Tracking Device :ವಾಹನ ಸವಾರರ ಗಮನಕ್ಕೆ : ವಾಹನಗಳಲ್ಲಿ ಇನ್ಮುಂದೆ ಟ್ರ್ಯಾಕಿಂಗ್ ಡಿವೈಸ್ ಕಡ್ಡಾಯ

ಬೆಂಗಳೂರು : (Tracking Device)ಇನ್ಮುಂದೆ ವಾಹನಗಳನ್ನು ಬೇಕಾಬಿಟ್ಟಿ ಓಡಿಸುವ ಹಾಗಿಲ್ಲ. ಟ್ಯಾಕ್ಸ್ ವಂಚಿಸಿ ಸಂಚರಿಸುವಂತಿಲ್ಲ. ಯಾರ ವಾಹನ ಎಲ್ಲಿದೆ ಅನ್ನೋ ಮಾಹಿತಿ ಇನ್ಮುಂದೆ ಸರಕಾರದ ಬಳಿಯಲ್ಲಿರುತ್ತೆ. ಯಾಕೆಂದ್ರೆ ಖಾಸಗಿ ಹಾಗೂ ಸರಕಾರಿ ವಾಹನಗಳಲ್ಲಿ ಟ್ರ್ಯಾಕಿಂಗ್ ಡಿವೈಸ್ ಅಳವಡಿಕೆ ಮಾಡಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿನ ಸಮಾರು ಆರು ಲಕ್ಷ ವಾಹನಗಳಿಗೆ ಈ ವ್ಯವಸ್ಥೆ ಅಳವಡಿಸಿಕೊಳ್ಳಬೇಕಾಗಿದೆ.

(Tracking Device)ಹೌದು, ವಾಹನಗಳಲ್ಲಿ ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸಬೇಕೆಂದು ಕರ್ನಾಟಕ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದಾಗಿ ಸಾರ್ವಜನಿಕ ಮತ್ತು ಖಾಸಗಿ, ಸಾರಿಗೆ ವಾಹನಗಳಿಗೆ ಸ್ಥಳ ಟ್ರ್ಯಾಕಿಂಗ್ ಸಾಧನಗಳು ಮತ್ತು ತುರ್ತು ಪ್ಯಾನಿಕ್‌ ಬಟನ್ ಗಳನ್ನು ವಾಹನಕ್ಕೆ ಅಳವಡಿಸಬೇಕೆಂದು ಸರ್ಕಾರ ತಿಳಿಸಿದ್ದು,ಕಡ್ಡಾಯವಾಗಿ ವಾಹನಗಳಿಗೆ ಇದನ್ನು ಅಳವಡಿಸಬೇಕು. ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸುವುದರಿಂದ ವಾಹನ ಯಾವ ಸ್ಥಳದಲ್ಲಿ ಇದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಅಪಘಾತಗಳು ಸಂಭವಿಸಿದಾಗ ವಾಹನಗಳನ್ನು ಕಂಡುಹಿಡಿಯುವುದಕ್ಕೆ ಪೋಲಿಸರಿಗೆ ಸಹಾಯಕವಾಗಲಿದೆ ಪರವಾನಗಿಯನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ದ ಕ್ರಮವನ್ನು ತೆಗೆದು ಕೊಳ್ಳುವುದಕ್ಕೆ ಸುಲಭವಾಗುತ್ತದೆ.ತೆರಿಗೆಯನ್ನು ಕಟ್ಟದೆ ಒಡಾಡುವ ವಾಹನ ಚಾಲಕರನ್ನು ಹಿಡಿಯುವಲ್ಲಿ ಇದು ಸಹಾಯ ಮಾಡುತ್ತದೆ. ಮೀತಿ ಮೀರಿದ ವೇಗದಲ್ಲಿ ವಾಹನ ಚಾಲಕರು ಗಾಡಿಯನ್ನು ಚಲಾಯಿಸುತ್ತಿದ್ದರೆ ಮತ್ತುವಾಹನ ಚಾಲಕರಿಂದ ತೊಂದರೆ ಉಂಟಾದಾಗ ಪ್ರಯಾಣಿಕರು ತುರ್ತು ಪ್ಯಾನಿಕ್‌ ಬಟನ್ ಗಳನ್ನು ಬಳಸಬಹುದು.

ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ವಾಹನ ಯೋಜನೆಯಲ್ಲಿ ಟ್ರ್ಯಾಕಿಂಗ್ ಸಾಧನವನ್ನು ಕಡ್ಡಾಯವಾಗಿ ಜಾರಿಗೊಳಿಸಿದೆ. ಕೇಂದ್ರ ಸರ್ಕಾರ ಶೇ 60 ಮತ್ತು ರಾಜ್ಯವು ಶೇ 40 ಹಣವನ್ನು ನೀಡಲಿದ್ದು,ಈ ಯೋಜನೆಗೆ ಸಚಿವ ಸಂಪುಟ 20.36 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ .ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 6.8 ಲಕ್ಷ ವಾಹನಗಳು ಇದರ ವ್ಯಾಪ್ತಿಗೆ ಬರುತ್ತವೆ ಮತ್ತು ಅನುಸ್ಥಾಪನೆಯು ಪೂರ್ಣಗೊಂಡ ನಂತರ ಕೇಂದ್ರ ಸ್ಥಳದಿಂದ ಅವುಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ.ವಾಹನದ ಸ್ಥಳ ಟ್ರ್ಯಾಕಿಂಗ್ ಸಿಸ್ಟಮ್ (VLTS) ಆಧಾರಿತ (GPRS) ಸಾಧನಗಳು ವಾಹನಗಳಿಗೆ ಅಳವಡಿಸುವುದರಿಂದ ವೇಗವನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ ಮತ್ತು ವಾಹನಗಳು ನಿಗದಿತ ಸಮಯದಲ್ಲಿ ಸ್ಥಳವನ್ನು ತಲುಪಿದ ಮಾಹಿತಿಯನ್ನು ತಿಳಿದುಕೊಳ್ಳಬಹುದು .ಇದರಿಂದ ಅನಗತ್ಯ ವಿಳಂಬವನ್ನು ತಡೆಯಬಹುದು ಮತ್ತು ಅನಧಿಕೃತ ವಾಹನಗಳು ಚಲಿಸದಂತೆ ತಡೆಯಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Sudhir Suri Shiv Sena Leader : ಗುಂಡಿಕ್ಕಿ ಶಿವಸೇನಾ ನಾಯಕ ಸುಧೀರ್ ಸೂರಿ ಹತ್ಯೆ :ದೇವಸ್ಥಾನದ ಬಳಿಯಲ್ಲೇ ದುರ್ಘಟನೆ

ಇದನ್ನೂ ಓದಿ:Jugalbandi Movie:ಜುಗಲ್ ಬಂದಿ’ ಮೊದಲ ಹಾಡು ಬಿಡುಗಡೆ- ವೈಕಂ ವಿಜಯಲಕ್ಷ್ಮಿ ದನಿಯಲ್ಲಿ ‘ಇಂಥವರ ಸಂತಾನ ಭಾಗ್ಯ’ ಹಾಡು

ಪರವಾನಗಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ತೆರಿಗೆ ತಪ್ಪಿಸುವವರನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. ರಾಜ್ಯದಲ್ಲಿ ಒಟ್ಟು 71,248 ಬಸ್‌ಗಳು ಮತ್ತು 85,941 ವಾಣಿಜ್ಯ ಸರಕು ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಕ್ಯಾಬ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳಂತಹ 4.51 ಲಕ್ಷ ಖಾಸಗಿ ವಾಹನಗಳು, 16,432 ಶಾಲಾ ಬಸ್‌ಗಳು, 24,701 ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು 1,900 ಪ್ರವಾಸಿ ವಾಹನಗಳಿವೆ ಎಂದು ಅವರು ಹೇಳಿದರು.

karnataka govt new rules tracking device compulsory vehicle

Comments are closed.