Road crash in bengaluru: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ : ಬೆಂಗಳೂರಲ್ಲಿ ಕುಸಿಯಿತು ರಸ್ತೆ

ಬೆಂಗಳೂರು: (Road crash in bengaluru) ಬೆಂಗಳೂರಿನ ಜನತೆ ಜೀವಭಯದಲ್ಲೇ ವಾಹನವನ್ನು ಚಲಾಯಿಸುವಂತಾಗಿದೆ. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ರಸ್ತೆ ಕುಸಿತದ ಪ್ರಕರಣಗಳು ಪಿಲ್ಲರ್‌ ಕುಸಿತಗಳಂತಹ ದುರ್ಘಟನೆಗಳು ಹೆಚ್ಚುತ್ತಿದ್ದು, ವಾಹನ ಸವಾರರು ರಸ್ತೆಯಲ್ಲಿ ಪ್ರಯಾಣಿಸುವಾಗ ಜೀವವನ್ನು ಕೈಯಲ್ಲಿಡಿದೇ ಪ್ರಯಾಣಿಸುವಂತಾಗಿದೆ ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ.

ಕಳೆದ ಕೆಲ ದಿನಗಳ ಹಿಂದೆ ಮೆಟ್ರೋ ಪಿಲ್ಲರ್‌ ದುರಂತಕ್ಕೆ ತಾಯಿ ಮಗು ಇಬ್ಬರು ಬಲಿಯಾಗಿದ್ದರು. ಇದಾದ ಎರಡು ದಿನಗಳ ನಂತರ ಬೈಕ್‌ ನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಕುಸಿದು ಯುವಕನೋರ್ವ ಗಾಯಗೊಂಡಿದ್ದ. ಇದಾದ ಬಳಿಕ ಮತ್ತೊಂದು ಬಾರಿ ಮಹಾಲಕ್ಷ್ಮಿ ಲೇಔಟ್‌ ಮುಖ್ಯ ರಸ್ತೆ, ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ಟ್ಯಾಂಕರ್‌ ಒಂದು ಸಾಗುತ್ತಿರುವಾಗ ಏಕಾಏಕಿ ರಸ್ತೆ ಕುಸಿತಗೊಂಡಿತ್ತು.

ಇದೀಗ ಅದೇ ರೀತಿಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಮಾರುತಿನಗರದ ಇಟ್ಟುಮಡು ಮುಖ್ಯರಸ್ತೆಯಲ್ಲಿ ಬಿಡಬ್ಲ್ಯೂಎಸ್‌ಎಸ್ ಬಿ ಡ್ರೈನೇಜ್‌ ಚೇಂಬರ್‌ ಪಕ್ಕದಲ್ಲೇ ರಸ್ತೆ ಕುಸಿತವಾಗಿದ್ದು, ಇದರಿಂದಾಗಿ ವಾಹನ ಸವಾರರು ಭಯದಿಂದಲೇ ಓಡಾಡುವಂತಾಗಿದೆ. ರಸ್ತೆ ಮಧ್ಯೆ ಗುಂಡಿ ಬಿದ್ದ ಪರಿಣಾಮ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ವಿಷಯ ತಿಳಿದ ಬಳಿಕ ಬಿಬಿಎಂಪಿ ಅಧಿಕಾರಿಗಳು ಹಾಗೂ ಬಿಡಬ್ಲ್ಯೂಎಸ್‌ಎಸ್‌ ಬಿ ಡ್ರೈನೇಜ್‌ ಸಿಬ್ಬಂದಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಬ್ಯಾರಿಕೆಡ್‌ ಗಳನ್ನು ಅಳವಡಿಸಿ ರಸ್ತೆ ದುರಸ್ತಿ ಕಾರ್ಯ ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿ ಈ ತಿಂಗಳಲ್ಲಿ ಇದು ರಸ್ತೆ ಕುಸಿತದ ಮೂರನೇ ಪ್ರಕರಣವಾಗಿದ್ದು, ಬಿಬಿಎಂಪಿಯ ಕಳಪೆ ಕಾಮಗಾರಿಯಿಂದಾಗಿ ಏಕಾಏಕಿ ರಸ್ತೆ ಕುಸಿತಗೊಳ್ಳುತ್ತಿವೆ. ಇದರಿಂದಾಗಿ ಸಾರ್ವಜನಿಕರಿಗೆ ಪದೇ ಪದೇ ತೊಂದರೆಯಾಗುತ್ತಿದೆ. ಇವರ ನಿರ್ಲಕ್ಷ್ಯತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : Hit and drag case: ಬಾನೆಟ್‌ ಮೇಲೆ ಯುವಕನನ್ನು 1 ಕಿ.ಮೀ. ಎಳೆದೊಯ್ದ ಕಾರು ಚಾಲಕಿ

ಇದನ್ನೂ ಓದಿ : Inhuman incident in Bangalore: ಬೆಂಗಳೂರಿನಲ್ಲಿ ಅಮಾನವೀಯ ಘಟನೆ : ವ್ಯಕ್ತಿಯನ್ನು ರಸ್ತೆಯಲ್ಲಿ ಎಳೆದೊಯ್ದ ಬೈಕ್ ಸವಾರ

ಇದನ್ನೂ ಓದಿ : Attack on bakery owner: ಬೆಂಗಳೂರಿನ ಬೇಕರಿಯೊಂದರಲ್ಲಿ ಬೈಂದೂರು ಯುವಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

Road crash in Bengaluru: Another proof of BBMP negligence: Road collapsed in Bengaluru

Comments are closed.