ಸೋಮವಾರ, ಏಪ್ರಿಲ್ 28, 2025
HomekarnatakaGarbage Problem : ಸಿಲಿಕಾನ್ ಸಿಟಿಗೆ ಕಾದಿದೆ ಕಸದ ಶಾಕ್: ಜುಲೈ 1 ರಿಂದ ಮುಷ್ಕರಕ್ಕೆ...

Garbage Problem : ಸಿಲಿಕಾನ್ ಸಿಟಿಗೆ ಕಾದಿದೆ ಕಸದ ಶಾಕ್: ಜುಲೈ 1 ರಿಂದ ಮುಷ್ಕರಕ್ಕೆ ಸಜ್ಜಾಗ್ತಿದ್ದಾರೆ ಪೌರ ಕಾರ್ಮಿಕರು

- Advertisement -

ಬೆಂಗಳೂರು : ಈಗಾಗಲೇ ರಸ್ತೆ ಗುಂಡಿ, ಕಸದ ನಿರ್ವಹಣೆ ಕೊರತೆ (Garbage Problem) ಸೇರಿದಂತೆ ಹಲವು ಮೂಲಭೂತ ಸಮಸ್ಯೆಯಿಂದ ನರಳುತ್ತಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸದ್ಯದಲ್ಲಿಯೇ ದೊಡ್ಡ ಶಾಕ್ ವೊಂದು ಕಾದಿದೆ. ಸೇವೆ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಸಫಾಯಿ‌ ಮತ್ತು ಪೌರ ಕಾರ್ಮಿಕರ ಸಂಘ ಜುಲೈ 1 ರಿಂದ ಅನಿರ್ದಿಷ್ಟ ಅವಧಿಯ ಮುಷ್ಕರ ಆರಂಭಿಸಲು ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಪ್ರಸ್ತುತ ಕಾರ್ಮಿಕರು ಆರೋಗ್ಯ ,ಕುಡಿಯುವ ನೀರು, ಹೆರಿಗೆ ರಜೆ, ವಿಶ್ರಾಂತಿ ಕೊಠಡಿ ಸೇರಿದಂತೆ ಯಾವುದೇ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಸರ್ಕಾರಕ್ಕೆ ನೂರಾರು ಭಾರಿ ಮನವಿ ಸಲ್ಲಿಸಿದರೂ ಲಾಭವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಷ್ಕರಕ್ಕೆ ಮುಂದಾಗುತ್ತಿದ್ದೇವೆ ಎಂದು ಕಾರ್ಮಿಕ ನಾಯಕರು ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಸಾವಿರಾರು ಪೌರ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ತನ್ನ ಉದ್ಯೋಗವನ್ನು ಖಾಯಂಗೊಳಿಸಬೇಕು ಎಂದು ಪೌರ ಕಾರ್ಮಿಕರ ಮೊದಲ ಬೇಡಿಕೆಯಾಗಿದೆ. ಇದರೊಂದಿಗೆ ನೈರ್ಮಲ್ಯ ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಅಲ್ಲದೇ ನೈರ್ಮಲ್ಯ ಕಾರ್ಮಿಕರು ಘನತೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.

ಕೊರೋನಾ ಸಂದರ್ಭದಲ್ಲಿಯೂ ಪೌರ ಕಾರ್ಮಿಕರು ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಆದರೆ ಈ ಸಂದರ್ಭದಲ್ಲೂ ಸರ್ಕಾರ ಪೌರ ಕಾರ್ಮಿಕರ ಸಹಾಯಕ್ಕೆ ನಿಂತಿಲ್ಲ. ಸರ್ಕಾರ ಸಂಬಳ ಹೆಚ್ಚಿಸುವ ಭರವಸೆ ನೀಡಿದೆಯಾದರೂ 200-300 ರೂಪಾಯಿ ಲೆಕ್ಕದಲ್ಲಿ ಸಂಬಳ‌ ಹೆಚ್ಚಿಸಿದೆ ಎಂದು ಪೌರ ಕಾರ್ಮಿಕರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಪೌರ ಕಾರ್ಮಿಕರ ಸಮಸ್ಯೆ ಮತ್ತು ಬೇಡಿಕೆಗೆ ಸ್ಪಂದಿಸಲು ಬಿಬಿಎಂಪಿ ಅಧಿಕಾರಿಗಳು ವಿಫಲರಾಗಿದ್ದಾರೆ.ಪೌರ ಕಾರ್ಮಿಕರ ಸಮಸ್ಯೆಗಳನ್ನು ಕಂಡು ಕಾಣದಂತೆ ನಿರ್ಲಕ್ಷ್ಯ ತೋರುತ್ತಾರೆ ಎಂದು ಸಂಘಟನೆಗಳು ಆರೋಪಿಸಿವೆ.

ಈಗಾಗಲೇ ನಗರದಲ್ಲಿ ಟನ್ ಗಟ್ಟಲೇ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇರುವ ಮೂಲಭೂತ ಸೌಲಭ್ಯಗಳ ಕೊರತೆ ನಡುವೆಯೇ ಪೌರ ಕಾರ್ಮಿಕರು ಈ ಕಸದ ಸಮಸ್ಯೆ ನಿರ್ವಹಿಸಲು ದುಡಿಯುತ್ತಿದ್ದಾರೆ. ಒಂದೊಮ್ಮೆ ಪೌರ ಕಾರ್ಮಿಕರ ಮುಷ್ಕರ ಆರಂಭವಾದಲ್ಲಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಲ್ಬಣಿಸಲಿದೆ. ಒಂದು ದಿನ ಕಸ ಸಂಗ್ರಹಿಸೋದನ್ನು ನಿಲ್ಲಿಸಿದರೂ ನಗರದ ತ್ಯಾಜ್ಯ ನಿರ್ವಹಣೆ ಸ್ಥಗಿತಗೊಳ್ಳಲಿದ್ದು, ಇದರಿಂದ ರಸ್ತೆಗಳಲ್ಲಿ ಓಡಾಡೋದು ಕಷ್ಟ ಎಂಬ ಸ್ಥಿತಿ ಸೃಷ್ಠಿಯಾಗಲಿದೆ. ಹೀಗಾಗಿ ನಗರಾಡಳಿತ ಪೌರ ಕಾರ್ಮಿಕರ ಮುಷ್ಕರಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : 24 hours Hotel Open : 24 ಗಂಟೆ ಹೊಟೇಲ್ ತೆರೆಯಲು ಅನುಮತಿ ನೀಡದ ಪೊಲೀಸ್ ಇಲಾಖೆ

ಇದನ್ನೂ ಓದಿ : ಡೇಟಿಂಗ್ ಆ್ಯಪ್‌ ಮೋಹ : ಚೆಲುವೆ ಅಂದಕ್ಕೆ ಮರುಳಾಗಿ 6 ಕೋಟಿ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್‌

Pourakarmika protest july 1st in Bangalore, again start Garbage Problem

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular