Namma clinic: ಆರೋಗ್ಯ ಕ್ರಾಂತಿಗೆ ಕರ್ನಾಟಕ ಸಜ್ಜು: ಒಂದೇ ದಿನ 114 ನಮ್ಮ ಕ್ಲಿನಿಕ್‌ ಆರಂಭ

ಬೆಂಗಳೂರು: (Namma clinic) ದೇಶದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 114 ನಮ್ಮ ಕ್ಲಿನಿಕ್​​ಗಳು ಆರಂಭವಾಗುತ್ತಿದೆ. ರಾಜ್ಯದಲ್ಲಿ ಆರೋಗ್ಯ ಕ್ರಾಂತಿಗೆ ಸರಕಾರ ಸಜ್ಜಾಗುತ್ತಿದ್ದು, 114 ನಮ್ಮ ಕ್ಲಿನಿಕ್‌ ಗಳಿಗೆ ಸಿಎಂ ಬೊಮ್ಮಾಯಿ ಅವರು ಇಂದು ಚಾಲನೆ ನೀಡುತ್ತಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ನಮ್ಮ ಕ್ಲಿನಿಕ್‌ (Namma clinic) ಆರಂಭವಾಗಲಿದ್ದು, ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಇದು ರೋಗಿಗಳಿಗೆ ಹನ್ನೆರಡು ರೀತಿಯ ವಿವಿಧ ಉಚಿತ ಸೇವೆಗಳನ್ನು ನೀಡುವ ವ್ಯವಸ್ಥೆಯಾಗಿದ್ದು, ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ಕ್ಲಿನಿಕ್‌ ಒಂದೇ ಸಮಯಕ್ಕೆ ಉದ್ಘಾಟನೆಗೊಳ್ಳಲಿದೆ. ರಾಜ್ಯದಲ್ಲಿ ಒಟ್ಟು 438 ನಮ್ಮ ಕ್ಲಿನಿಕ್‌ ಸ್ಥಾಪನೆಗೆ ಸರಕಾರ ಸಜ್ಜಾಗಿದ್ದು, ಜನವರಿ ಅಂತ್ಯದೊಳಗೆ 438 ನಮ್ಮ ಕ್ಲಿನಿಕ್‌ ಸಂಪೂರ್ಣವಾಗಿ ಕಾರ್ಯನಿರ್ವಸುತ್ತವೆ.

ಹಾಗಿದ್ದರೆ ಸಿಎಂ ಬೊಮ್ಮಾಯಿ ಚಾಲನೆ ನೀಡುತ್ತಿರುವ ನಮ್ಮ ಕ್ಲಿನಿಕ್‌ ನಲ್ಲಿ ಯಾವೆಲ್ಲ ವ್ಯವಸ್ಥೆ ಇರಲಿದೆ? ಕ್ಲಿನಿಕ್‌ ಹೇಗಿರಲಿದೆ ? ಎಂದು ಈ ಕೆಳಗೆ ತಿಳಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 438 ನಮ್ಮ ಕ್ಲಿನಿಕ್‌ ಸ್ಥಾಪನೆಯಾಗಲಿದ್ದು, ಇಂದು 114 ನಮ್ಮ ಕ್ಲಿನಿಕ್​ಗಳಿಗೆ ಸಿಎಂ ಚಾಲನೆ ಚಾಲನೆ ನೀಡಲಿದ್ದಾರೆ.
ಕ್ಲಿನಿಕ್‌ ನಲ್ಲಿ 12 ವಿವಿಧ ರೀತಿಯ ಆರೋಗ್ಯ ಸೇವೆ ಉಚಿತವಾಗಿ ಸಿಗಲಿದೆ.
BBMP ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್‌ ಗಳಿಗೆ ಚಾಲನೆ ಸಿಗಲಿದೆ.
ದುರ್ಬಲ ವರ್ಗದವರು, ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ.
ಕ್ಲಿನಿಕ್‌ ನಲ್ಲಿ ತಲಾ ಒಬ್ಬ ಡಾಕ್ಟರ್​​​, ನರ್ಸಿಂಗ್‌ ಸ್ಟಾಫ್‌ ಹಾಗೂ ಲ್ಯಾಬ್‌ ಟೆಕ್ನಿಷಿಯನ್‌ ಕಡ್ಡಾಯವಾಗಿ ಇರುತ್ತಾರೆ.
ಡಿ ದರ್ಜೆ ನೌಕರರು ಸೇರಿ ಹಲವು ನುರಿತ ಸಿಬ್ಬಂದಿಗಳ ನಿಯೋಜನೆಯಾಗಲಿದೆ.
ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿಗೆ ಸಮಗ್ರ ಆರೈಕೆ ಸಿಗಲಿದೆ.
ಬಾಲ್ಯ ಮತ್ತು ಹದಿಹರಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣ, ಗರ್ಭ ನಿರೋಧಕ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಸೇವೆ, ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ, ಸಕ್ಕರೆ ಕಾಯಿಲೆ, ದೀರ್ಘಾವಧಿ ಕಾಯಿಲೆಗಳು, ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌, ಬಾಯಿಯ ಆರೋಗ್ಯ ಸಮಸ್ಯೆಗಳು ಮತ್ತು ಸೇವೆಗಳು, ಕಣ್ಣಿನ ತಪಾಸಣೆ, ಮೆಂಟಲ್‌ ಹೆಲ್ತ್‌ಗೆ ಸಂಬಂಧಿಸಿದ ರೆಫರಲ್​ ಸೇವೆಗಳು ನಮ್ಮ ಕ್ಲಿನಿಕ್‌ ನಲ್ಲಿ ಲಭ್ಯವಿರುತ್ತದೆ.
ನಮ್ಮ ಕ್ಲಿನಿಕ್‌ ನಲ್ಲಿ ಉಚಿತ ತಪಾಸಣೆ ಹಾಗೂ ಉಚಿತ ಔಷಧ ವ್ಯವಸ್ಥೆ ಕೂಡ ಇರುತ್ತದೆ. ಹಾಗೂ 14 ಲ್ಯಾಬ್​​​, ಟೆಲಿ ಕನ್ಸಲ್ಟೇಷನ್‌ ಸರ್ವೀಸ್‌ ಇರಲಿದೆ.
ಪ್ರತಿ ಸೋಮವಾರದಿಂದ ಶನಿವಾರದ ತನಕ ನಮ್ಮ ಕ್ಲಿನಿಕ್‌ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ : BBMP master plan: 9 ಮಾಲ್‌ ನಿಂದ 50 ಕೋಟಿ ತೆರಿಗೆ ವಂಚನೆ: ಟ್ಯಾಕ್ಸ್ ವಸೂಲಿಗೆ ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್

ಯಾವೆಲ್ಲ ರಾಜ್ಯದಲ್ಲಿ ಎಷ್ಟೆಷ್ಟು ನಮ್ಮ ಕ್ಲಿನಿಕ್ ಇರಲಿದೆ?
ಇದು ಒಟ್ಟು 150 ಕೋಟಿ ರೂಪಾಯಿ ಮೊತ್ತದ ಯೋಜನೆಯಾಗಿದ್ದು, ಬಾಗಲಕೋಟೆ 18, ಬಳ್ಳಾರಿ 11, ವಿಜಯನಗರ 6, ಬೆಳಗಾವಿ 21,ಬೆಂಗಳೂರು ಗ್ರಾಮಾಂತರ 9, ಬೀದರ್‌ 6, ಚಾಮರಾಜನಗರ 3, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 4, ಚಿತ್ರದುರ್ಗ 1, ದಕ್ಷಿಣ ಕನ್ನಡ 12, ದಾವಣಗೆರೆ 1, ಧಾರವಾಡ 6, ಗದಗ 11, ಹಾಸನ 5, ಹಾವೇರಿ 5, ಕಲಬುರಗಿ 11, ಕೊಡಗು 1, ಕೋಲಾರ 3, ಕೊಪ್ಪಳ 3, ಮಂಡ್ಯ 4, ಮೈಸೂರು 6, ರಾಯಚೂರು 8, ರಾಮನಗರ 3, ತುಮಕೂರು 10, ಉಡುಪಿ 10, ಉತ್ತರ ಕನ್ನಡ 10, ವಿಜಯಪುರ 10, ಯಾದಗಿರಿಯಲ್ಲಿ 3 ಕ್ಲಿನಿಕ್ ಗಳು ಇರಲಿದೆ. ​​

(Namma clinic) This is the first time in the country that 114 of our clinics are starting on a single day. The government is gearing up for a health revolution in the state, CM Bommai is inaugurating 114 of our clinics today.

Comments are closed.