Firecracker Factory blast: ಪಟಾಕಿ ಗೋದಾಮಿನಲ್ಲಿ ಸ್ಫೋಟ: 4 ಸಾವು, 7 ಮಂದಿಗೆ ಗಾಯ

ಭೋಪಾಲ್ : ಪಟಾಕಿ ಗೋದಾಮಿನಲ್ಲಿ (Firecracker Factory blast) ಸ್ಪೋಟ ಸಂಭವಿಸಿ, 4 ಮಂದಿ ಸಾವನ್ನಪ್ಪಿ, 7 ಮಂದಿ ಗಂಭೀರವಾಗಿ ಗಾಯಗೊಂಡಿರು ಘಟನೆ ಮಧ್ಯಪ್ರದೇಶದ ಮೊರೆನಾ ಪಟಾಕಿ ಗೋದಾಮಿನಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು ರಕ್ಷಣಾ ಕಾರ್ಯವನ್ನು ನಡೆಸಲಾಗುತ್ತಿದೆ.

ಮೊರೆನಾ ಜಿಲ್ಲೆಯ ಬಾನ್‌ಮೋರ್ ಪಟ್ಟಣದ ಜೈತ್‌ಪುರ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಫೋಟದಿಂದಾಗಿ ಇಡೀ ಕಟ್ಟಡ ಕುಸಿದಿದೆ. ಮನೆಯ ಅವಶೇಷಗಳ ಕೆಳಗೆ ಆರಕ್ಕೂ ಹೆಚ್ಚು ಮಂದಿ ಸಮಾಧಿಯಾಗಿದ್ದಾರೆ ಎಂದು ವರದಿಯಾಗಿದೆ. ಕಟ್ಟಡದಲ್ಲಿ ಗೋದಾಮಿನ ಮಾಲೀಕ ನಿರ್ಮಲ್ ಜೈನ್ ಮತ್ತು ಅವರ ಬಾಡಿಗೆದಾರರು ಕೂಡ ಇದ್ದರು. ಬನ್ಮೋರ್ ನಗರದ ಜೈತ್‌ಪುರ ರಸ್ತೆಯಲ್ಲಿರುವ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದ ತಕ್ಷಣ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದರು. ಕೆಲವು ಬಾಡಿಗೆದಾರರು ಸಹ ಅದೇ ಮನೆಯಲ್ಲಿ ವಾಸಿಸುತ್ತಿದ್ದರು. ಬಾನ್ಮೋರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 3 ಸಾವು, ಒಬ್ಬರು ನಾಪತ್ತೆ, 7 ಮಂದಿ ಗಾಯಗೊಂಡಿದ್ದಾರೆ.

ಸ್ಫೋಟದ ನಂತರ 6 ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರು ಮತ್ತು ಪುರುಷರು ಅವಶೇಷಗಳ ಅಡಿಯಲ್ಲಿ ಹೂತು ಹೋಗಿದ್ದಾರೆ. ಅವಶೇಷಗಳಡಿ ಇನ್ನೂ ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಪೊಲೀಸರು ಮತ್ತು ಆಡಳಿತ ಮಂಡಳಿ ಸ್ಥಳಕ್ಕೆ ಆಗಮಿಸಿದೆ. ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಮಧ್ಯಪ್ರದೇಶದ ಮೊರೆನಾದಲ್ಲಿರುವ ಪಟಾಕಿ ಗೋದಾಮಿನಲ್ಲಿ ಸ್ಫೋಟದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿ, ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಕುರಿತು ಕಲೆಕ್ಟರ್ ಬಕ್ಕಿ ಕಾರ್ತಿಕೇಯನ್ ಮಾಹಿತಿ ನೀಡಿದ್ದಾರೆ. ಆದರೆ ಸ್ಪೋಟಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಆರಕ್ಕಿಂತಲೂ ಹೆಚ್ಚು ಮಂದಿ ಭೂ ಸಮಾಧಿಯಾಗಿರುವ ಸಾಧ್ಯತೆಯಿದೆ ಎಂದು ಹೇಳಾಗುತ್ತಿದೆ. ಗೋದಾಮಿನ ಮಾಲೀಕ ನಿರ್ಮಲ್ ಜೈನ್ ಮತ್ತು ಅವರ ಬಾಡಿಗೆದಾರರು ಕೂಡ ಇದೇ ಕಟ್ಟದಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Ayodhya Ram Mandir:ಅಯೋಧ್ಯೆ ರಾಮಮಂದಿರ ಸ್ಟೋಟಿಸಿ, ಬಾಬರಿ ಮಸೀದಿ ನಿರ್ಮಾಣ : ಬಯಲಾಯ್ತು ಪಿಎಫ್ಐ ಸಂಚು

ಇದನ್ನೂ ಓದಿ : Illegal Recruitment of Teachers : ರಾಜ್ಯದಲ್ಲಿ ಸಿಐಡಿ ದಾಳಿ ಅಕ್ರಮ ಶಿಕ್ಷಕರ ಬಂಧನ : ಇಂದೂ ಮುಂದುವರಿದ ಕಾರ್ಯಾಚರಣೆ

4 killed and 7 injured At Firecracker Factory blast In MP’s Morena

Comments are closed.