Beauty Tips : ಡ್ಯಾಂಡ್ರಫ್‌ ಮುಕ್ತ ನೀಳ ತಲೆಕೂದಲು ಬೇಕೆ ? ಹಾಗಿದ್ದರೆ ಬಳಸಿ ಈ ಮನೆ ಮದ್ದು

Dandruff Free Long Hair : ಇತ್ತೀಚಿನ ದಿನಗಳಲ್ಲಿ ತಲೆಹೊಟ್ಟಿನ ಸಮಸ್ಯೆ ಎಲ್ಲರಲ್ಲೂ ಸಾಮಾನ್ಯವಾಗಿರುತ್ತದೆ. ತಲೆಯಲ್ಲಿ ತಲೆಹೊಟ್ಟು(Beauty Tips) ಅಧಿಕವಾದರೆ ಕೂದಲು ಕಳೆಗುಂದಿ ಕ್ರಮೇಣ ಉದುರುಲು ಶುರುವಾಗುತ್ತದೆ.ಇದಕ್ಕೆ ಕಾರಣ ನಮ್ಮ ಆಹಾರ ಪದ್ದತಿ ಕೂಡ ಹೌದು. ಜಂಕ್‌ ಪುಡ್‌, ಬೇಕರಿ ಪದಾರ್ಥಗಳು ಹಾಗೂ ಎಣ್ಣೆ ಅಂಶವಿರುವ ಆಹಾರವನ್ನು ಹೆಚ್ಚು ತಿನ್ನುವುದರಿಂದ ಕೂಡ ತಲೆಹೊಟ್ಟಿನ ಸಮಸ್ಯೆ ಉಂಟಾಗುತ್ತದೆ. ಹಾಗೆ ಒತ್ತಡ ಹೆಚ್ಚಾದರೂ ಕೂಡ ತಲೆಹೊಟ್ಟು ಹೆಚ್ಚುತ್ತದೆ. ತಲೆಹೊಟ್ಟಿಗೆ ಮನೆಯಲ್ಲೇ ಸುಲಭ ರೀತಿಯಲ್ಲಿ ತಯಾರಿಸಬಹುದಾದ ಮನೆಮದ್ದಿನ ಬಗ್ಗೆ ತಿಳಿಯೋಣ.

ಮೊಸರು ಈರುಳ್ಳಿ ಪೇಸ್ಟ್

ಬೇಕಾಗುವ ಸಾಮಗ್ರಿ :
ಮೊಸರು
ಈರುಳ್ಳಿ

ತಯಾರಿಸುವ ವಿಧಾನ :
ಒಂದು ಮಿಕ್ಸಿ ಜಾರಿಗೆ ದೊಡ್ಡ ಗಾತ್ರದ ಒಂದು ಈರುಳ್ಳಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಈರುಳ್ಳಿ ಪೇಸ್ಟ್‌ನ್ನು ಒಂದು ಬೌಲ್‌ನಲ್ಲಿ ಹಾಕಿಕೊಂಡು ನಂತರ ಅದಕ್ಕೆ ಅರ್ಧ ಕಪ್‌ನಷ್ಟು ಗಟ್ಟಿ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ಆಮೇಲೆ ತಲೆಯ ಭಾಗಕ್ಕೆ ಚೆನ್ನಾಗಿ ಹಂಚಿಕೊಳ್ಳಬೇಕು. ಇದನ್ನು ತಲೆಗೆ ಹಚ್ಚಿಕೊಂಡ ಅರ್ಧ ಅಥವಾ ಒಂದು ಗಂಟೆ ಬಿಟ್ಟು ತಲೆಸ್ನಾನ ಮಾಡಬೇಕು.ಇದ್ದರಿಂದ ತಲೆಹೊಟ್ಟು ನಿವಾರಣೆ ಆಗುವುದಲ್ಲದೇ ಕೂದಲು ಕೂಡ ಸೊಂಪಾಗಿ ಬೆಳೆಯುತ್ತದೆ.ಇದನ್ನು 15 ದಿನಗಳಿಗೊಮ್ಮೆ ಮಾಡಿದರೆ ಸಂಪೂರ್ಣವಾಗಿ ತಲೆಹೊಟ್ಟು ಹೋಗುವುದಲ್ಲದೇ ಕೂದಲು ಮೃದುವಾಗಿ ಚೆನ್ನಾಗಿ ಬೆಳೆಯುತ್ತದೆ.

ಮೆಂತೆ ಹಾಗೂ ಸೊಪ್ಪುಗಳ ಪೇಸ್ಟ್

ಬೇಕಾಗುವ ಸಾಮಗ್ರಿ :
ಮೆಂತೆ ಕಾಳು
ದಾಸವಾಳ ಸೊಪ್ಪು
ಕರಿಬೇವಿನ ಸೊಪ್ಪು
ನೀರು

ತಯಾರಿಸುವ ವಿಧಾನ :
ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಹಿಂದಿನ ದಿನ ನೆನೆಸಿ ಇಟ್ಟಿರುವ ಮೆಂತೆ ಕಾಳುನ್ನು (ಎರಡರಿಂದ ನಾಲ್ಕು ಟೇಬಲ್‌ ಸ್ಪೂನ್‌) ಹಾಗೂ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಪೇಸ್ಟ್‌ ಮಾಡಿಕೊಳ್ಳಬೇಕು. ನಂತರ ದಾಸವಾಳ ಸೊಪ್ಪು ಹಾಗೂ ಕರಿಬೇವಿನ ಸೊಪ್ಪುನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬಿಕೊಳ್ಳಬೇಕು. ನಂತರ ಎರಡನ್ನು ಮಿಕ್ಸ್‌ ಮಾಡಿಕೊಳ್ಳಬೇಕು. ರೆಡಿಯಾದ ಪೇಸ್ಟ್‌ನ್ನು ತಲೆ ಕೂದಲನ್ನು ಬಿಡಿಸಿ ಎಲ್ಲಾ ಭಾಗಕ್ಕೂ ಚೆನ್ನಾಗಿ ಹಚ್ಚಿಕೊಳ್ಳಬೇಕು. ಹೀಗೆ ತಲೆಗೆ ಹಂಚಿಕೊಂಡ ಪೇಸ್ಟ್‌ನ್ನು ಒಂದರಿಂದ ಎರಡು ಗಂಟೆಗಳ ಸಮಯ ಹಾಗೆ ಬಿಡಬೇಕು. ನಂತರ ಶ್ಯಾಂಪೂವನ್ನು ಬಳಸದೇ ಕೂಡ ತಲೆಸ್ನಾನ ಮಾಡಬಹುದಾಗಿದೆ. ಇದ್ದರಿಂದ ಕೂಡ ತಲೆಹೊಟ್ಟು ನಿವಾರಣೆಯಾಗಿ ಸೊಂಪಾಗಿ ಮೃದುವಾದ ತಲೆಕೂದಲು ಬೆಳೆಯುತ್ತದೆ.

ಇದನ್ನೂ ಓದಿ : Beauty Tips : ಚಳಿಗಾಲದಲ್ಲಿ ಮುಖದಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕೇ ? ಹಾಗಾದರೆ ಬಳಸಿ ಈ ಬ್ಯುಟಿ ಟಿಪ್ಸ್

ಇದನ್ನೂ ಓದಿ : Hair Pack : ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ ? ಹಾಗಾದರೆ ಮನೆಯಲ್ಲೇ ಮಾಡಿ ಈ ಹೆರ್‌ ಪ್ಯಾಕ್

ಇದನ್ನೂ ಓದಿ : Home Remedies for Diabetes : ಸಕ್ಕರೆ ಕಾಯಿಲೆ ಸಮಸ್ಯೆಗೆ, ಒಣ ನೆಲ್ಲಿಕಾಯಿ ಪುಡಿಯಲ್ಲಿದೆ ಚಮತ್ಕಾರ

Want Dandruff Free Long Hair ? If so use this home remedy

Comments are closed.