Hike Water Bill : ಜನರಿಗೆ ಶಾಕ್ ನೀಡಲು ಸಜ್ಜಾಗಿದೆ ಜಲಮಂಡಳಿ : ಸರ್ಕಾರಕ್ಕೆ ಸಲ್ಲಿಕೆಯಾಯ್ತು ಬೆಲೆ ಏರಿಕೆ ಪ್ರಸ್ತಾಪ

ಕೊರೋನಾ ನಾಲ್ಕನೇ ಅಲೆ ಭೀತಿ ಹೊತ್ತಲ್ಲೆ ರಾಜಧಾನಿ ಜನರಿಗೆ ನಗರಾಢಳಿತ ಬಿಗ್ ಶಾಕ್ ನೀಡಲು ಸಜ್ಜಾಗಿದೆ. ತೈಲ ಬೆಲೆ, ಅಡುಗೆ ಎಣ್ಣೆ ಬೆಲೆ, ಗ್ಯಾಸ್ ಬೆಲೆ, ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಜೀವಜಲದ ಬೆಲೆಯನ್ನು ಏರಿಸಲು ಸಿದ್ಧವಾಗಿದ್ದು, ನೀರಿನ ಬೆಲೆ ಏರಿಕೆ ಕುರಿತು ಈಗಾಗಲೇ ಬಿಡಬ್ಲುಎಸ್ಎಸ್ಬಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ. ಸತತ ಬೆಲೆ ಏರಿಕೆ ಬಿಸಿ ನಡುವೆ ಸಿಲಿಕಾನ್ ಸಿಟಿ ಜನರಿಗೆ ಶೇಕಡಾ 5 ರಷ್ಟು ಬೆಲೆ ಏರಿಕೆಯಾಗಲಿದೆ ಎನ್ನಲಾಗುತ್ತಿದೆ. ಪ್ರತಿ ಯುನಿಟ್ ಗೆ ನೀರಿನ ದರದ 5% ರಷ್ಟು ದರ (Hike Water Bill ) ಹೆಚ್ಚಿಸುವಂತೆ ಜಲಮಂಡಳಿ ಪ್ರಸ್ತಾವನೆಯಲ್ಲಿ ಮನವಿ ಮಾಡಿದೆ. ಪ್ರಸ್ತುತ ಇರುವ ದರದಲ್ಲಿ ಕಮರ್ಷಿಯಲ್ ಸೇರಿದಂತೆ ಎಲ್ಲಾ ವಾಟರ್ ದರವನ್ನು ಶೇಕಡಾ 5 ರಿಂದ 8 ರವರೆಗೆ ಏರಿಸುವಂತೆ ಮನವಿ ಮಾಡಲಾಗಿದೆ.

ಬೆಂಗಳೂರು ನಗರದ ಪ್ರಸ್ತುತ ನೀರಿನ ದರ

• 1,000 Ltr : ₹7
• 1,000 Ltr : ₹11
• 1,000 Ltr : ₹26
• 1,000 Ltr : ₹45

ಇನ್ನು ವಾಣಿಜ್ಯ ಬಳಕೆಯ ನೀರಿನ ದರ

• 1,000 Ltr : ₹50
• 1,000 Ltr : ₹57
• 1,000 Ltr : ₹65
• 1,000 Ltr : ₹76
• 1,000 Ltr : ₹86

ಒಂದೊಮ್ಮೆ ಜಲಮಂಡಳಿ ಪ್ರಸ್ತಾಪಕ್ಕೆ ಸರ್ಕಾರ ಅಸ್ತು ಎಂದರೇ, ಪ್ರತಿ ಸಾವಿರ ಲೀಟರ್ ಗೆ ₹7 ದರ, ಈ ದರಕ್ಕೆ 5% ಏರಿಕೆಯಾದರೆ ₹7.35 ಆಗಲಿದೆ : 35 ಪೈಸೆ ಹೆಚ್ಚಳ ಆದಂತೆ ಆಗಲಿದೆ. ಇನ್ನೂ ಮೊದಲ ಹಂತದ 8 ಸಾವಿರ ಲೀಟರ್ ಗೆ ₹56, ಇದಕ್ಕೆ 5% ಏರಿಕೆಯಾದರೆ ₹58.80 ಆಗಲಿದೆ : ₹2.80 ಹೆಚ್ಚಳ. ಪ್ರತಿ ಸಾವಿರ ಲೀಟರ್ ಗೆ ₹ 90 ದರ, ಈ ದರಕ್ಕೆ 8% ಏರಿಕೆಯಾದರೆ 97.20 ಆಗಲಿದೆ : ₹7.20 ಹೆಚ್ಚಳವಾಗಲಿದೆ. ಇನ್ನು ನಗರದಲ್ಲಿ ಜಲದರ ಏರಿಕೆ ಬಗ್ಗೆ ಜಲಮಂಡಳಿ ಇಂಜಿನಿಯರ್ ಇನ್ ಚೀಫ್ ಸುರೇಶ್ ಮಾಹಿತಿ‌ ನೀಡಿದ್ದು, 2013ರಲ್ಲಿ ಕೊನೆಯ ಬಾರಿಗೆ ಜಲ ಮಂಡಳಿ ದರ ಏರಿಕೆ ಮಾಡಿತ್ತು. ಅದಾಗಿ 9 ವರ್ಷಗಳಾಯಿತು, ಇದೀಗ ದರ ಏರಿಸುವ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಸಾವಿರ ಲೀಟರ್ ಗೆ 5% ಹಾಗೂ ಕೈಗಾರಿಕಾ ಬಳಕೆಗೆ 8% ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : 24 ಗಂಟೆ ಸೇವೆಗೆ ಅನುಮತಿ ನೀಡಿ : ಪೊಲೀಸ್ ಇಲಾಖೆಗೆ ಹೊಟೇಲ್‌ಮಾಲೀಕರ ಸಂಘದ ಮನವಿ

ಇದನ್ನೂ ಓದಿ : ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ವಾಹನಗಳ ಸಂಖ್ಯೆ : ಜಾರಿಯಾಗುತ್ತಾ ದೆಹಲಿ ಮಾದರಿ ಸಂಚಾರಿ ರೂಲ್ಸ್

Water Board has submitted a price hike Water Bill to the government

Comments are closed.