ಬೆಂಗಳೂರು : ವಿಧಾನಸಭೆ ಚುನಾವಣೆಗೂ (MLA Election) ಮುನ್ನವೇ ನಡೆಯಲಿದೆ ಎಂದು ಅಂದಾಜಿಸಲಾಗಿದ್ದ ಬಿಬಿಎಂಪಿ ಚುನಾವಣೆ (BBMP Election) ಈಗ ಲೋಕಸಭೆ ಚುನಾವಣೆಗೆ (Loka Sabha Election) ಮುನ್ನವೂ ನಡೆಯೋದು ಅನುಮಾನ ಎನ್ನಲಾಗ್ತಿದೆ. ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯೋ ತರಾತುರಿಯಲ್ಲಿದ್ದರೂ ನೊರೆಂಟು ಅಡೆತಡೆಗಳನ್ನು ಎದುರಿಸಿ ಬಂದ ಬಿಬಿಎಂಪಿ ಚುನಾವಣೆಗೆ ಮತ್ತೆ ಮೀಸಲಾತಿ ಸಂಕಷ್ಟ ಎದುರಾಗಿದ್ದು ಚುನಾವಣೆ ಮತ್ತಷ್ಟು ವಿಳಂಬವಾಗೋ ಸಾಧ್ಯತೆ ಇದೆ.
ಹೌದು ಕಳೆದ ಮೂರ್ನಾಲ್ಕು ವರ್ಷಗಳಿಂದ ನಾನಾ ಕಾರಣಕ್ಕೆ ಬಿಬಿಎಂಪಿ ಚುನಾವಣೆ ಮುಂದೂಡಿಕೆಯಾಗುತ್ತಲೇ ಇದೆ. ಸದ್ಯ ಬಿಜೆಪಿ ಸಿದ್ಧಪಡಿಸಿದ್ದ 243 ವಾರ್ಡ್ ಗಳನ್ನು (BBMP Ward) ರದ್ದುಪಡಿಸಿದ ಸರ್ಕಾರ ಕೇವಲ 223 ವಾರ್ಡಗಳನ್ನು ರಚಿಸಿ ಆಧಿಸೂಚನೆ ಹೊರಡಿಸಿದೆ. ಅದರಲ್ಲೂ ಬಿಜೆಪಿ ಮತ ಹಾಗೂ ಬಿಜೆಪಿ ಕ್ಷೇತ್ರಗಳನ್ನೇ ಗಮನದಲ್ಲಿಟ್ಟುಕೊಂಡು ಬದಲಾವಣೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಆದರೆ ಬಿಜೆಪಿಯ ಮತಕ್ಷೇತ್ರಗಳನ್ನು ಒಡೆದು, ಬಿಬಿಎಂಪಿ ಗದ್ದುಗೆ ಹಿಡಿಯೋ ಕಾಂಗ್ರೆಸ್ ಕನಸು ಸಧ್ಯಕ್ಕಂತೂ ನನಸಾಗೋ ಲಕ್ಷಣಗಳಿಲ್ಲ. ಯಾಕೆಂದರೇ ಸದ್ಯ ಬಿಬಿಎಂಪಿ ಚುನಾವಣೆ ನಡೆಯುವುದು ಅನುಮಾನ. ಕಾಂಗ್ರೆಸ್ ಸರ್ಕಾರಕ್ಕೆ ಓಬಿಸಿ ಮೀಸಲಾತಿ ಕಗ್ಗಂಟ ಎದುರಾಗಿದ್ದು, ಇದೇ ಕಾರಣಕ್ಕೆ ಬಿಬಿಎಂಪಿ ಚುನಾವಣೆ ಸದ್ಯ ನಡೆಯೋದು ಅನುಮಾನ ಎನ್ನಲಾಗ್ತಿದೆ.

ಇದನ್ನೂ ಓದಿ : 16 ದಿನಕ್ಕೆ 1700 ಡೆಂಗ್ಯೂ ಪ್ರಕರಣ : ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದ ಆರ್ಭಟ
ಯಾಕೆಂದರೇ ಸಿದ್ಧಪಡಿಸಲಾದ ಹಾಗೂ ಸರ್ಕಾರ ಅಧಿಸೂಚನೆ ಹೊರಡಿಸಿದ ಪ್ರಕಾರ ವಾರ್ಡ್ ಗಳಿಗೆ ಮೀಸಲಾತಿ ಪ್ರಕಟಿಸಬೇಕಿದೆ. ಆದರೆ ಇದುವರೆಗೂ ಸರ್ಕಾರ ಓಬಿಸಿ ಮೀಸಲಾತಿ ನಿಗದಿ ಮಾಡಿಲ್ಲ.ರಾಜ್ಯ ಸರ್ಕಾರ ಓಬಿಸಿ ಮೀಸಲು ನಿಗದಿ ವಿಳಂಬ ಮಾಡ್ತಿರೋದರಿಂದ ಮತ್ತಷ್ಟು ಸಮಸ್ಯೆ ಸೃಷ್ಟಿ ಆಗ್ತಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಓಬಿಸಿಗೆ ಮೀಸಲು ನಿಗದಿ ತೀರ್ಮಾನವಾಗಿತ್ತು. ಇದರ ಅನ್ವಯ ಒಟ್ಟು ಬಿಬಿಎಂಪಿ ಪಾಲಿಕೆ ಸ್ಥಾನಗಳ ಪೈಕಿ ಮೂರನೇ ಒಂದರಷ್ಟು ಸ್ಥಾನಗಳಿಗೆ ಮೀಸಲು ಅನ್ವಯ. 243 ವಾರ್ಡ್ ಗಳಿಗೆ 81 ಸ್ಥಾನಗಳನ್ನು ಓಬಿಸಿ ಮೀಸಲಿರಿಸಿತ್ತು. ಈಗ ಕಾಂಗ್ರೆಸ್ ಸರ್ಕಾರ ವಾರ್ಡ್ ಸಂಖ್ಯೆ 225 ಕ್ಕೆ ಇಳಿಸಿದೆ. 225ರ ಪೈಕಿ 75 ವಾರ್ಡ್ ಗಳಿಗೆ ಓಬಿಸಿ ಮೀಸಲು ನಿಗದಿಯಾಗಬೇಕಿದೆ.
ಇದನ್ನೂ ಓದಿ : ಭೂಗಳ್ಳರಿಗೆ ಬ್ರೇಕ್ ಹಾಕೋಕೆ ಸಜ್ಜಾದ ಸಿದ್ದರಾಮಯ್ಯ ಸರ್ಕಾರ : ಒತ್ತುವರಿ ಮಾಹಿತಿಗೆ ಸಂಗ್ರಹಕ್ಕೆ ಹೊಸ ಆ್ಯಪ್
ಸದ್ಯ ಬಿಜೆಪಿ ಓಬಿಸಿ ಮೀಸಲಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ . ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಮುಂದುವರಿದಿದ್ದು, ಕಾಂಗ್ರೆಸ್ ಸರ್ಕಾರ ಅದನ್ನೂ ವೆಕೇಟ್ ಮಾಡಿಸಿ ಹೊಸ ಓಬಿಸಿ ಮೀಸಲಾತಿ ಪಟ್ಟಿ ಪ್ರಕಟಿಸ ಬೇಕಿದೆ. ಆದರೆ ಮೀಸಲಾತಿ ಪ್ರಕಟ ಇನ್ನೂ ಆಗದೆ ಇರೋದರಿಂದ ಚುನಾವಣೆ ಮತ್ತಷ್ಟು ವಿಳಂಬವಾಗಲಿದೆ.
ಬಿಬಿಎಂಪಿ ವ್ಯಾಪ್ತಿಯ 225 ಕ್ಷೇತ್ರಗಳ ಪೈಕಿ,ಮೀಸಲಾತಿಯನ್ನು 10 ವಾರ್ಡ್ ಗಳಿಗೆ ನೀಡಬೇಕು. ಶೇಕಡಾ 24.10 ರಷ್ಟು ಅಂದ್ರೇ ಅಂದಾಜು 54 ರಿಂದ 55 ವಾರ್ಡ್ ಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ , ಶೇಕಡಾ 34.17 ಮೀಸಲಾಯಿತಿಯನ್ನು ನೀಡಬೇಕು ಅಂದ್ರೇ ಹಿಂದುಳಿದ ವರ್ಗ ( ಪ್ರವರ್ಗ ಎ) ದವರಿಗೆ ಬಹುತೇಕ 77 ಕ್ಷೇತ್ರಗಳು ಸಿಗಬೇಕು.

ಇನ್ನೂ 11 ಸ್ಥಾನಗಳನ್ನು ಹಿಂದುಳಿದ ವರ್ಗ ಪ್ರವರ್ಗ ಬಿ ಗೆ ನೀಡಬೇಕು. ವಾರ್ಡ್ ಮೀಸಲಾತಿಯನ್ನು ಅಧಿಸೂಚನೆ ಹೊರಡಿಸಬೇಕಿರುವ ಸರಕಾರದ ಬಳಿಕ ದಾಖಲೆಗಳ ಪ್ರಕಾರ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಆದರೆ ಜಾತಿಗಣತಿಯನ್ನು ಸರ್ಕಾರವೇ ಒಪ್ಪಿಕೊಂಡಿಲ್ಲ. ಸರಕಾರ ಸಚಿವ ಸಂಪುಟದ ಒಪ್ಪಿಗೆ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿ ಅನುಮತಿ ಪಡೆಯುವ ಪ್ರಕ್ರಿಯೆಯೇ ಇನ್ನೂ ತಿಂಗಳುಗಳ ಕಾಲ ನಡೆಯಲಿದೆ. ಹೀಗಾಗಿ ಸದ್ಯ ಚುನಾವಣೆ ನಡೆಯೋದು ಅನುಮಾನ.
ಇದನ್ನೂ ಓದಿ : ನಮ್ಮ ಮೆಟ್ರೋದಿಂದ ಐಟಿ ಮಂದಿಗೆ ಗಿಫ್ಟ್: ಕೆಂಗೇರಿಯಿಂದ ವೈಟ್ ಫಿಲ್ಡ್ಕೆ, .ಆರ್. ಪುರಂವರೆಗೆ ಮೆಟ್ರೋ ಪ್ರಯಾಣ
ಇನ್ನೊಂದೆಡೆ ಕಾರ್ಪೋರೇಟರ್ ಆಕಾಂಕ್ಷಿಗಳು ಈ ಚುನಾವಣೆಯಿಂದ ಆಸಕ್ತಿ ಕಳೆದುಕೊಂಡಿದ್ದು,ಹಲವಾರು ಭಾರಿ ಚುನಾವಣೆಗಾಗಿ ಕೆಲಸ ಮಾಡಿ ಸುಸ್ತಾಗಿದ್ದೇವೆ. ಈ ಭಾರಿ ಅಧಿಸೂಚನೆ ಹೊರಡಿಸುವರೆಗೂ ನಾವು ತಲೆಕೆಡಿಸಿಕೊಳ್ಳೋದಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಸದ್ಯ ಬಿಬಿಎಂಪಿ ಚುನಾವಣೆ ಯಾರಿಗೂ ಬೇಡದಂತ ಸ್ಥಿತಿ ತಲುಪಿದೆ .
Reservation issue, BBMP election is not for now