Adithi Prabhudeva : ಕನಸು ನನಸಾಯ್ತು ಎಂದ ಅದಿತಿ ಪ್ರಭುದೇವ: ಸದ್ದಿಲ್ಲದೇ ಮಾಡಿಕೊಂಡ್ರಾ ಎಂಗೇಜ್​ಮೆಂಟ್​..?

Adithi Prabhudeva :ಸೋಶಿಯಲ್​ ಮೀಡಿಯಾದಲ್ಲಿ ಸದಾ ಕನ್ನಡಾಭಿಮಾನ ತೋರುತ್ತಾ ಅಭಿಮಾನಿಗಳನ್ನು ಸಂಪಾದಿಸಿರುವ ಸ್ಯಾಂಡಲ್​ವುಡ್​ ನಟಿ ಅದಿತಿಪ್ರಭುದೇವ ತಮ್ಮ ನಟನಾ ಜೀವನದಲ್ಲಿಯೂ ಯಶಸ್ಸನ್ನು ಸಂಪಾದಿಸುತ್ತಿದ್ದಾರೆ. ಮೊದಲು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಈ ನಟಿ ಇದೀಗ ಚಂದನವನದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾ, ನಟನೆ ಇವೆಲ್ಲದರ ನಡುವೆಯೇ ನಟಿ ಅದಿತಿ ಪ್ರಭುದೇವ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ..! ಹೌದು..! ನಟಿ ಅದಿತಿ ಪ್ರಭುದೇವ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರಾ ಎಂಬ ಸುದ್ದಿ ಮಿಂಚಿನ ವೇಗದಲ್ಲಿ ಹರಿದಾಡುತ್ತಿದೆ.


ಅಂದಹಾಗೆ ನಟಿ ಅದಿತಿ ಪ್ರಭುದೇವ ಎಂಗೇಜ್​ಮೆಂಟ್​ ಬಗ್ಗೆ ಇದ್ದಕ್ಕಿದ್ದಂತೆ ಜನರು ಮಾತನಾಡೋಕೆ ಕಾರಣ ಕೂಡ ಇದೆ. ನಟಿ ಅದಿತಿ ಪ್ರಭುದೇವ ಹುಡಗನೊಬ್ಬರ ಜೊತೆ ನಿಂತು ತಮ್ಮ ಉಂಗುರು ಹೈಲೈಟ್​ ಮಾಡಿರುವಂತಹ ಫೋಟೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋವನ್ನು ಅದಿತಿ ಪೋಸ್ಟ್​ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಅದಿತಿಗೆ ನಿಶ್ಚಿತಾರ್ಥದ ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.


ಮೂಲಗಳ ಪ್ರಕಾರ ನಟಿ ಅದಿತಿ ಪ್ರಭುದೇವ ನಿನ್ನೆ ಹೊಳೆನರಸೀಪುರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿರುವ ವರ ಮೂಲತಃ ದಾವಣೆಗರೆ ನಿವಾಸಿಯಾಗಿದ್ದು ಉದ್ಯಮ ಕ್ಷೇತ್ರದಲ್ಲಿದ್ದಾರೆ ಎನ್ನಲಾಗಿದೆ.ಇನ್​​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿರುವ ಅದಿತಿ ಪ್ರಭುದೇವ ಒಂದು ಕನಸೊಂದು ಕನಸಿನಂತೆ ನನಸಾಗಿದೆ ಎಂದು ಬರೆದುಕಂಡಿದ್ದಾರೆ. ಆದರೆ ಈ ಬಗ್ಗೆ ನಟಿ ಅದಿತಿ ಪ್ರಭುದೇವ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಕೆಲ ದಿನಗಳ ಹಿಂದಷ್ಟೇ ಏಕ್​ ಲವ್​ ಯಾ ಸಿನಿಮಾದ ಈವೆಂಟ್​ ಒಂದಕ್ಕೆ ಆಗಮಿಸಿದ್ದ ನಟಿ ಅದಿತಿ ಪ್ರಭುದೇವ ಲವ್​ ಮ್ಯಾರೇಜ್​ ಬಗ್ಗೆ ಕೆಲವೊಂದಿಷ್ಟು ಅಭಿಪ್ರಾಯಗಳನ್ನು ಶೇರ್​ ಮಾಡಿದ್ದರು. ಗಂಡು ಮಕ್ಕಳಿಗೆ ಬೇಕಾಗುವಂತೆ ಹುಡುಗಿಯರಿಗೆ ಬ್ರೇಕಪ್​ ಸಾಂಗ್​ ಬೇಕಾಗೋದಿಲ್ಲ. ಹುಡುಗಿಯರು ಮನಸಿನಲ್ಲೇ ಎಲ್ಲವನ್ನು ಫೀಲ್​ ಮಾಡ್ತಾರೆ. ಅದರಲ್ಲೂ ನಾನಂತೂ ಲವ್​ ಮಾಡೇ ಇಲ್ಲ. ಇನ್ನು ಬ್ರೇಕಪ್​ ಎಲ್ಲಿಂದ..? ನನಗೆ ಪ್ರೀತಿ ಮೇಲೆ ಮಾತ್ರ ನಂಬಿಕೆ ಇದೆ. ಪ್ರೇಮ ವಿವಾಹದ ಮೇಲೆ ಇಲ್ಲ. ಹೀಗಾಗಿ ನಾನು ಅರೇಂಜ್ಡ್​ ಮ್ಯಾರೇಜ್​ ಆಗುತ್ತೇನೆ ಎಂಬರ್ಥದಲ್ಲಿ ಮಾತನಾಡಿದ್ದರು.

sandlewood actress adithi prabhudeva got engaged with davanagere based business man: photos goes viral

ಇದನ್ನು ಓದಿ : Ravichandran joins Darshan in Kranti : ಚಾಲೆಂಜಿಂಗ್ ಸ್ಟಾರ್ ಗೆ ಕ್ರೇಜಿಸ್ಟಾರ್ ಸಾಥ್: ದರ್ಶನ್ ಕ್ರಾಂತಿ ಸಿನಿಮಾ ಸೆಟ್ ಸೇರಿದ ರವಿಚಂದ್ರನ್

ಇದನ್ನೂ ಓದಿ : Top 5 OTT films of this week: ಈ ವಾರ ಓಟಿಟಿಯಲ್ಲಿ ರಿಲೀಸ್ ಆದ ಟಾಪ್ 5 ಚಿತ್ರಗಳು; ನೀವು ವೀಕ್ಷಿಸಬೇಕಾದ ಸರಣಿಗಳಿವು

Comments are closed.