Vande Bharat2 : ‘ವಂದೇ ಭಾರತ್‌ 2’ ಹೊಸ ಆವೃತ್ತಿ ಪರಿಚಯಿಸಲಿರುವ ಭಾರತೀಯ ರೈಲ್ವೆ

ಭಾರತೀಯ ರೈಲ್ವೆ (Indian Railway) ಪ್ರಯಾಣಿಕರಿಗೆ ಸುಧಾರಿತ ಮತ್ತು ಉತ್ತಮ ಸೌಲಭ್ಯ ನೀಡಲು ವಂದೇ ಭಾರತ್‌ ರೈಲುಗಳ ‘ವಂದೇ ಭಾರತ್‌ 2 (Vande Bharat2) ’ ಎಂಬ ನವೀಕರಿಸಿದ ಹೊಸ ಅವತಾರವನ್ನು (newer version) ಪರಿಚಿಯಿಸಲಿದೆ ಎಂದು ರೈಲ್ವೆ ಸಚಿವಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹೈ-ಸ್ಪೀಡ್ ರೈಲಿನ ಸುಧಾರಿತ ಆವೃತ್ತಿಯು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಉತ್ತಮ ವೇಗ, ಕಡಿಮೆ ತೂಕ ಮತ್ತು WI-FI ಸೌಲಭ್ಯ, ಬೇಡಿಕೆಯ ಮೇರೆಗೆ 32-ಇಂಚಿನ LCD ಟಿವಿ, ಅಲ್ಟ್ರಾವೈಲೆಟ್ ಏರ್ ಪ್ಯೂರಿಫಿಕೇಶನ್ ಸಿಸ್ಟಮ್‌ನೊಂದಿಗೆ ರೈಲು ವೇಗವರ್ಧಕಗಳನ್ನು ಹೊಂದಿರುತ್ತದೆ. ರೂಫ್ ಮೌಂಟೆಡ್ ಪ್ಯಾಕೇಜ್ ಯುನಿಟ್ (RMPU) ಗಾಳಿಯ ಶುದ್ಧೀಕರಣಕ್ಕಾಗಿ ಹೊಸದಾಗಿ ವಿನ್ಯಾಸಗೊಳಿಸಲಾದ ವ್ಯವಸ್ಥೆಯಾಗಿದೆ.

ಇದನ್ನೂ ಓದಿ : Vi Offers 2GB Extra Data : ಪ್ರತಿ ತಿಂಗಳು ಎಕ್ಟ್ರಾ 2GB ಡಾಟಾ ಕೊಡುಗೆ ನೀಡುತ್ತಿರುವ ವೊಡಾಫೋನ್‌ ಐಡಿಯಾ : ಈ ಕೊಡುಗೆ ಪಡೆಯಲು ಹೀಗೆ ಮಾಡಿ

ಹೊಸ ವಂದೇ ಭಾರತ್ ರೈಲು ಸೆಪ್ಟೆಂಬರ್ 30 ರಿಂದ ಓಡುವ ನಿರೀಕ್ಷೆಯಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ‘ರೈಲಿಗೆ ಸಿಆರ್‌ಎಸ್ ಅನುಮತಿ ದೊರೆತಿದೆ. ಅಂದರೆ, ರೈಲು ಈಗ ಸಂಪೂರ್ಣವಾಗಿ ಓಡಲು ಸಿದ್ಧವಾಗಿದೆ. ಸೆಪ್ಟೆಂಬರ್ 30 ರಂದು ಅಹಮದಾಬಾದ್‌ನಿಂದ ರೈಲು ಫ್ಲ್ಯಾಗ್ ಆಫ್ ಆಗುವ ಸಾಧ್ಯತೆಯಿದೆ’ ಎಂಬುದನ್ನು ವ್ಯಕ್ತಪಡಿಸಿದರು.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ, ಚಂಡೀಗಢದ ಸೆಂಟ್ರಲ್ ಸೈಂಟಿಫಿಕ್ ಇನ್‌ಸ್ಟ್ರುಮೆಂಟ್ಸ್ ಆರ್ಗನೈಸೇಶನ್ (ಸಿಎಸ್‌ಐಒ) ಶಿಫಾರಸಿನ ಮೇರೆಗೆ, ಆರ್‌ಎಂಪಿಯು ಅನ್ನು ಎರಡೂ ತುದಿಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಒಳಗೊಂಡಿರುವ ಗಾಳಿಯನ್ನು ಫಿಲ್ಟರ್ ಮಾಡಿ ಮತ್ತು ಸ್ವಚ್ಛಗೊಳಿಸುತ್ತದೆ.

ಇದಲ್ಲದೆ, ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿದೆ. ಈಗಿರುವ ವಂದೇ ಭಾರತ್ ರೈಲಿನಲ್ಲಿ ಸೀಟಿನ ಹಿಂಬದಿ ಮಾತ್ರ ಚಲಿಸಿದರೆ, ಹೊಸ ರೈಲಿನಲ್ಲಿ ಸಂಪೂರ್ಣ ಸೀಟನ್ನು ಅನುಕೂಲಕ್ಕೆ ತಕ್ಕಂತೆ ಚಲಿಸಬಹುದಾಗಿದೆ.

ಭಾರತೀಯ ರೈಲ್ವೆಯು ಆಗಸ್ಟ್ 15, 2023 ರ ಮೊದಲು 75 ವಂದೇ ಭಾರತ್ ರೈಲುಗಳ ಓಡಾಟ ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಹೊಸ ರೈಲು ಓಡಿಸಿದ ನಂತರ ಉಳಿದ 74 ವಂದೇ ಭಾರತ್ ರೈಲುಗಳ ಉತ್ಪಾದನೆಯನ್ನು ಆದಷ್ಟು ಬೇಗ ಸಿದ್ಧಪಡಿಸಲಾಗುವುದು ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ. ಮೊದಲ 2 – 3 ತಿಂಗಳಲ್ಲಿ 2 ರಿಂದ 3 ವಂದೇ ಭಾರತ್‌ ರೈಲು ಸಿದ್ಧಪಡಿಸಲಾಗುವುದು. ನಂತರ ಉತ್ಪದಾನೆಯ ಪ್ರಮಾಣವನ್ನು 6 ರಿಂದ 7 ಕ್ಕೆ ಹೆಚ್ಚಿಸಲಾಗುವುದು. ಮುಂದಿನ ವರ್ಷದ ಒಳಗೆ 75 ಅಥವಾ ಅದಕ್ಕಿಂತ ಹೆಚ್ಚು ವಂದೇ ಭಾರತ ರೈಲು ಸಿದ್ಧಪಡಿಸುವ ಗುರಿ ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : Mega Blood Donation: ಮೋದಿ ಹುಟ್ಟುಹಬ್ಬಕ್ಕೆ ಮೆಗಾ ರಕ್ತದಾನ ಅಭಿಯಾನ

Vande Bharat2 Indian railways to introduce a newer version of Vande Bharat2

Comments are closed.