Tokyo Olympics : ಜರ್ಮನಿ ವಿರುದ್ದ ಭಾರತಕ್ಕೆ ಭರ್ಜರಿಗೆ ಗೆಲುವು : ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ

ಟೋಕಿಯೋ : ಭಾರತೀಯ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಬಲಿಷ್ಟ ಜರ್ಮಿನಿ ತಂಡವನ್ನು ಭಾರತವು 5-4 ಅಂತರದಲ್ಲಿ ಸೋಲಿಸಿ ಕಂಚಿನ ಪದಕವನ್ನು ಜಯಿಸಿದೆ.

ಪಂದ್ಯ ಆರಂಭವಾಗುತ್ತಿದ್ದಂತೆಯೇ ಜರ್ಮನಿ ತಂಡ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಎರಡು ನಿಮಿಷಗಳಲ್ಲಿ ತೈಮೂರ್ ಒರುಜ್ ಗೋಲು ಗಳಿಸುವುದರೊಂದಿಗೆ ಜರ್ಮನಿ ಆರಂಭಿಕ ಮುನ್ನಡೆ ಸಾಧಿಸಿದ್ದರು. ಆದರೆ ಭಾರತ ತಂಡ ಮ್ರಂಜಿತ್ ಸಿಂಗ್ ಆಟದ ನೆರವಿನಿಂದ ಟೊಮಾಹಾಕ್ ಶಾಟ್ ನಿಂದ ಗೋಲು ಗಳಿಸಿದರು, ಆದರೆ ರಕ್ಷಣಾತ್ಮಕ ದೋಷಗಳು ಜರ್ಮನಿಯು ಎರಡು ನಿಮಿಷಗಳಲ್ಲಿ ಎರಡು ಗೋಲುಗಳನ್ನು ಗಳಿಸಲು ಕಾರಣವಾಯಿತು.

ಆದರೆ ಭಾರತ ತಂಡ ಎರಡು ಪೆನಾಲ್ಟಿ ಲಾಭವನ್ನು ಚೆನ್ನಾಗಿಯೇ ಬಳಿಸಿಕೊಂಡಿದೆ. ರೂಪಿಂದರ್ ಪಾಲ್ ಸಿಂಗ್ ಮತ್ತು ಸಿಮ್ರಂಜಿತ್ ಸಿಂಗ್ ಅವರು ಎರಡು ಗೋಲ್‌ಗಳನ್ನು ಗಳಿಸುವ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ಭಾರತ ತಂಡ ಬರೋಬ್ಬರಿ 41 ವರ್ಷಗಳ ಬಳಿಕ ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದೆ.

Comments are closed.