Sinus Headache Remedies:ಸೈನಸ್‌ ತಲೆನೊವಿನಿಂದ ಮುಕ್ತಿ ಪಡೆಯಲು ಈ ಮೂರು ಪದಾರ್ಥ ಟ್ರೈ ಮಾಡಿ

(Sinus Headache Remedies)ಅತಿಯಾದ ತಂಡಿ ವಾತಾವರಣದಿಂದಾಗಿ ಕೆಲವರಲ್ಲಿ ಸೈನಸ್‌ ತಲೆನೊವಿನ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಸೈನಸ್‌ ತಲೆನೊವು ತೊಂದರೆಯನ್ನು ಕಡಿಮೆ ಮಾಡುವುದಕ್ಕಾಗಿ ಮಾತ್ರೆ ತಿನ್ನುವುದು ಉಂಟು ,ಅತಿಯಾದ ಮಾತ್ರೆ ಸೇವನೆ ಆರೋಗ್ಯಕ್ಕೆ ಒಳ್ಳೆದಲ್ಲ ಹಾಗಾಗಿ ಮನೆಯಲ್ಲಿ ಸೈನಸ್‌ ತಲೆನೊವಿಗೆ ಪುಡಿಮಾಡಿಟ್ಟುಕೊಂಡು ಪ್ರತಿನಿತ್ಯ ಸೇವನೆ ಮಾಡಿದರೆ ಸೈನಸ್‌ ತಲೆನೊವು ತೊಂದರೆಯಿಂದ ಮುಕ್ತಿ ಪಡೆಯಬಹುದು. ಈ ಪುಡಿಯನ್ನು ಹೇಗೆ ಮಾಡಿಕೊಳ್ಳುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Sinus Headache Remedies)ಬೇಕಾಗುವ ಸಾಮಾಗ್ರಿಗಳು:

  • ಬಾದಾಮಿ
  • ಕಲ್ಲುಸಕ್ಕರೆ
  • ಕಾಳುಮೆಣಸು

ಮಾಡುವ ವಿಧಾನ:
ಮಿಕ್ಸಿ ಜಾರಿಯಲ್ಲಿ 18 ರಿಂದ 20ಬಾದಾಮಿ, ಒಂದು ಚಮಚ ಕಲ್ಲುಸಕ್ಕರೆ, ಕಾಲು ಚಮಚ ಕಾಳುಮೆಣಸು ಹಾಕಿ ಪುಡಿಮಾಡಿಕೊಳ್ಳಬೇಕು ನಂತರ ಇದನ್ನು ಒಂದು ಡಬ್ಬಿಯಲ್ಲಿ ಶೇಕರಿಸಿ ಇಟ್ಟುಕೊಳ್ಳಬೇಕು. ಮುಕ್ಕಾಲು ಚಮಚ ಪುಡಿಯನ್ನು ಬೆಚ್ಚಗಿನ ಹಾಲಿಗೆ ಹಾಕಿ ಮಿಶ್ರಣಮಾಡಿಕೊಂಡು ರಾತ್ರಿ ಊಟದ ನಂತರ ಕುಡಿದರೆ ಸೈನಸ್‌ ತಲೆನೊವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಜೀರ್ಣಕ್ರಿಯೆ ಹೆಚ್ಚಿಸುವಂತೆ ಮಾಡುತ್ತದೆ.
ಒಂದು ವೇಳೆ ನೀವು ಹೆಚ್ಚಿಗೆ ಪುಡಿಯನ್ನು ಮಾಡಿ ಇಟ್ಟುಕೊಳ್ಳುತ್ತಿರಿ ಎಂದರೆ ಒಂದೊಂದೆ ಪದಾರ್ಥವನ್ನು ಮಿಕ್ಸಿ ಜಾರಿಯಲ್ಲಿ ಹಾಕಿ ಪುಡಿಮಾಡಿಕೊಳ್ಳಿ ನಂತರ ಮೂರು ಪದಾರ್ಥವನ್ನು ಒಂದು ಡಬ್ಬಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಬಹುದು.

ಬಾದಾಮಿ
ಬಾದಾಮಿಯಲ್ಲಿ ಹೆಚ್ಚಿಗೆ ಪ್ರಮಾಣದಲ್ಲಿ ಪ್ರೋಟಿನ್‌,ವಿಟಮಿನ್‌ ಇ ,ಜಿಂಕ್‌ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಸೋಂಕುಗಳ ವಿರುದ್ಧ ಹೋರಾಡಿ ದೇಹವನ್ನು ಕಾಪಾಡುತ್ತದೆ. ನೆಗಡಿ ಶೀತ ಕಫವನ್ನು ಗುಣಪಡಿಸುತ್ತದೆ. ಮೆಗ್ನೀಸಿಮ್‌ ,ಖನಿಜ ಹೆರಳವಾಗಿ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣವಾಗಿರುವಂತೆ ನೋಡಿಕೊಳ್ಳುತ್ತದೆ. ಬೆಳಿಗ್ಗೆಯ ದಿನ ನಾಲ್ಕು ಬಾದಾಮಿಯನ್ನು ತಿನ್ನುವುದರಿಂದ ಮತ್ತು ಬಾದಾಮಿ ಹಾಲನ್ನು ಕುಡಿಯುವುದರಿಂದ ಜಠರಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

ಕಲ್ಲುಸಕ್ಕರೆ
ಕಲ್ಲು ಸಕ್ಕರೆ ತಲೆನೊವು ಕಡಿಮೆ ಮಾಡುವುದರ ಜೊತೆಗೆ ನೆಗಡಿ ,ಶೀತ ,ಸಿನು ಕಡಿಮೆ ಮಾಡುತ್ತದೆ. ಕಲ್ಲು ಸಕ್ಕರೆ ಪುಡಿಯಲ್ಲಿ ಕರಿಮೆಣಸು ಪುಡಿ ಮತ್ತು ಜೇನುತುಪ್ಪ ಸೇರಿಸಿ ಸೇವನೆ ಮಾಡುವುದರಿಂದ ಕೆಮ್ಮು ಕಡಿಮೆ ಆಗುತ್ತದೆ. ಬಿಳಿ ಇರುಳ್ಳಿ ರಸಕ್ಕೆ ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ಕಿಡ್ನಿ ಸ್ಟೋನ್‌ ಕರಗಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ:Stop Hiccups Instantly:ತಕ್ಷಣವೇ ಬಿಕ್ಕಳಿಕೆ ನಿಲ್ಲಬೇಕಾ ? ಹಾಗಾದ್ರೆ ಇಲ್ಲಿದೆ ಸುಲಭ ಪರಿಹಾರ

ಇದನ್ನೂ ಓದಿ:Special Kashaya: ಚಳಿಗಾಲದಲ್ಲಿ ದೇಹ ಬೆಚ್ಚಗಿರಬೇಕು ಅಂದ್ರೆ ಈ ಸ್ಪೆಷಲ್ ಕಷಾಯ ಕುಡೀರಿ

ಕಾಳುಮೆಣಸು
ಕಾಳುಮೆಣಸನ್ನು ಅಡುಗೆಯಲ್ಲಿ ಬಳಸುವುದು ಅಷ್ಟೇ ಅಲ್ಲದೆ ಆಯುರ್ವೇದ ಔಷಧಗಳಲ್ಲೂ ಅತಿ ಹೆಚ್ಚು ಬಳಕೆ ಆಗುತ್ತದೆ. ಇದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಶೀತ ,ಕೆಮ್ಮು ,ನೋವು ನಿವಾರಣೆ ಮಾಡುವುದಕ್ಕೆ ಸಹಕಾರಿಯಾಗಿದೆ.

Sinus Headache RemediesTry these three ingredients to get rid of sinus headache

Comments are closed.