Essential medicines : ಪೆಟ್ರೋಲ್, ಡಿಸೇಲ್ ಆಯ್ತು ಔಷಧಿಗಳ ಸರದಿ : ಎ.1ರಿಂದ ಏರಿಕೆಯಾಗಲಿದೆ ಔಷಧಗಳ ಬೆಲೆ

ಈಗಾಗಲೇ ಜಗತ್ತು ಕೊರೋನಾದಿಂದ ತತ್ತರಿಸಿ ಹೋಗಿದೆ. ಇದಕ್ಕೆ ಭಾರತವೂ ಹೊರತಲ್ಲ.‌ ಮೂರು ವರ್ಷಗಳ ಕಾಲ ಕುಸಿದ ವ್ಯಾಪಾರ ವಹಿವಾಟಿನಿಂದ ಜನರ ಆರ್ಥಿಕ ಸ್ಥಿತಿ ಪಾತಾಳ ತಲುಪಿದೆ. ಹೀಗಿರುವಾಗಲೇ ಬಂದೆರಗುತ್ತಿರುವ ಬೆಲೆ ಏರಿಕೆ ಬಡವರ ಪಾಲಿಗೆ, ಮಧ್ಯಮ ವರ್ಗದವರ ಪಾಲಿಗೆ ಬೆಂಕಿಯಿಂದ ಬಾಣಲೆಗೆ ಎಸೆದಂತ ಸ್ಥಿತಿ ತಂದಿದೆ. ಈಗಾಗಲೇ ಪೆಟ್ರೋಲ್, ಡಿಸೇಲ್, ಬೆಳೆಕಾಳು, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್ ದರ ಏರಿಕೆ ಜಾರಿಯಾಗಿದ್ದು, ಸದ್ಯದಲ್ಲೇ ಕರೆಂಟ್, ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಿದ್ಧವಾಗಿದೆ. ಇದೆಲ್ಲದರ ಜೊತೆ ಈಗ ರೋಗಿಗಳ ಪಾಲಿಗೂ ಶಾಕ್ ಎದುರಾಗಿದ್ದು, ಅಗತ್ಯ ಔಷಧಿಗಳ (Essential medicines) ಬೆಲೆಯೂ ಏರಿಕೆಯಾಗಲಿದೆ.

ಆರೋಗ್ಯ ವರ್ಧಕ ಹಾಗೂ ರೋಗ ನಿವಾಕರ ಔಷಧಿಗಳ ಬೆಲೆ (Essential medicines) ಏರಿಕೆಯಾಗಲಿದೆ. ಆರ್ಥಿಕ ವರ್ಷದ ಆರಂಭದಲ್ಲಿ ಔಷಧಿಗಳ ಬೆಲೆ ಏರಿಕೆ ಜಾರಿಗೆ ಬರಲಿದೆ. 800 ಕ್ಕೂ ಹೆಚ್ಚು ಔಷಧಿಗಳ ಬೆಲೆ ಏರಿಕೆಯಾಗಲಿದ್ದು, ಔಷಧಿಗಳ ಸಗಟು ಸೂಚಂಕ್ಯದ ಆಧಾರದ ಮೇಲೆ 10.76 ರಷ್ಟು ಏರಿಕೆಯಾಗಲಿದೆ. ಇನ್ನು ಈ ಬೆಲೆ ಏರಿಕೆ ಯಾವ್ಯಾವ ಔಷಧಿಗಳನ್ನು ಒಳಗೊಂಡಿದೆ ಎಂಬುದನ್ನು ಗಮನಿಸೋದಾದರೇ,

  • ಆ್ಯಂಟಿ ಬಯೋಟಿಕ್ ಔಷಧಿಗಳು
  • ಉರಿಊತ ನಿವಾರಕ ಔಷಧಿಗಳು
  • ಕಿವಿ- ಮೂಗು, ಗಂಟಲಿನ ಸಂಬಂಧಿತ ಔಷಧಿಗಳು
  • ಆ್ಯಂಟಿ ಸೆಪ್ಟಿಕ್
  • ಆ್ಯಂಟಿ ಫಂಗಲ್ ಔಷಧಿ
  • ನೋವು ನಿವಾರಕ ಔಷಧಿಗಳು

ಇಷ್ಟು ಔಷಧಿಗಳ ಬೆಲೆ ಏರಿಕೆಯಾಗಲಿದ್ದು, ಔಷಧ ಬೆಲೆ ನಿಯಂತ್ರಣ ಕಾಯ್ದೆ 2013 ರ ಪ್ರಕಾರ ರಾಷ್ಟ್ರೀಯ ಔಷಧೀಯ ಪ್ರಾಧಿಕಾರದಿಂದ ಪ್ರಕಟಣೆ ಹೊರಡಿಸಿದೆ. ಹಾಗೇ ಗಮನಸಿದ್ರೇ ಇತ್ತೀಚಿಗೆ ಪ್ರತಿವರ್ಷವೂ ಔಷಧಿಗಳ ಬೆಲೆ ಏರಿಕೆಯಾಗುತ್ತಿದೆ. ಡಗ್ ಕಂಟೆಂಟ್ ಇರುವ ಅಗತ್ಯ ಔಷಧಿಗಳ ಬೆಲೆ ಏರಿಕೆಯಾಗುತ್ತಿದೆ. ಇಷ್ಟು ವರ್ಷಗಳ ಕಾಲ ಔಷಧಿಯ ರಾ ಮೇಟಿರಿಯಲ್ ಚೈನಾದಿಂದ ಆಮದಾಗ್ತಿತ್ತು. ಆದರೆ ಕೊರೊನಾದಿಂದ ಎರಡು ದೇಶಗಳ ಮಧ್ಯೆ ಸಾಮ್ಯತೆ ಕೊರತೆ ಎದುರಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಎರಡು ವರ್ಷದಿಂದ ದೇಶದಲ್ಲಿಯೇ ಔಷಧಿ ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಹೀಗಾಗಿ ಅಗತ್ಯ ಔಷಧಿ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ. ಅಗತ್ಯ ಔಷಧಿ ವಸ್ತುಗಳನ್ನು ಕೇಂದ್ರದ ಸೂಚನೆಯಂತೇ ದೇಶದಲ್ಲೇ ಉತ್ಪಾದನೆ ಮಾಡ್ತಿರೋದರಿಂದ ಬೆಲೆ ಏರಿಕೆ ಯಾಗೋದು ಕಾಮನ್ ಎಂಬ ಮಾಹಿತಿ ನೀಡ್ತಿದ್ದಾರೆ ಬಯೋ ಟೆಕ್ ನ ಮ್ಯಾನೇಜಿಂಗ್ ಡೈರೆಕ್ಟರ್ ದಿವ್ಯಾ ಚಂದ್ರಾಧರ್‌. ಒಟ್ಟಿನಲ್ಲಿ ಇನ್ಮುಂದೇ ಅಗತ್ಯ ಔಷಧಿ ವಸ್ತುಗಳ ಬೆಲೆಯೂ ಗಗನಮುಖಿಯಾಗಲಿದೆ.

ಇದನ್ನೂ ಓದಿ : ಹಿಜಾಬ್ ಬಳಿಕ ಪಠ್ಯ ಫೈಟ್ ಗೆ ವೇದಿಕೆ : ಟಿಪ್ಪು ಸಾಹಸ ಕೈಬಿಡಲು ಸರ್ಕಾರದ ನಿರ್ಧಾರ

ಇದನ್ನೂ ಓದಿ : ಯಾತ್ರಿಕರೇ ಗಮನಿಸಿ! ನಿಮ್ಮ ಟ್ರೈನ್‌ನ ಲೈವ್‌ ಸ್ಟೇಟಸ್‌ ತಿಳಿಯಲು ಗೂಗಲ್‌ ಮ್ಯಾಪ್‌ ಮೊರೆ ಹೋಗಿ

(Essential medicines to get expensive from April)

Comments are closed.