ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದ್ರೀಗ ಬೆಂಗಳೂರಲ್ಲಿ ಆಲ್ಕೋಮೀಟರ್ ಮೂಲಕ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಲಾಗುವುದು ಎಂದು ನಗರ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವೀಕಾಂತೇ ಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು ಒಂದೂವರೆ ವರ್ಷದ ಬಳಿಕ ಸಂಚಾರ ಪೊಲೀಸರು ಆಲ್ಕೋಮೀಟರ್ ಬಳಸಲಿದ್ದಾರೆ. ಹೊಸ ಆಲ್ಕೋಮೀಟರ್ ಗಳ ಮೂಲಕ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ಮರುಚಾಲನೆ ನೀಡಲಾಗುತ್ತಿದೆ. ಕೋವಿಡ್ ಕಾರಣದಿಂದ ಒಂದೂವರೆ ವರ್ಷದಿಂದ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಿಲ್ಲಿಸಲಾಗಿತ್ತು. ಇಂದು ರಾತ್ರಿಯಿಂದಲೇ ರಸ್ತೆಗಿಳಿದು ಸಂಚಾರ ಪೊಲೀಸರಿಂದ ಕಾರ್ಯಾಚರಣೆ ನಡೆಸಲಿದ್ದಾರೆ. ಸಂಚಾರ ಪೊಲೀಸ್ ಇಲಾಖೆವತಿಯಿಂದ ಪ್ರತೀ ಠಾಣೆಗೆ ತಲಾ 10 ಆಲ್ಕೋಮೀಟರ್ ನೀಡಲಾಗಿದೆ. 1 ಆಲ್ಕೋಮೀಟರ್ ನಲ್ಲಿ ಓರ್ವ ವ್ಯಕ್ತಿಗೆ ಮಾತ್ರ ತಪಾಸಣೆ ಮಾಡಲಾಗುತ್ತದೆ ಎಂದಿದ್ದಾರೆ.
1 ಬಾರಿ ಬಳಸಿದ ಆಲ್ಕೋಮೀಟರ್ ಸ್ಯಾನಿಟೈಸ್ ಮಾಡಿ ಶುಚಿಗೊಳಿಸಿ 48 ಗಂಟೆಗಳ ಬಳಿಕ ಮರು ಬಳಕೆ ಮಾಡಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದ್ದಾರೆ.. ಮಾ.2020ರ ಕೊನೆಯ ವಾರ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಿಲ್ಲಿಸಲಾಗಿತ್ತು. ತಜ್ಞರ ಸಲಹೆಯಂತೆ ತಾತ್ಕಾಲಿಕವಾಗಿ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಿಲ್ಲಿಸಲಾಗಿತ್ತು. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಇತ್ತೀಚಿಗೆ ಕೆಲ ಅಪಘಾತಗಳಾಗಿರುವುದನ್ನ ನಾವು ಗಮನಿಸಿದ್ದೇವೆ. ದೇಶದ ಕೆಲ ಮಹಾನಗರಗಳಲ್ಲಿ ಕೋವಿಡ್ 2ನೇ ಅಲೆ ಬಳಿಕ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಶುರುವಾಗಿದೆ ಎಂದಿದ್ದಾರೆ.
ನಾವೂ ಸಹ ತಜ್ಞರ ಸಲಹೆ ಪಡೆದು ತಪಾಸಣೆ ಆರಂಭಿಸಿದ್ದೇವೆ. ಕಳೆದ 2 ವಾರ ಕೂಡಾ ಆಲ್ಕೋ ಮೀಟರ್ ರಹಿತವಾಗಿ ತಪಾಸಣೆ ಮಾಡಲಾಗಿದೆ. ಅನುಮಾನಿತರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದಿನಿಂದ ವಿತ್ ಆಲ್ಕೋಮೀಟರ್ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಲಿದ್ದೇವೆ. ಪ್ರತೀ ಠಾಣೆಗೆ 10 ಬೆಂಗಳೂರು ನಗರದಾದ್ಯಂತ 600 ಆಲ್ಕೋಮೀಟರ್ ಇರಲಿವೆ. ತಪಾಸಣೆ ನಡೆಸುವ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್ ಕಡ್ಡಾಯವಾಗಿರಲಿದೆ. ಆಲ್ಕೋಮೀಟರ್ ಪರೀಕ್ಷೆಗೆ ಇಚ್ಚಿಸದವರಿಗೆ ರಕ್ತ ಪರೀಕ್ಷೆಗೊಳಪಡುವ ಆಯ್ಕೆ ಇರಲಿದೆ. ರಕ್ಷಣಾತ್ಮಕವಾಗಿ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ಈ ಮಾದರಿ ಅನುಸರಿಸಲಾಗುತ್ತಿದೆ. ಪೊಲೀಸರೊಂದಿಗೆ ಘರ್ಷಣೆಗಿಳಿಯದೆ ಸಹಕರಿಸುವಂತೆ ಜಂಟಿ ಆಯುಕ್ತರ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೈಕಿನಲ್ಲಿ ಚಲಿಸುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ : ಐವರು ದುಷ್ಕರ್ಮಿಗಳಿಂದ ಕೃತ್ಯ
ಇದನ್ನೂ ಓದಿ : ಡ್ರಗ್ ಪೆಡ್ಲರ್ ಬುದಾರಾಮ್ ಬಂಧನ, 20 ಲಕ್ಷ ಮೌಲ್ಯದ ಮಾದಕ ವಸ್ತು ವಶ
( Drink and drive test Start Bangalore : RaviKanthe Gowda )