Xiaomi 12 Series for 2022: ಹೊಸವರ್ಷಕ್ಕೆ ಹೊಸ ಸ್ಮಾರ್ಟ್‌ಫೋನ್; ಮಂಗಳವಾರ ಬಿಡುಗಡೆಯಾಗಲಿರುವ ಶವೋಮಿ ಬುಕ್ ಮಾಡಿದ್ದು 2 ಲಕ್ಷ ಜನ!

ಹೊಸವರ್ಷಕ್ಕೆ ಸ್ಮಾರ್ಟ್‌ಫೋನ್‌ ಖರೀದಿಸುವ ಯೋಚನೆ ಹೊಂದಿದ್ದರೆ ನಿಮಗಾಗಿಯೇ ಸ್ಮಾರ್ಟ್‌ಫೋನ್ ಒಂದು ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಅದು ಯಾವುದು ಎಂದರೆ ಶವೋಮಿ 12 ಸರಣಿ (Xiaomi 12 Series). ಈ ಸರಣಿಯ ಶವೋಮಿ 12 (Xiaomi 12) ಮತ್ತು ಶವೋಮಿ 12 ಪ್ರೊ (Xiaomi 12 Pro) ಸ್ಮಾರ್ಟ್ಫೋನ್ ನಾಳೆ, ಅಂದರೆ ಡಿಸೆಂಬರ್ 28ಕ್ಕೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ. ಇನ್ನೂ ವಿಶೇಷವೆಂದರೆ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಮುನ್ನವೇ ಸುಮಾರು 2 ಲಕ್ಷ ಜನರು ಮುಂಚಿತವಾಗಿ ಕಾಯ್ದಿರಿಸಿದ್ದಾರಂತೆ. ಅರರೇ! ಈ ಸ್ಮಾರ್ಟ್‌ಫೋನ್‌ನಲ್ಲಿ ಅಂಥಾದ್ದೇನಿದೆ ಎಂದುಕೊಂಡಿರಾ? ಈ ಸ್ಟೋರಿ ಓದಿ.

ಶವೋಮಿ 12 ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.28 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ 120Hz ರಿಫ್ರೇಶ್‌ ರೇಟ್‌ ಹೊಂದಿರಲಿದೆ ಎಂದು ವರದಿಗಳು ತಿಳಿಸಿವೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಪ್ರಬಲವಾದ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 1 ಚಿಪ್‌ಸೆಟ್ ಇದ್ದು ವೇಗವಾಗಿ ಬಳಸಲು ಸಹಾಯ ಮಾಡಲಿದೆ. ಇದು ಆಂಡ್ರಾಯ್ಡ್‌ 12 ಸಾಪ್ಟ್‌ವೇರ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.

ಅಷ್ಟೇ ಅಲ್ಲದೇ ಶವೋಮಿ 12 ಸ್ಮಾರ್ಟ್‌ಫೋನ್‌ ಮೂರು ರಿಯರ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಮೊದಲ ಅಥವಾ ಪ್ರಮುಖ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 3x ಜೂಮ್ ಲೆನ್ಸ್‌ನೊಮದಿಗೆ ಬರಲಿದೆ ಎಂದು ಹೇಳಲಾಗಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾ ಸುಮಾರು 20 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಶವೋಮಿ 12 ಸ್ಮಾರ್ಟ್‌ಫೋನ್‌ ಬಗ್ಗೆ ಇನ್ನೂ ಹೆಚ್ಚು ವಿವರಿಸುವುದಾದರೆ ಇದು ಅತ್ಯುತ್ತಮ ಬ್ಯಾಟರಿ ಹೊಂದಿರುವುದು ಪಕ್ಕಾ ಆಗಿದೆ. 4500mAh ಸಾಮರ್ಥ್ಯದ ಬ್ಯಾಟರಿ ಮತ್ತು 67W ವೈರ್ಡ್ ಚಾರ್ಜಿಂಗ್ ಹೊಂದಿರಲಿದ್ದು ಅಷ್ಟೇ ಅಲ್ಲದೇ, 30W ವೈರ್‌ಲೆಸ್ ಚಾರ್ಜಿಂಗ್‌ ಸಹ ಜೊತೆಗೂಡಿದೆ.

ರೇಟೆಷ್ಟು?
ಅಂದಹಾಗೆ ಭಾರತದಲ್ಲಿ ಶಿಯೋಮಿ 12 ಸ್ಮಾರ್ಟ್‌ಫೋನ್‌ 44,000 ರೂಪಾಯಿಗೆ ಮಾರುಕಟ್ಟೆಯಲ್ಲಿ ಸಿಗುವ ಸಂಭವವಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: Smartphone Battery life : ಸ್ಮಾರ್ಟ್‌ಫೋನ್ ಚಾರ್ಜ್ ಉಳಿಸಲು ಸ್ಮಾರ್ಟ್ ಸಲಹೆಗಳು

(Xiaomi 12 Series Xiaomi 12 and Xiaomi 12 pro will be releasing tomorrow December 28th

Comments are closed.