Post Office Scheme: ಅಂಚೆ ಕಚೇರಿ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಹೊಸ ವರ್ಷಕ್ಕೆ ಬಂಪರ್ ಗಿಫ್ಟ್ !

ನವದೆಹಲಿ: Post Office Scheme: ಹೊಸ ವರ್ಷದ (news year 2023 ) ಹೊಸ್ತಿಲಲ್ಲೇ ಕೇಂದ್ರ ಸರ್ಕಾರವು ಅಂಚೆ ಕಚೇರಿಯಲ್ಲಿ ಠೇವಣಿ ಮಾಡುವ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಅಂಚೆ ಕಚೇರಿಯ ಹಲವು ಯೋಜನೆಗಳ ಮೇಲಿನ ಬಡ್ಡಿದರವನ್ನು 20 ಮೂಲಾಂಕಗಳಿಂದ 110 ಮೂಲಾಂಕಗಳಿಗೆ ಏರಿಕೆ ಮಾಡಲಾಗಿದೆ. ಇದರಿಂದ ಕೋಟ್ಯಂತರ ಅಂಚೆ ಗ್ರಾಹಕರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲಿದ್ದಾರೆ.

ಪೋಸ್ಟ್ ಆಫೀಸ್ ಟರ್ಮ್ ಡಿಪಾಸಿಟ್ಸ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್, ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಈ ಪರಿಷ್ಕೃತ ಬಡ್ಡಿ ದರವು 2023ರ ಜನವರಿ 1ರಿಂದಲೇ ಜಾರಿಗೆ ಬರಲಿದೆ. ಎಲ್ಲಾ ಠೇವಣಿಗಳ ಮೇಲೆ ಶೇಕಡಾ 1.1ರಷ್ಟು ಬಡ್ಡಿದರ ಹೆಚ್ಚಾಗಲಿದೆ. ಆದರೆ ಪಿಪಿಎಫ್ ಮತ್ತು ಹೆಣ್ಣುಮಕ್ಕಳ ಉಳಿತಾಯ ಯೋನೆಯಾದ ಸುಕನ್ಯಾ ಸಮೃದ್ಧಿ ಬಡ್ಡಿದರದಲ್ಲಿ ಏರಿಕೆ ಕಂಡುಬಂದಿಲ್ಲ.

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ (ಎನ್ ಎಸ್ ಸಿ) ಬಡ್ಡಿ ದರವು ಜನವರಿ 1ರಿಂದ ಶೆ.6.8ರಿಂದ ಶೇ.7ಕ್ಕೆ ಏರಿಕೆ ಆಗಲಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ ಶೇ.7.6ರಿಂದ 8ಕ್ಕೆ ಏರಿಕೆ ಆಗಲಿದೆ. 1ರಿಂದ 5 ವರ್ಷಗಳ ಅವಧಿಯ ಪೋಸ್ಟ್ ಆಫೀಸ್ ಟರ್ಮ್ ಡಿಪಾಸಿಟ್ಸ್ ಬಡ್ಡಿ ದರ ಶೇ.1.1ರಷ್ಟು ಹೆಚ್ಚಳವಾಗಲಿದೆ. ಇನ್ನು ತಿಂಗಳ ಆದಾಯ ಯೋಜನೆಯ ಬಡ್ಡಿ ದರವನ್ನು ಶೇ.6.7ರಿಂದ ಶೇ.7.1ಕ್ಕೆ ಏರಿಕೆ ಮಾಡಲಾಗಿದೆ.

ಶ್ಯಾಮಲಾ ಗೋಪಿನಾಥ್ ಆಯೋಗದ ವರದಿಯ ಶಿಫಾರಸ್ಸಿನಂತೆ ಕೇಂದ್ರ ಹಣಕಾಸು ಸಚಿವಾಲಯವು ಬಡ್ಡಿ ದರ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಆದರೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವನ್ನು ಏರಿಕೆ ಮಾಡಲಾಗಿಲ್ಲ. ನೂರು ಮೂಲಾಂಕ ಸೇರಿದರೆ ಒಂದು ಪರ್ಸೆಂಟ್ ಆಗುತ್ತದೆ. ಈ ಬಾರಿ 110 ಮೂಲಾಂಕ ಏರಿಕೆ ಮಾಡಲಾಗಿದ್ದು, ಗ್ರಾಹಕರು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ.

ಇದನ್ನೂ ಓದಿ : PAN Card Update : ಮಾರ್ಚ್‌ 31, 2023 ರ ಮೊದಲು ಪಾನ್‌ ಕಾರ್ಡ್‌ ಆಧಾರ್‌ಗೆ ಲಿಂಕ್‌ ಆಗದಿದ್ದರೆ ಏನಾಗುತ್ತೇ ಗೊತ್ತಾ ?

ಇದನ್ನೂ ಓದಿ : LPG Subsidy Hike : ಗ್ರಾಹಕರಿಗೆ ಗುಡ್‌ ನ್ಯೂಸ್‌ : ಎಲ್‌ಪಿಜಿ ಸಬ್ಸಿಡಿ ಹಣದಲ್ಲಿ ಏರಿಕೆ

ಪೋಸ್ಟ್ ಆಫೀಸ್ ಟರ್ಮ್ ಡಿಪಾಸಿಟ್ಸ್ ಸ್ಕೀಮ್ ಸ್ಥಿರ ಠೇವಣಿ ಯೋಜನೆ ಮೂಲಕ ಸರ್ಕಾರ ಈಗಾಗಲೇ ವಿವಿಧ ಬ್ಯಾಂಕ್ ಗಳ ಎಫ್ ಡಿ ಬಡ್ಡಿ ದರಕ್ಕಿಂತಲೂ ಹೆಚ್ಚಿನ ಬಡ್ಡಿ ನೀಡುತ್ತಿವೆ. ಈ ಯೋಜನೆಯಡಿ ಕನಿಷ್ಠ 1 ವರ್ಷ , ಗಡಿಷ್ಠ 5 ವರ್ಷದವರೆಗೆ ಠೇವಣಿ ಇಡಬಹುದು. 200 ರೂ. ಅಥವಾ ಇದರ ದುಪ್ಪಟ್ಟು ಮೊತ್ತಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಸಮೀಪದ ಅಂಚೆ ಕಚೇರಿಯಲ್ಲಿ ಅಥವಾ ನ್ ಲೈನ್ ಮೂಲಕ ಠೇವಣಿ ಇಡಬಹುದಾಗಿದೆ. ವೈಯಕ್ತಿಕ ಅಥವಾ ಜಂಟಿಯಾಗಿ ಠೇವಣಿ ಇಡುವ ಅವಕಾಶವಿದೆ. ತಿಂಗಳಿಗೊಮ್ಮೆ, 3 ತಿಂಗಳಿಗೊಮ್ಮೆ, ಅರ್ಧವಾರ್ಷಿಕ ಹಾಗೂ ಮೆಚ್ಯೂರಿಟಿಗೆ ಪಡೆಯಲು ಅವಕಾಶವಿದೆ. ಬ್ಯಾಂಕ್ ಗಳಿಗಿಂತಲೂ ಹೆಚ್ಚು ಬಡ್ಡಿ ಅಂಚೆ ಕಚೇರಿಯ ಈ ಯೋಜನೆಯಲ್ಲಿ ದೊರೆಯುತ್ತದೆ. ಬ್ಯಾಂಕ್ ಗಳ ಎಫ್ ಡಿ ದರ ಶೇಕಡಾ 5.5ರಿಂದ 6.5ರವರೆಗೆ ಇದ್ದರೆ ಪೋಸ್ಟ್ ಆಫೀಸ್ ಟರ್ಮ್ ಡಿಪಾಸಿಟ್ಸ್ ಸ್ಕೀಮ್ ಶೇ.5.5ರಿಂದ 6.7ರವರೆಗೆ ಇದೆ.

Post Office Scheme : news year 2023 bumper gift from central government to post office customers

Comments are closed.