Exclusive : ಶಾಲೆಯಲ್ಲಿ ಗಣೇಶೋತ್ಸವಕ್ಕೆ ವಿರೋಧ: ಸರ್ಕಾರದ ನಿಲುವಿನ ಬಗ್ಗೆ ಶಿಕ್ಷಣ ಸಚಿವರ ಸ್ಪಷ್ಟನೆ

ಬೆಂಗಳೂರು : (Ganeshotsava in schools Controversy) ರಾಜ್ಯದಲ್ಲಿ ಈಗಾಗಲೇ ಕೋಮುಸಾಮರಸ್ಯ ಕದಡುವಂತಹ ನೂರಾರು ಘಟನೆಗಳು ನಡೆಯುತ್ತಲೇ ಇದೆ.‌ ಇದರ ಬೆನ್ನಲ್ಲೇ ಈಗಾಗಲೇ ಹಿಜಾಬ್ ಸೇರಿದಂತೆ ಹಲವು ಕಾರಣಕ್ಕೆ ಸಂಘರ್ಷದ ಬೀಡಾಗಿದ್ದ ಶಾಲಾ‌ಕಾಲೇಜುಗಳು ಮತ್ತೊಮ್ಮೆ ವಿವಾದದ ಕೇಂದ್ರವಾಗೋ ಸಾಧ್ಯತೆ ಇದೆ. ಹೌದು ಶಾಲಾ ಕಾಲೇಜುಗಳಲ್ಲಿ ಗಣೇಶೋತ್ಸವ ಆಚರಣೆಗೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಲು ಸಿದ್ಧವಾಗುತ್ತಿವೆ.

ಹೌದು ತಿಂಗಳಾಂತ್ಯಕ್ಕೆ ಗಣೇಶ ಚತುರ್ಥಿ ಹಬ್ಬವಿದೆ. ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಶಾಲಾ ಕಾಲೇಜುಗಳಲ್ಲೂ ಅದ್ದೂರಿಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ನೆರವೇರಿಸುವ ಪದ್ಧತಿ ಇದೆ. ಆದರೆ ಈ ವರ್ಷ ಹಿಜಾಬ್, ಹಲಾಲ ಹಾಗೂ ಧರ್ಮವ್ಯಾಪಾರ ಸಂಘರ್ಷದ ಬಳಿಕ ಶಾಲಾ ಕಾಲೇಜುಗಳಲ್ಲಿ ಯಾವ ಕಾರಣಕ್ಕೂ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಎಸ್ಡಿಪಿಐ ಸೇರಿದಂತೆ ಹಲವು ಸಂಘಟನೆಗಳು ಆಗ್ರಹಿಸಿವೆ.

ಇದಕ್ಕೆ ಹೈಕೋರ್ಟ್ ಆದೇಶವನ್ನೇ ಉಲ್ಲೇಖಿಸುತ್ತಿರುವ ಸಂಘಟನೆಗಳು ಹೈಕೋರ್ಟ್ ಹಿಜಾಬ್ ಸಂದರ್ಭದಲ್ಲೇ ಶಾಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಸಂಗತಿಗಳನ್ನು ಆಚರಿಸುವಂತಿಲ್ಲ. ಧಾರ್ಮಿಕ ಕುರುಹುಗಳನ್ನು ಬಳಸುವಂತಿಲ್ಲ ಎಂದು ಆದೇಶಿಸಿದೆ ಎಂದು ವಾದಿಸುತ್ತಿದ್ದಾರೆ. ಹೀಗಾಗಿ ನಿಧಾನಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಧರ್ಮಸಂಘರ್ಷ ತಲೆದೋರುವ ಸಾಧ್ಯತೆ ದಟ್ಟವಾಗಿದೆ.

ಶಾಲಾ ಕಾಲೇಜಿನ ಒಳಗಡೆ ಹಿಜಾಬ್ ಧರಿಸಲು ಹೈಕೋರ್ಟ್ ಅವಕಾಶ ನೀಡಿರಲಿಲ್ಲ. ಮಾತ್ರವಲ್ಲ ಧಾರ್ಮಿಕ ಸಂಗತಿಗಳನ್ನು ಶಾಲೆಯಿಂದ ದೂರವಿಡುವಂತೆಯೂ ಸೂಚನೆ ನೀಡಿತ್ತು. ಇದೇ ಆದೇಶವನ್ನು ಮುಂದಿಟ್ಟುಕೊಂಡು ಸಂಘಟನೆಗಳು ಒತ್ತಾಯಿಸುತ್ತಿದ್ದಾರೆ. ಆದರೆ ಈ ವಿವಾದಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿದ್ದು, ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಸರ್ಕಾರದ ನಿಲುವು ಏನು ಇಲ್ಲ. ನಾವು ಶಾಲೆಗಳಲ್ಲಿ ಗಣೇಶ್ ಮೂರ್ತಿ ಸ್ಥಾಪನೆ ಮಾಡಲು ಸೂಚಿಸಿಲ್ಲ. ಮೂರ್ತಿ ಸ್ಥಾಪನೆಗೆ ವಿರೋಧವೂ ಇಲ್ಲ. ಅದು ಆಯಾ ಶಾಲೆಗಳಿಗೆ ಬಿಟ್ಟ ವಿಚಾರ.

ಇನ್ನೊಂದು ಗಮನಿಸಬೇಕಾದ ವಿಚಾರ ಎಂದರೇ ಗಣೇಶೋತ್ಸವ ಯಾವುದೇ ಧಾರ್ಮಿಕ ಆಚರಣೆಯಲ್ಲ. ಇದು ಸ್ವಾತಂತ್ರ್ಯೋತ್ಸವದ ಕಾಲದಿಂದಲೂ ಜನರನ್ನು ಸಂಘಟಿಸಲು ಬಳಸುತ್ತಿದ್ದ ಒಂದು ಉತ್ಸವದ ಮಾದರಿ. ಹೀಗಾಗಿ ಗಣೇಶೋತ್ಸವವನ್ನು ಧಾರ್ಮಿಕ ಆಚರಣೆಯಂದು ಪರಿಗಣಿಸುವ ಅಗತ್ಯವಿಲ್ಲ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ. ಸಚಿವರು ಯಾವುದೇ ಸ್ಪಷ್ಟನೆ ನೀಡಿದರೂ ಸದ್ಯದಲ್ಲೇ ಶಾಲಾ ಕಾಲೇಜುಗಳಲ್ಲಿ ಗಣೇಶೋತ್ಸವ ವಿವಾದ ಭುಗಿಲೇಳೋ ಸಾಧ್ಯತೆ ಇದ್ದು, ಈಗಾಗಲೇ ಈ ವಿಚಾರದ ಬಗ್ಗೆ ಪರ ವಿರುದ್ಧ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ : Vivo V25 Pro : ಭಾರತದಲ್ಲಿ ಬಿಡುಗಡೆಯಾದ ವಿವೊ V25 ಪ್ರೋ : ಬಣ್ಣ ಬದಲಾಯಿಸುವ ಗ್ಲಾಸ್‌ ಇದರ ವೈಶಿಷ್ಟ್ಯ

ಇದನ್ನೂ ಓದಿ : Vinod Kambli : ಸಚಿನ್ ಆತ್ಮೀಯ ಸ್ನೇಹಿತ ಕಾಂಬ್ಳಿಗೆ ಇದೆಂಥಾ ದುರ್ಗತಿ ? ಕೆಲಸ ಹುಡುಕುತ್ತಿದ್ದಾರೆ ಮಾಜಿ ಕ್ರಿಕೆಟರ್

Ganeshotsava in schools Controversy, Education Minister’s clarification on government’s stand

Comments are closed.