India Vs Bangladesh test: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಟೀಮ್ ಇಂಡಿಯಾದಲ್ಲಿ ತ್ರಿವಳಿ ಸ್ಪಿನ್ನರ್ಸ್

ಛಟ್ಟೋಗ್ರಾಮ್:(India Vs Bangladesh test) ಆತಿಥೇಯ ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್ (India Vs Bangladesh test series) ಪಂದ್ಯ ಛಟ್ಟೋಗ್ರಾಮ್’ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಆರಂಭಗೊಂಡಿದ್ದು, ಟಾಸ್ ಗೆದ್ದ ಭಾರತ ತಂಡದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಎಡಗೈ ಹೆಬ್ಬೆರಳ ಗಾಯದ ಕಾರಣ ಟೆಸ್ಟ್ ಸರಣಿಗೆ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಿರುವ ಕಾರಣ, ಉಪನಾಯಕ ಕೆ.ಎಲ್ ರಾಹುಲ್ (KL Rahul) ಟೀಮ್ ಇಂಡಿಯಾ ಸಾರಥ್ಯ ವಹಿಸಿದ್ದಾರೆ. ಟಾಸ್ ಗೆದ್ದ ಕೆ.ಎಲ್ ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, “ದೊಡ್ಡ ಮೊತ್ತ ಕಲೆ ಹಾಕಿ ಬಾಂಗ್ಲಾದೇಶ ಮೇಲೆ ಒತ್ತಡ ಹೇರುವ ರಣತಂತ್ರ ಹೊಂದಿದ್ದೇವೆ” ಎಂದು ಟಾಸ್ ವೇಳೆ ರಾಹುಲ್ ಹೇಳಿದ್ದಾರೆ.

ಪ್ರಥಮ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಮೂವರು ಸ್ಪಿನ್ನರ್’ಗಳೊಂದಿಗೆ ಕಣಕ್ಕಿಳಿದಿದೆ. ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣ ಸ್ಪಿನ್ನರ್’ಗಳಿಗೆ ನೆರವು ನೀಡುವ ಕಾರಣ ಭಾರತ ತಂಡ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್, ಎಡಗೈ ಸ್ಪಿನ್ ಅಲ್ರೌಂಡರ್ ಅಕ್ಷರ್ ಪಟೇಲ್ ಮತ್ತು ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಂಡಿದೆ. ಮೂವರು ಸ್ಪಿನ್ನರ್’ಗಳು ಇಬ್ಬರು ವೇಗಿಗಳೊಂದಿಗೆ ಭಾರತ ಆಡುತ್ತಿದ್ದು, ವೇಗದ ಬೌಲರ್’ಗಳ ಕೋಟಾದಲ್ಲಿ ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:IPL 2023 Auction Player list : ಐಪಿಎಲ್ ಹರಾಜು: ಆಟಗಾರರ ಅಂತಿಮ ಪಟ್ಟಿ ಪ್ರಕಟ, ಫೈನಲ್ ಲಿಸ್ಟ್’ನಲ್ಲಿ ಒಟ್ಟು 405 ಆಟಗಾರರು

ಇದನ್ನೂ ಓದಿ:Pro kabaddi league: ಸೆಮಿಫೈನಲ್ ಪ್ರವೇಶಿಸಿದ ಬೆಂಗಳೂರು ಬುಲ್ಸ್, ತಮಿಳ್ ತಲೈವಾಸ್

ಏಕದಿನ ಸರಣಿಯಿಂದ ಹೊರ ಬಿದ್ದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ತಂಡಕ್ಕೆ ಮರಳಿದ್ದು ಟೀಮ್ ಇಂಡಿಯಾ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ XI
1.ಕೆ.ಎಲ್ ರಾಹುಲ್ (ನಾಯಕ), 2.ಶುಭಮನ್ ಗಿಲ್, 3.ಚೇತೇಶ್ವರ್ ಪೂಜಾರ, 4.ವಿರಾಟ್ ಕೊಹ್ಲಿ, 5.ಶ್ರೇಯಸ್ ಅಯ್ಯರ್, 6.ರಿಷಭ್ ಪಂತ್ (ವಿಕೆಟ್ ಕೀಪರ್), 7.ರವಿಚಂದ್ರನ್ ಅಶ್ವಿನ್, 8.ಅಕ್ಷರ್ ಪಟೇಲ್, 9.ಕುಲ್ದೀಪ್ ಯಾದವ್, 10.ಉಮೇಶ್ ಯಾದವ್, 11.ಮೊಹಮ್ಮದ್ ಸಿರಾಜ್.

English Sports News Click Here

India Vs Bangladesh test India won the toss and elected to bat, triple spinners in Team India

Comments are closed.