Namma Metro : ಶಾಪಿಂಗ್ ಮಾಲ್ ಗಳಾಗ್ತಿವೇ ಬೆಂಗಳೂರಿನ ಮೆಟ್ರೋ ಸ್ಟೇಶನ್ ಗಳು

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಆರಂಭವಾಗಿರೋ ನಮ್ಮ‌ಮೆಟ್ರೋ (Bangalore Namma Metro )ಈಗ ಸಿಲಿಕಾನ್ ಸಿಟಿ ಮಂದಿಯ ಜೀವನಾಡಿಯಾಗಿದೆ. ರಸ್ತೆಯಲ್ಲಿ ಗಂಟೆಗಟ್ಟಲೇ ನಿಂತು ಹೈರಾಣಾಗುತ್ತಿದ್ದ ಮಂದಿಗೆ ನಮ್ಮ ಮೆಟ್ರೋ ಮಾಯಾ ಜಾದೂವಿನಂತ ಸಂಚಾರ ಹಾದಿ ಕಲ್ಪಿಸಿದ್ದು ಐಟಿ ಮಂದಿಯ ಮನಗೆದ್ದಿದೆ. ಈ ಮಧ್ಯೆ ಜನರಿಗೆ ನಮ್ಮ ಮೆಟ್ರೋ ವನ್ನು ಇನ್ನಷ್ಟು ಹತ್ತಿರಕ್ಕೆ ತರಲು ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಗೆ ಸಿದ್ಧತೆ ನಡೆದಿದೆ. ನಮ್ಮ ಮೆಟ್ರೋ ವನ್ನು ಇನ್ನಷ್ಟು ಹೈಟೆಕ್ ಹಾಗೂ ವಿದೇಶಿ‌ ಮಾದರಿಯಲ್ಲಿ ಆಭಿವೃದ್ಧಿಪಡಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.

ವಿದೇಶದಲ್ಲಿರುವಂತೆ ಮೆಟ್ರೋ ನಿಲ್ದಾಣಗಳಲ್ಲೇ ಮಿನಿ ಶಾಪಿಂಗ್ ಮಳಿಗೆಗಳನ್ನು ತೆರೆಯಲು ಚಿಂತನೆ ನಡೆದಿದೆ. ಮೆಟ್ರೋ ನಿಲ್ದಾಣವನ್ನು (Bangalore Namma Metro ) ಇನ್ಮುಂದೆ ಮಿನಿ ಶಾಪಿಂಗ್ ಸ್ಪಾಟ್ ಗಳಾಗಿ ಅಭಿವೃದ್ಧಿ ಪಡಿಸಲು ಆಕ್ಷ್ಯನ್ ಪ್ಲ್ಯಾನ್ ಸಿದ್ಧವಾಗುತ್ತಿದೆ. ನಮ್ಮ ಮೆಟ್ರೋ ಆದಾಯ ಹೆಚ್ಚಿಸಲು ಹಾಗೂ ಸಾರ್ವಜನಿಕರ ಸೇವೆಗೆ BMRCL ಈ ಹೊಸ ಪ್ಲ್ಯಾನ್ ಮಾಡಿದ್ದು, ನಗರದ ಮೆಟ್ರೋ ಸ್ಟೇಷನ್‌ಗಳಲ್ಲಿ ಸಲೂನ್, ಮೆಡಿಕಲ್ ಸ್ಟೋರ್, ಸ್ಟೇಷನರಿ ಅಂಗಡಿಗಳು ಇತ್ಯಾದಿ ಓಪನ್ ಮಾಡಲು ಚಿಂತನೆ ನಡೆದಿದೆ.

ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳ (Namma Metro) ಕೆಳಗಿರುವ ಖಾಲಿ ಜಾಗದಲ್ಲಿ ಮಿನಿ ಅಂಗಡಿಗಳನ್ನು ತೆರೆಯಲಾಗುತ್ತದೆ.‌ ಇದನ್ನು ಟೆಂಡರ್ ಮೂಲಕ ಹರಾಜು ಹಾಕಲು ಬಿಎಂಆರ್ ಸಿಎಲ್ ಮುಂದಾಗಿದೆ. ಈಗಾಗಲೇ ಈ ಬಗ್ಗೆ ಚಿಂತನೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ನಮ್ಮ ಮೆಟ್ರೋ ಸರ್ಕಾರದಿಂದಲೂ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ. ಮಿನಿ ಶಾಪಿಂಗ್ ಅಂಗಡಿಗಳನ್ನು ಸ್ಥಾಪಿಸಲು BMRCL ನಿಂದ ಟೆಂಡರ್ ಗೆ ಆಹ್ವಾನಿಸಿದೆ. ಸಾಕಷ್ಟು ಅರ್ಜಿಗಳು ಕೂಡ ಸಲ್ಲಿಕೆಯಾಗಿದೆ. ಈ ಯೋಜನೆ ಜಾರಿಗೂ ಮುನ್ನ ನಮ್ಮ ಮೆಟ್ರೋ, ನಗರದ 2 ಸಾವಿರ ಪ್ರಯಾಣಿಕರನ್ನು ಸರ್ವೇ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ. ಈ ಸರ್ವೇಯಲ್ಲಿ ಟೀ ಕಾಫಿ ಶಾಪ್, ಮೆಡಿಕಲ್, ಹೇರ್ ಕಟ್ಟಿಂಗ್ ಸಲೂನ್ ಹಾಗೂ ಚಾಟ್ಸ್ ಅಂಗಡಿಗಳಿಗೆ ಬೇಡಿಕೆ ಬಂದಿದೆಯಂತೆ.

ಹೀಗಾಗಿ ಈ ಇಷ್ಟೂ ಅಂಗಡಿಗಳನ್ನು ಕಡ್ಡಾಯವಾಗಿ ಓಪನ್ ಮಾಡಲು ನಿರ್ಧರಿಸಿರುವ BMRCL ಪ್ರಾಯೋಗಿಕವಾಗಿ ನಗರದ ಆರು ಮೆಟ್ರೋ ಸ್ಟೇಷನ್ ಗಳಲ್ಲಿ ಪೈಲಟ್ ಅಂಗಡಿಗಳ ಸ್ಥಾಪನೆಗೆ ಮುಂದಾಗಿದೆ. ಇಂದಿರಾನಗರ, ಮೆಜೆಸ್ಟಿಕ್, ಎಂಜಿ ರಸ್ತೆ, ಬೈಯಪ್ಪನಹಳ್ಳಿ ಸೇರಿದಂತೆ ಆರು ಸ್ಟೇಷನ್ ನಲ್ಲಿ ಆರಂಭಿಕವಾಗಿ ಸ್ಥಾಪನೆಯಾಗಲಿದ್ದು, ಬಳಿಕ ನಂತರ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಮೆಟ್ರೋ ನಿಲ್ದಾಣದಲ್ಲಿ (Bangalore Namma Metro ) ಶಾಪಿಂಗ್ ಹಬ್ ಗಳು ತೆರೆಯಲಿದೆ.

ಇದನ್ನೂ ಓದಿ : Namma metro : ಮೆಟ್ರೋದಿಂದ ಕಡಿಮೆಯಾಯ್ತು ಬೆಂಗಳೂರು ನಗರದ ವಾಯುಮಾಲಿನ್ಯ

ಇದನ್ನೂ ಓದಿ : High Court : ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ಗೆ ಹೈಕೋರ್ಟ್ ತರಾಟೆ

( Bangalore Namma Metro stations are becoming shopping malls)

Comments are closed.