Home Remedy:ಮಂಡಿ,ಸೊಂಟ, ಭುಜ ನೋವು ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ಮನೆಮದ್ದು ಮಾಹಿತಿ

(Home Remedy)ಆಧುನಿಕ ಜೀವನ ಶೈಲಿಯಲ್ಲಿ ಜನರು ಅತಿಹೆಚ್ಚು ದಣಿವು ಮಾಡಿಕೊಂಡು ಕೆಲಸ ಮಾಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಸುಲಭ ವಿಧಾನದಲ್ಲಿ ಯಂತ್ರಗಳನ್ನು ಬಳಸಿ ಕೆಲಸವನ್ನು ಮುಗಿಸಿಕೊಳ್ಳುತ್ತಾರೆ. ಹಾಗಾಗಿ ಸ್ವಲ್ಪ ಹೆಚ್ಚಿಗೆ ಕೆಲಸ ಮಾಡಿದಾಗ ಮಂಡಿ , ಸೋಟ, ಭುಜ, ಬೆನ್ನುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಎಲ್ಲಾ ನೋವುಗಳಿಂದ ಮುಕ್ತಿ ಪಡೆಯುವುದಕ್ಕೆ ಮನೆಯಲ್ಲಿಯೇ ಮದ್ದನ್ನು ತಯಾರಿಸಬಹುದು. ಈ ಮದ್ದು ಹೇಗೆ ತಯಾರಿಸಿಕೊಳ್ಳಬೇಕು ಎಂಬ ಮಾಹಿತಿ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:
ಹೆಸರು ಬೆಳೆ
ಸುಣ್ಣ
ಅರಿಶಿಣ
ಕಲೊಂಜಿ ಎಣ್ಣೆ
ನಿಂಬೆ ಹಣ್ಣಿನ ರಸ

ಮಾಡುವ ವಿಧಾನ

ಒಂದು ಚಮಚ ಹೆಸರು ಬೆಳೆಯನ್ನು ಮೂರರಿಂದ ನಾಲ್ಕು ಗಂಟೆಯವರೆಗೆ ನೀರಲ್ಲಿ ನೆನಸಿಟ್ಟು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಹೆಸರು ಬೆಳೆಯನ್ನು ಬೌಲ್‌ ಗೆ ಹಾಕಿ ಕಾಲು ಚಮಚ ಸುಣ್ಣ, ಒಂದು ಚಮಚ ಅರಿಶಿಣ, ಒಂದು ಚಮಚ ಕಲೊಂಜಿ ಎಣ್ಣೆ( ಈ ಎಣ್ಣೆ ಎಲ್ಲಾ ಅಂಗಡಿಗಳಲ್ಲಿ ದೊರೆಯುತ್ತದೆ) ಹಾಕಿ ಮಿಶ್ರಣ ಮಾಡಿಕೊಂಡು ಕೊನೆಯಲ್ಲಿ ನಿಂಬೆಹಣ್ಣಿನ ರಸ ಹಾಕಿಕೊಂಡು ಪೇಸ್ಟ್‌ ಮಾಡಿಕೊಳ್ಳಬೇಕು. ಇದನ್ನು ಹೇಗೆ ಲೇಪನ ಮಾಡಿಕೊಳ್ಳುವುದು ಎಂಬ ಮಾಹಿತಿಯ ಕುರಿತು ಈ ಕೆಳಗೆ ತಿಳಿಸಲಾಗಿದೆ.

ಪಾತ್ರೆಯಲ್ಲಿ ಬಿಸಿನೀರು ತೆಗೆದುಕೊಂಡು ಒಂದು ಚಮಚ ಪಟ್ಟಕ (ಬಾವಿಗೆ ಹಾಕುವ ಸ್ಪಟಿಕ), ಒಂದು ಚಮಚ ಕಲ್ಲು ಉಪ್ಪು , ಒಂದು ಚಮಚ ಅಡುಗೆ ಸೋಡ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಬಟ್ಟೆಯನ್ನು ತೆಗೆದುಕೊಂಡು ಎಲ್ಲೆಲ್ಲಿ ನೋವಿದೆಯೋ ಶಾಖ ಕೊಟ್ಟುಕೊಂಡು ಇಪ್ಪತ್ತು ನಿಮಿಷ ಬಿಟ್ಟು ತಯಾರಿಸಿಕೊಂಡ ಪೇಸ್ಟ್‌ ಅನ್ನು ಲೇಪನ ಮಾಡಬೇಕು. ಒಂದು ಗಂಟೆಯ ನಂತರ ಈ ಲೇಪನವನ್ನು ಕ್ಲಿನ್‌ ಮಾಡಿಕೊಳ್ಳಬೇಕು. ಹೀಗೆ ವಾರಕ್ಕೆ ಎರಡು ಬಾರಿ ಈ ಫೇಸ್ಟ್‌ ತಯಾರಿಸಿಕೊಂಡು ಹಚ್ಚಿಕೊಳ್ಳುವುದರಿಂದ ಮಂಡಿ, ಸೋಟ, ಭುಜ, ನೋವಿನಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ:Home Remedy For Period Pain: ಋತುಚಕ್ರದಲ್ಲಿ ಕಾಡುವ ಹೊಟ್ಟೆನೋವಿಗೆ ಇಲ್ಲಿದೆ ಮನೆಮದ್ದು

ಇದನ್ನೂ ಓದಿ:Rose Petals Face pack:ಮುಖ ಅಂದವಾಗಿಸಲು ಇಲ್ಲಿದೆ ಗುಲಾಬಿ ಎಸಳಿನ ಫೇಸ್‌ ಪ್ಯಾಕ್‌

ಇದನ್ನೂ ಓದಿ:Rose Petals Face pack:ಮುಖ ಅಂದವಾಗಿಸಲು ಇಲ್ಲಿದೆ ಗುಲಾಬಿ ಎಸಳಿನ ಫೇಸ್‌ ಪ್ಯಾಕ್‌

ಹೆಸರು ಬೆಳೆ
ಅಡುಗೆಯಲ್ಲಿ ಬಳಸುವ ಹೆಸರು ಬೆಳೆಯಿಂದ ಹಲವು ಆರೋಗ್ಯದ ಲಾಭವಿದೆ. ಹೆಸರುಬೆಳೆಯನ್ನು ಸಾವಿರ ವರ್ಷಗಳಿಂದ ಬಳಕೆ ಮಾಡುತ್ತಾ ಬರಲಾಗಿದೆ. ಹೆಸರು ಬೆಳೆಯಲ್ಲಿ ಹಲವು ಬಗೆಯ ಪೋಷಕಾಂಶ ಇರುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ.ಇದನ್ನು ಸೇವನೆ ಮಾಡುವುದರಿಂದ ದೇಹದ ತೂಕ ಇಳಿಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ.

Home Remedy Are you suffering from knee, hip and shoulder pain? Here is the home remedy information

Comments are closed.