74th Republic Day Parade: 74 ನೇ ಗಣರಾಜ್ಯೋತ್ಸವ ಪರೇಡ್‌ ನಲ್ಲಿ ಗಮನ ಸೆಳೆದ ಕರ್ನಾಟಕದ ನಾರಿಶಕ್ತಿ ಸ್ತಬ್ಧ ಚಿತ್ರ

ನವದೆಹಲಿ: (74th Republic Day Parade) ಭಾರತಕ್ಕೆ ಇಂದು 74 ನೇ ಗಣರಾಜ್ಯೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ರಾಜಪಥದಲ್ಲಿ ನಡೆಯುವ ಪರೇಡ್‌ ನಲ್ಲಿ ಕರ್ನಾಟಕದ ನಾರಿಶಕ್ತಿ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆಯಿತು.

ಕಳೆದ ಹದಿಮೂರು ವರ್ಷಗಳಿಂದ ಗಣರಾಜ್ಯೋತ್ಸವ ಪರೇಡ್‌ ನಲ್ಲಿ ಸ್ತಬ್ದ ಚಿತ್ರ ಪ್ರದರ್ಶನ ನೀಡುತ್ತಾ ಬಂದಿದ್ದ ಕರ್ನಾಟಕ ಈ ಬಾರಿಯೂ ಕೂಡ ಸ್ತಬ್ದ ಚಿತ್ರ ಪ್ರದರ್ಶನ ನೀಡಿದೆ. ನಾರಿಶಕ್ತಿ ಎಂಬ ವಿಷಯವನ್ನು ಮುಂದಿಟ್ಟುಕೊಂಡು ಪ್ರದರ್ಶನ ನೀಡಿದ್ದು, ಕರ್ನಾಟಕ ಜಿಲ್ಲೆಯು ಮಹಿಳಾ ಸಬಲೀಕರಣವನ್ನು ಸಾರುವ ನಿಟ್ಟಿನಲ್ಲಿ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ಸ್ತಬ್ದ ಚಿತ್ರ ಅನಾವರಣಗೊಳಿಸಿದೆ.

ಜನಸಾಮಾನ್ಯರ ಸಾಧನೆಯ ಪ್ರತೀಕವಾಗಿರುವ ಈ ಸ್ತಬ್ಧಚಿತ್ರ ಅತ್ಯಂತ ಕಡಿಮೆ ಅವಧಿಯಲ್ಲಿ ಸಿದ್ಧಗೊಂಡಿದೆ. ಈ ಮೂಲಕ ಸತತ 14 ವರ್ಷಗಳಿಂದ ಪಥಸಂಚಲನದಲ್ಲಿ ಪಾಲ್ಗೊಂಡ ದೇಶದ ಏಕೈಕ ರಾಜ್ಯ ನಮ್ಮದು. ಸ್ತಬ್ದ ಚಿತ್ರದ ಮುಂಭಾಗದಲ್ಲಿ ಗಿಡ ಮರ ಬೆಟ್ಟ ಗುಡ್ಡ ಪಕ್ಷಿಗಳಿಂದ ಕಂಗೊಳಿಸುತ್ತಿರುವ ಸ್ತಬ್ಧ ಚಿತ್ರದ ಮುಂಭಾಗದಲ್ಲಿ ತೊಟ್ಟಿಲು ತೂಗುತ್ತಾ ಕೈಯಲ್ಲಿ ಮಗು ಆಡಿಸುತ್ತಿರುವ ಸೂಲಗಿತ್ತಿ ನರಸಮ್ಮನನ್ನು ತೋರಿಸಲಾಗಿದೆ. ನುರಿತ ವೈದ್ಯರ ಅನುಪಸ್ಥಿತಿಯಲ್ಲಿ ಕಳೆದ ಏಳು ದಶಕಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ.

ಮಧ್ಯಭಾಗದಲ್ಲಿ ಗಿಡಮರಗಳನ್ನು ಪೋಷಿಸುತ್ತಿರುವ ತುಳಸಿ ಗೌಡ ಹಾಲಕ್ಕಿ ಅವರನ್ನು ತೋರಿಸಲಾಗಿದ್ದು, ಇವರು ಅಪರೂಪದ ಸಸ್ಯ ಪ್ರಭೇದಗಳನ್ನು ಗುರುತಿಸಿ ಬೆಳೆಸುವಲ್ಲಿ ಪರಿಣಿತರಾಗಿದ್ದರು. ಮೂವತ್ತು ಸಾವಿರಕ್ಕೂ ಹೆಚ್ಚು ಗಿಡಗಳನ್ನು ಬೆಳಸಿರುವ ಖ್ಯಾತಿ ಇವರಿಗೆ ಸಲ್ಲುತ್ತದೆ. ಇದರ ಜೊತೆಗೆ ರಾಜ್ಯದ ಹೆದ್ದಾರಿಯ ಅಕ್ಕಪಕ್ಕದಲ್ಲಿ ಎಂಟುಸಾವಿರ ಮರಗಳನ್ನು ನೆಟ್ಟು ನೀರೆರೆದು ಬೆಳೆಸಿದ ಸಾಲುಮರದ ತಿಮ್ಮಕ್ಕನವರನ್ನು ತೋರಿಸಲಾಗಿದೆ. ಸ್ತಬ್ದ ಚಿತ್ರದಲ್ಲಿ ಗಿಡಗಳಿಗೆ ನೀರೆರೆಯುವಂತೆ ಬಿಂಬಿಸಲಾಗಿದೆ.

ಇದನ್ನೂ ಓದಿ : Happy Republic Day 2023 : ಗಣರಾಜ್ಯೋತ್ಸವ 2023 : ಸಾಂಸ್ಕ್ರತಿಕ ಪರಂಪರೆ ಸಾರುವ ರಾಷ್ಟ್ರೀಯ ಉತ್ಸವ

ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಭಾರತೀಯ ಸೇನೆ, ನೌಕಾಪಡೆ, ವಾಯುಪಡೆಯ ರೆಜಿಮೆಂಟ್‌ಗಳ ಭವ್ಯವಾದ ಪರೇಡ್‌ಗಳಿಗೆ ಸಾಕ್ಷಿಯಾಗಿದ್ದಾರೆ. ಈ ಬಾರಿ ಕೇರಳ, ತಮಿಳುನಾಡು ಸೇರಿದಂತೆ ದೇಶದ ಹದಿಮೂರು ರಾಜ್ಯಗಳು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸ್ತಬ್ದ ಚಿತ್ರ ಪ್ರದರ್ಶನ ನೀಡಿದವು. ವಾಯುಪಡೆ ನೌಕಾಪಡೆ, ದೆಹಲಿ ಪೊಲೀಸರು, ಎನ್‌ ಸಿಸಿ ಸ್ಕ್ವಾಡ್‌ ಸೇರಿದಂತೆ ಹಲವರು ಪರೇಡ್‌ ನಲ್ಲಿ ಭಾಗಿಯಾಗಿದ್ದರು.

74th Republic Day Parade: Karnataka’s Narishakti silent film caught attention at the 74th Republic Day Parade

Comments are closed.