್ಮ ಮನೆಗಳಿಗೆ ವಾಪಾಸಾಗುತ್ತಿದ್ದರು. ಈ ವೇಳೆಯಲ್ಲಿ ಪಿಕಪ್ ವಾಹನ ಆಳವಾದ ಕಮರಿಗೆ ಉರುಳಿ ಬಿದ್ದಿದೆ. ಇದರಿಂದಾಗಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯನ್ನು ಕೈಗೊಂಡಿದೆ.

ವಾಹನದಲ್ಲಿ ಒಟ್ಟು 16 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬದುಕಿ ಉಳಿದವರಿಗಾಗಿ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ಪರಿಹಾರ ಕಾರ್ಯಾಚರಣೆಗಾಗಿ ಸ್ಥಳೀಯ ಪೊಲೀಸರ ಜೊತೆಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆ ಕೂಡ ಕೈ ಜೋಡಿಸಿದೆ. ಅಲ್ಲದೇ ಗಾಯಗೊಂಡಿರುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೈಗೊಳ್ಳಲಾಗಿದೆ. ಸಾವನ್ನಪ್ಪಿರುವ ಎಲ್ಲರೂ ಕೂಡ ಮದುವೆ ಸಮಾರಂಭವನ್ನು ಮುಗಿಸಿ ವಾಪಾಸಾಗುತ್ತಿದ್ದರು ಎಂದು ಕುಮಾವೂನ್ ಡಿಐಜಿ ನೀಲೇಶ್ ಆನಂದ್ ಭರ್ನೆ ತಿಳಿಸಿದ್ದಾರೆ.

ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ತಲಾ ತ ಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಅಲ್ಲದೇ ಅಪಘಾತದಲ್ಲಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ : 100 ರೂಪಾಯಿ ಸಾಲ ವಾಪಸ್​ ಕೊಟ್ಟಿಲ್ಲವೆಂದು ಸ್ನೇಹಿತನನ್ನೇ ಕೊಂದ ಭೂಪ ಅರೆಸ್ಟ್​

ಇದನ್ನೂ ಓದಿ : ಭಜರಂಗದಳ ಕಾರ್ಯಕರ್ತ ಹರ್ಷ ಬರ್ಬರ ಹತ್ಯೆ: 144 ಸೆಕ್ಷನ್ ಜಾರಿ, ಶಿವಮೊಗ್ಗದಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಣೆ

(Uttarakhand Accident 14 died :14 people, returning from a wedding, die in accident in Champawat district Uttarakhand)

Comments are closed.