first steel bridge : 108 ವಿಘ್ನದ ಬಳಿಕ ರಾಜ್ಯದ ಮೊದಲ ಸ್ಟೀಲ್ ಬ್ರಿಡ್ಜ್ ನಲ್ಲಿ ಏಕಮುಖ ಸಂಚಾರ ಆರಂಭ

ಬೆಂಗಳೂರು : (first steel bridge)ರಾಜ್ಯದ ಮೊದಲ ಸ್ಟೀಲ್ ಬ್ರಿಡ್ಜ್ ಖ್ಯಾತಿಯ ಶಿವಾನಂದ್ ಉಕ್ಕಿನ ಮೇಲ್ಸೇತುವೆ ಬರೋಬ್ಬರಿ ಐದು ವರ್ಷಗಳ ಕಾಮಗಾರಿ ಬಳಿಕ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ. ಬಿಬಿಎಂಪಿ ಪ್ರಯೋಗಾರ್ಥವಾಗಿ ಶಿವಾನಂದ್ ಮೇಲ್ಸೇತುವೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು ವಾಹನ ಸವಾರರು ಟ್ರಾಫಿಕ್ ಫ್ರೀ ಸಂಚಾರದಿಂದ ಖುಷಿಯಾಗಿದ್ದಾರೆ.

ಶಿವಾನಂದ ಸ್ಟೀಲ್ ಬ್ರಿಡ್ಜ್ ನಲ್ಲಿ ಸದ್ಯಕ್ಕೆ ಒನ್ ವೇ ಸಂಚಾರ ಅಂದ್ರೇ , ಶೇಷಾದ್ರಿಪುರಂನಿಂದ ರೇಸ್ ಕೋರ್ಸ್ ಕಡೆಗೆ ಹೋಗಲು ಮಾತ್ರ ಅವಕಾಶ ಕೊಡಲಾಗಿದೆ. ಒಂದು ಕಡೆಯಲ್ಲಿ ಬೈಕ್ ಸೇರಿದಂತೆ ಎಲ್ಲ‌ಮಾದರಿಯ ವಾಹನಗಳ ಸಂಚಾರ ಕ್ಕೂ ಅವಕಾಶ ಕಲ್ಪಿಸಲಾಗಿದೆ. 39 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸ್ಟೀಲ್ ಬ್ರಿಡ್ಜ್ ರಾಜ್ಯದ ಮೊದಲ ಉಕ್ಕಿನ ಸೇತುವೆ ಎಂಬ ಖ್ಯಾತಿ ಗಳಿಸಿಕೊಂಡಿದೆ. 492 ಮೀಟರ್ ನ ಈ ಬ್ರಿಡ್ಜ್ ನಿರ್ಮಾಣ ಕಾರ್ಯ 2017 ರಲ್ಲಿ ಆರಂಭಗೊಂಡಿತ್ತು. ಆದರೆ ನಾನಾ ಕಾರಣಗಳಿಂದ ಈ ಬ್ರಿಡ್ಜ್ ನಿರ್ಮಾಣ ಕಾರ್ಯದಲ್ಲಿ ವಿಳಂಬ ಉಂಟಾಗಿತ್ತು. ಸದ್ಯ ಸೇತುವೆ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದು, ಐದು ವರ್ಷದ ಬಳಿಕ ಸಂಚಾರಕ್ಕೆ ಸ್ವಾತಂತ್ರ್ಯೋತ್ಸವದಂದು ಚಾಲನೆ ನೀಡಲಾಗಿದೆ. ರೇಸ್ ಕೋರ್ಸ್ ನಿಂದ ಶೇಷಾದ್ರಿಪುರಂ ಕಡೆಗೆ ರ್ಯಾಂಪ್ ಡೌನ್ ಕಾಮಗಾರಿ ನಡೆಯುತ್ತಿರೋದರಿಂದ ೧೦ ದಿನಗಳ ಕಾಲ ಒಂದೇ ಭಾಗದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.


ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಬಿಬಿಎಂಪಿಯ ಹಾದಿ ಸುಲಭವಾಗಿರಲಿಲ್ಲ. ಮೊದಲು ಭೂ ಸ್ವಾಧೀನದ ಕಾರಣಕ್ಕೆ ವಿರೋಧ ವ್ಯಕ್ತವಾಯಿತು. ಬಳಿಕ ಈ ಬ್ರಿಡ್ಜ್ ನಿರ್ಮಾಣಕ್ಕಾಗಿ ತೆರವು ನಡೆಸಿದ್ದಕ್ಕಾಗಿ ಪ್ರಕರಣ ನ್ಯಾಯಾಲದ ಮೆಟ್ಟಿಲೇರಿತ್ತು. ಕೊನೆಗೆ ಬಿಬಿಎಂಪಿ ಆಯ್ ಆಯ್ ಎಸ್ ಸಿ ಕ್ಲೀನ್ ಚಿಟ್ ಪಡೆದುಕೊಂಡು ಸೇತುವೆಯನ್ನು ಬಳಕೆಗೆ ತೆರೆಯಲಾಗಿದೆ. ಬಿಬಿಎಂಪಿ ಯೋಜನೆಯನ್ನು 9 ತಿಂಗಳಲ್ಲಿ 19 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ಸಿದ್ಧಪಡಿಸಿತ್ತು. ಆದರೆ ಪ್ರಸ್ತುತ ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಬರೋಬ್ಬರಿ 39 ಕೋಟಿ ರೂಪಾಯಿ ವೆಚ್ಚ ಮಾಡಿದೆ.

ಈ ಸೇತುವೆ ಬಳಕೆಗೆ ಮುಕ್ತವಾದಲ್ಲಿ ಜನರಿಗೆ ರೇಸ್ ಕೋರ್ಸ್ ಸರ್ಕಲ್, ವಿಧಾನಸೌಧ,ಮಲ್ಲೇಶ್ವರಂ ಸೇರಿದಂತೆ ಹಲವು ಏರಿಯಾಗಳಿಗೆ ಸಂಚಾರ ದಟ್ಟನೆ ಇಲ್ಲದೇ ಪ್ರಯಾಣ ಬೆಳೆಸಲು ನೆರವಾಗಲಿದೆ. ಇನ್ನು ಸೇತುವೆ ಸಂಪೂರ್ಣ ಕಾರ್ಯಾರಂಭ ಮಾಡಿದ ಬಳಿಕ ಬಿಬಿಎಂಪಿ ಸೇತುವೆ ಕೆಳಭಾಗದಲ್ಲಿರೋ ಸರ್ವೀಸ್ ರಸ್ತೆಗಳನ್ನು ದುರಸ್ಥಿಗೊಳಿಸಲು ತೀರ್ಮಾನಿಸಿದೆ. ಒಟ್ಟಿನಲ್ಲಿ ನೊರೆಂಟು ಹೋರಾಟದ ಬಳಿಕ ಬೆಂಗಳೂರಿಗರಿಗೆ ಸ್ಟಿಲ್ ಬ್ರಿಡ್ಜ್ ಬಳಕೆಗೆ ದಕ್ಕಿದಂತಾಗಿದೆ.

ಇದನ್ನೂ ಓದಿ : BS Yeddyurappa : ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಸ್ಥಾನ: ರಾಜಾಹುಲಿ ಮನವೊಲಿಕೆಗೆ ಹೈಕಮಾಂಡ್ ಹೊಸ ತಂತ್ರ

ಇದನ್ನೂ ಓದಿ : ಶಾಲೆಯಲ್ಲಿ ಗಣೇಶೋತ್ಸವಕ್ಕೆ ವಿರೋಧ: ಸರ್ಕಾರದ ನಿಲುವಿನ ಬಗ್ಗೆ ಶಿಕ್ಷಣ ಸಚಿವರ ಸ್ಪಷ್ಟನೆ

One-way traffic started on the first steel bridge of Karnataka Sivananda Circle Bangalore

Comments are closed.