Siddaramaiah: ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಸೇರ್ಪಡೆ !

ಬೆಂಗಳೂರು : ಮಾಜಿ ಸಿಎಂ, ಕಾಂಗ್ರೆಸ್‌ ಹಿರಿಯ ಮುಖಂಡ ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ ಎಂದು ಬಿಜೆಪಿ ಶಾಸಕ ರಾಜೂ ಗೌಡ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಬಿಜೆಪಿಯಲ್ಲಿಯೇ ಇರುತ್ತೇವೆ. ಬಿಜೆಪಿಯಿಂದಲೇ ಗೆದ್ದು ಮಂತ್ರಿಯಾಗುತ್ತೇವೆ. ಕಾಂಗ್ರೆಸ್‌ನಿಂದ ಕೆಲವು ಶಾಸಕರಿಗೆ ಬಂದಿದೆ. ಆದರೆ ಅವರು ಯಾವ ಶಾಸಕರು ಅಂತ ಗೊತ್ತಿಲ್ಲ, ಆದರೆ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆತರಲು ಶತ ಪ್ರಯತ್ನ ಮಾಡುತ್ತಿದ್ದೇನೆ. ನಾನು ಸಕ್ಸಸ್‌ ಆಗುತ್ತೇವೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

ಬಿಜೆಪಿಯಲ್ಲಿ ಇದ್ದವರು ಯಾರೂ ಕೂಡ ಪಕ್ಷ ಬಿಟ್ಟು ಹೋಗಲು ಸಿದ್ದರಿಲ್ಲ. ಆದರೆ ಕಾಂಗ್ರೆಸ್‌ ನಿಂದ ಬಿಜೆಪಿ ಸೇರ್ಪಡೆಗೆ ಸಾಕಷ್ಟು ಜನರ ಸಿದ್ದರಿದ್ದಾರೆ. ಇದ್ದವರಿಗೆ ಅಧಿಕಾರ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಯಾಕೆ ಕರೆತರುತ್ತೀರಿ ಎಂದು ಸಿಎಂ ಬೊಮ್ಮಾಯಿ ಹಾಗೂ ಬಿಎಸ್‌ವೈ ಅವರ ಬಳಿ ಹೇಳಿದ್ದೇವೆ ಎಂದು ರಾಜೂ ಗೌಡ ತಿಳಿಸಿದ್ದಾರೆ.

(Former CM Siddaramaiah joins BJP )

Comments are closed.