Bus Strike : ಮಾರ್ಚ್ 29 ರಂದು ಸಾರಿಗೆ ಮುಷ್ಕರ : ರಸ್ತೆಗಿಳಿಯಲ್ಲ ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್‌

ಬೆಂಗಳೂರು : 2023 ರ ವಿಧಾನಸಭಾ ಚುನಾವಣೆಯನ್ನು ಎದುರಿಸಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಆಡಳಿತಾತ್ಮಕವಾಗಿ ಸಿದ್ಧತೆ ಮಾಡಿಕೊಳ್ತಿರೋ ಬಿಜೆಪಿಗೆ ಪ್ರತಿಭಟನೆಗಳೇ ಮುಳುವಾಗುವ ಲಕ್ಷಣ ದಟ್ಟವಾಗಿದೆ. ಶಿಕ್ಷಕರ ಮುಷ್ಕರದ ಬಳಿಕ‌ ಬಿಸಿಯೂಟ‌ ಮುಷ್ಕರ ಸುಧಾರಿಸಿ ಹೈರಾಣಾಗಿರುವ ಸರ್ಕಾರಕ್ಕೆ ಈಗ ಸಾರಿಗೆ ಇಲಾಖೆಯ ಮುಷ್ಕರ ಗುಮ್ಮ ಕಾಡಲಿದೆ. ಹೌದು, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಂಟಿಸಿ (BMTC ) ಹಾಗೂ ಕೆಎಸ್ಆರ್ಟಿಸಿ (KSRTC ) ನೌಕರರು ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಿದ್ದಾರೆ. ‌ಇದೇ ಮಾರ್ಚ್ 29 ರಂದು ರಾಜ್ಯದಾದ್ಯಂತ ಸಾರಿಗೆ ನೌಕರರ ಮುಷ್ಕರ ನಡೆಯಲಿದೆ.

ಬಳ್ಳಾರಿಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ನಿವಾಸದ ಎದುರು ಹಾಗೂ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಕೆಎಸ್ ಅರ್ ಸಿಟಿ ಹಾಗೂ ಬಿಎಂಟಿಸಿ ಗ್ರಾಹಕರು ಪ್ರೊ ಟೆಸ್ಟ್ ನಲ್ಲಿ ಭಾಗವಹಿಸಲಿದ್ದು, ಎರಡು ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವೇತನ ಪರಿಷ್ಕರಣೆ, ಅಧಿಕಾರಿಗಳ ಕಿರುಕುಳ ತಡೆ ಹಾಗೂ 2021 ರ ಮುಷ್ಕರದಲ್ಲಿ ಭಾಗಿಯಾದವರನ್ನು ವಜಾಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಯಲಿದೆ. ಇನ್ನು ಪ್ರತಿಭಟನೆ ನಡೆಸ್ತಿರೋ ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳೇನು ? ಅನ್ನೋದನ್ನು ಗಮನಿಸೋದಾದರೇ,

  • 2021 ರಲ್ಲಿ ಮುಷ್ಕರದಲ್ಲಿ ಭಾಗಿಯಾದ ಸಾರಿಗೆ ಕಾರ್ಮಿಕರನ್ನ ವಜಾಗೊಳಿಸಲಾಗಿದೆ. ಅವ್ರನ್ನ ಕೂಡಲೇ ಸೇವೆಗೆ ಮರು ನೇಮಕ ಮಾಡಿಕೊಳ್ಳಬೇಕು
  • 01-01-2020 ರಿಂದ ಅನ್ವಯವಾಗುವಂತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ, ಸಮಾನವಾಗಿ ವೇತನ ಪರಿಷ್ಕರಣೆ ಮಾಡಬೇಕು.
  • ಮೇಲಾಧಿಕಾರಿಗಳಿಂದ ಆಗ್ತಿರುವ ಕಿರುಕುಳ, ದೌರ್ಜನ್ಯಗಳು ನಿಲ್ಲಬೇಕು.
  • ಕಿರುಕುಳದಿಂದ ನಿಧನ ಹೊಂದಿದ ಕುಟುಂಬಗಳಿಗೆ ಪರಿಹಾರ ನೀಡಬೇಕು.
  • ಸಾರಿಗೆ ಇಲಾಖೆಯನ್ನ ಖಾಸಗಿಕರಣ ಮಾಡಬಾರದು. ನಿಗಮಗಳ ಆಸ್ತಿಗಳನ್ನ ಅಡಮಾನ ಇಡೋದನ್ನ ನಿಲ್ಲಿಸಬೇಕು
  • ಸರಿಯಾದ ಸಮಯಕ್ಕೆ ವೇತನ ನೀಡಬೇಕು

ಸಾರಿಗೆ ನೌಕರರು ಈ ಮೇಲಿನ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಲಿದ್ದಾರೆ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ . ಎಸ್ ಎಸ್ ಎಲ್ ಸಿ ಪರೀಕ್ಷೆ ಸೇರಿದಂತೆ ರಾಜ್ಯದಾದ್ಯಂತ ವಿವಿಧ ಪರೀಕ್ಷೆಗಳ ಹೊತ್ತಿನಲ್ಲಿ ಸಾರಿಗೆ ಇಲಾಖೆ ನಡೆಸಲಿರುವ ಮುಷ್ಕರ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಲಿದೆ. ಹೀಗಾಗಿ ಸರ್ಕಾರ ಸಾರಿಗೆ ನೌಕರರ ಮುಷ್ಕರ ಕ್ಕೂ ಮುನ್ನವೇ ಮನವೊಲಿಸಿ ಪ್ರತಿಭಟನೆ ನಡೆಸದಂತೆ ನಿಯಂತ್ರಿಸಬೇಕೆಂಬ ಆಗ್ರಹ ಜನಸಮುದಾಯದಿಂದ ವ್ಯಕ್ತವಾಗಿದೆ.

ಇದನ್ನೂ ಓದಿ : ಹಿಜಾಬ್ ಬಿಚ್ಚಿಟ್ಟು ಪರೀಕ್ಷೆಗೆ ಬನ್ನಿ: ವಿದ್ಯಾರ್ಥಿಗಳಿಗೆ ಸರ್ಕಾರದ ಸ್ಪಷ್ಟ ಸೂಚನೆ

ಇದನ್ನೂ ಓದಿ : ಪೆಟ್ರೋಲ್, ಡಿಸೇಲ್ ಆಯ್ತು ಔಷಧಿಗಳ ಸರದಿ : ಎ.1ರಿಂದ ಏರಿಕೆಯಾಗಲಿದೆ ಔಷಧಗಳ ಬೆಲೆ

KSRTC and BMTC Bus Strike on March 29

Comments are closed.