KD movie : ಪ್ರೇಮ್‌ ನಿರ್ದೇಶನದ “ಕೆಡಿ” ಸಿನಿಮಾಕ್ಕಾಗಿ : ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ಭರ್ಜರಿ ತಯಾರಿ

ಕನ್ನಡ ಸಿನಿರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action prince Dhruva Sarja) ಎರಡೆರಡು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ಬಿಡುಗಡೆ ಸಿದ್ಧವಾಗಿದೆ. ‘ಮಾರ್ಟಿನ್’ ಶೂಟಿಂಗ್ ಮುಗಿದು, ಪೋಸ್ಟ್‌ ಪ್ರೊಡಕ್ಷನ್ ಕೆಲಸದಲ್ಲಿ ಸಿನಿತಂಡ ಬ್ಯುಸಿಯಾಗಿದೆ. ಆದರೆ ಅದರ ಬೆನ್ನಲ್ಲೇ ನಟ ಧ್ರುವ ಸರ್ಜಾ ಎರಡನೇ ಪ್ಯಾನ್‌ ಇಂಡಿಯಾ ಸಿನಿಮಾ “ಕೆಡಿ” ಗಾಗಿ (KD movie) ಭರ್ಜರಿ ವರ್ಕ್‌ಔಟ್ ನಡೆಸುತ್ತಿದ್ದಾರೆ. ಈ ಸಿನಿಮಾಕ್ಕಾಗಿ ನಟ ಧ್ರುವ ಜಿಮ್‌ನಲ್ಲಿ ಪ್ರತಿದಿನ 10 ಕಿ.ಮೀ ರನ್ನಿಂಗ್ ಮಾಡುತ್ತಿದ್ದಾರೆ.

ಈಗಾಗಲೇ ನಿರ್ದೇಶಕ ಪ್ರೇಮ್‌ ನಿರ್ದೇಶನದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ “ಕೆಡಿ” ಸಿನಿಮಾ ಸೆಟ್ಟೇರಿದೆ. ಸ್ಯಾಂಡಲ್‌ವುಡ್‌ನ ಶ್ರೀಮಂತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೌಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.”ಕೆಡಿ” ಸಿನಿಮಾದ ವಿಶೇಷತೆ ಏನು ಅಂದ್ರೆ, ಈ ಸಿನಿಮಾಕ್ಕಾಗಿ ಧ್ರುವ ಸರ್ಜಾ ಸಿಕ್ಕಾ ಪಟ್ಟೆ ತಯಾರಿ ನಡೆಸುತ್ತಿದ್ದಾರೆ. ಪಾತ್ರಗಳ ವಿಷಯಕ್ಕೆ ಬಂದ್ರೆ, ಧ್ರುವ ಸರ್ಜಾ ಬದಲಾಗುತ್ತಲೇ ಇರುತ್ತಾರೆ. ದೇಹದ ತೂಕ ಹೆಚ್ಚಿಸಿಕೊಳ್ಳುತ್ತಾರೆ. ದಿಢೀರನೇ ತೂಕ ಇಳಿಸಿಕೊಳ್ಳುತ್ತಾರೆ. ಈ ಸಿನಿಮಾದಲ್ಲೂ ತೂಕ ಇಳಿಸಿಕೊಳ್ಳಲು ಸಿಕ್ಕಾಪಟ್ಟೆ ಕಸರತ್ತು ನಡೆಸಿದ್ದಾರೆ.

“ಕೆಡಿ” ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ. ಧ್ರುವ ಸರ್ಜಾ ಸಿನಿಮಾ ಆರಂಭ ಆಗುವುದಕ್ಕೂ ಮುನ್ನ ಒಂದಿಷ್ಟು ತಯಾರಿ ಮಾಡಿಕೊಳ್ಳುತ್ತಾರೆ. ಅದರಲ್ಲೂ ತಮ್ಮ ದೇಹದಾಡ್ಯತೆ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಈ ಸಿನಿಮಾಗೆ ಈಗಾಗಲೇ ವರ್ಕ್‌ಔಟ್ ಮಾಡುತ್ತಿದ್ದಾರೆ. ಕೆಲವು ತಿಂಗಳುಗಳಿಂದ ಜಿಮ್‌ನಲ್ಲಿ ಭರ್ಜರಿ ತಯಾರಿ ನಡೆಸಿದ್ದಾರೆ. ಧ್ರುವ ನಡೆಸುತ್ತಿರುವ ಕಸರತ್ತಿನ ಒಂದೊಂದೇ ಸುದ್ದಿ ಹೊರಬೀಳುತ್ತಲೇ ಇದೆ.

ಇದನ್ನೂ ಓದಿ : ನಟಿ ರಚಿತಾ ರಾಮ್ ವಿರುದ್ದ ದೂರು ದಾಖಲು : ಬಂಧನ ಭೀತಿಯಲ್ಲಿ ಡಿಂಪಲ್ ಕ್ವೀನ್

ಇದನ್ನೂ ಓದಿ : Actor Prem – Tabla Nani : ನಿರ್ದೇಶಕ ಅಥರ್ವ್‌ ಆರ್ಯ ಸಿನಿಮಾದಲ್ಲಿ ಜೊತೆಯಾದ ನಟ ಪ್ರೇಮ್‌, ತಬಲ ನಾಣಿ

ಇದನ್ನೂ ಓದಿ : Leena Manimegalai : ಕಾಳಿಮಾತೆ ಕೈಲಿ ಸಿಗರೇಟ್ ವಿವಾದ : ನಿರ್ದೇಶಕಿಗೆ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್

ಈಗ ಆಕ್ಷನ್ ಪ್ರಿನ್ಸ್ ಕಸರತ್ತಿನ ವಿಡಿಯೋ ಒಂದು ಹೊರಬಿದ್ದಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ರತಿದಿನ 10 ಕಿ.ಮೀ ರನ್ನಿಂಗ್ ಮಾಡುತ್ತಿದ್ದಾರೆ. 36 ದಿನಗಳ ಕಾಲ ನಿರಂತರವಾಗಿ ರನ್ನಿಂಗ್ ಮಾಡುತ್ತಲೇ ಇದ್ದಾರೆ. ಜಿಮ್‌ನಲ್ಲಿ ಗಂಟೆಗಟ್ಟಲೆ ಶ್ರಮ ಪಡುತ್ತಿದ್ದಾರೆ. ಸದ್ಯ ಧ್ರುವ ಸರ್ಜಾ ತೂಕ ಇಳಿಸಿಕೊಳ್ಳುವ ಸಲುವಾಗಿ 36 ದಿನಗಳಿಂದ ಪ್ರತಿದಿನ 10 ಕಿ.ಮೀ ರನ್ನಿಂಗ್ ಮಾಡುತ್ತಿದ್ದಾರೆ. ಟ್ರೆಡ್ ಮಿಲ್‌ನಲ್ಲಿ ಓಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

KD movie: Action prince Dhruva Sarja is gearing up for the movie “KD” directed by Prem.

Comments are closed.