Operation Demolishan : ಬೆಂಗಳೂರಲ್ಲಿ ಆಪರೇಶನ್‌ ಡೆಮೋಲಿಶನ್ : ಪೆಟ್ರೋಲ್ ಸುರಿದು ದಂಪತಿ ಆತ್ಮಹತ್ಯೆ ಯತ್ನ

ಬೆಂಗಳೂರು : (Operation Demolishan )ಬಿಬಿಎಂಪಿ ಕೈಗೊಂಡಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಅದ್ರಲ್ಲೂ ದಂಪತಿಗಳಿಬ್ಬರು ತಮ್ಮ ಮನೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮನೆಯ ಮುಂಭಾಗದಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಲ್ಲದೇ ಸರಕಾರ ಹಾಗೂ ಬಿಬಿಎಂಪಿಗೆ ಹಿಡಿಶಾಪ ಹಾಕಿದ್ದಾರೆ.

ಸೋನಾ ಮತ್ತು ಸುನೀಲ್‌ ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ದಂಪತಿ.ಬೆಂಗಳೂರಿನ ಆರ್.ಪುರಂ ನ ಗಾಯತ್ರಿ ಲೇ ಔಟ್‌ ವ್ಯಾಪ್ತಿಯಲ್ಲಿಂದು ಬಿಬಿಎಂಪಿ ಒತ್ತುವರಿ ತೆರವು (Operation Demolishan )ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಈ ವೇಳೆಯಲ್ಲಿ ಅಧಿಕಾರಿಗಳು ಬುಲ್ಡೋಜರ್ ಸಹಾಯದಿಂದ ಮನೆಯನ್ನು ಕೆಡವಲು ಮುಂದಾದಾಗ ದಂಪತಿಗಳು ಮನೆಯನ್ನು ತೆರವು ಮಾಡದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯ ಮುಂಭಾಗದಲ್ಲಿ ಪೆಟ್ರೋಲ್ ಸುರಿದು ಆಕ್ರೋಶ ವ್ಯಕ್ತಪಡಿಸಿದ ದಂಪತಿ, ಒತ್ತುವರಿ ತೆರವು ವಿಚಾರದಲ್ಲಿ ಬಿಬಿಎಂಪಿ ಜನರ ಜೀವನದ ಜೊತೆ ಆಟವಾಡುತ್ತಿದೆ. ನಮ್ಮ ಮನೆಯನ್ನು ಹೇಗೆ ಕೆಡವುತ್ತೀರಿ ಎಂದು ದಂಪತಿಗಳು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : Aadhar Card Renewal : ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಕಳೆದಿದ್ಯಾ ? ಹಾಗಾದ್ರೆ ಈ ಸ್ಟೋರಿ ತಪ್ಪದೇ ಓದಿ

ಇದನ್ನೂ ಓದಿ : Aishwarya rai photo on student admit card :ಪರೀಕ್ಷೆ ಹಾಲ್‌ ಟಿಕೆಟ್‌ ನಲ್ಲಿ ಐಶ್ವರ್ಯಾ ರೈ ಪೋಟೋ : ಶಾಕ್‌ ಆದ ವಿದ್ಯಾರ್ಥಿನಿ

“ನಲವತ್ತು ಲಕ್ಷ ಸಾಲ ಮಾಡಿ ಮನೆಯನ್ನು ಕಟ್ಟಿದ್ದೇವೆ , ಇದೀಗ ನಮ್ಮ ಮನೆಯನ್ನು ಹೇಗೆ ಡೆಮೋಲಿಶ್‌ ಮಾಡುತ್ತಿದ್ದೀರಾ ? ನಾವು ಬಿಡಲ್ಲ ” ಎಂದು ಪೆಟ್ರೋಲ್‌ ಸುರಿದುಕೊಂಡು ದಂಪತಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಪೋಲೀಸರು ಮತ್ತು ಪಾಲಿಕೆ ಸಿಬ್ಬಂಧಿಗಳ ಎದುರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಧಿಕಾರಿಗಳ ಎದುರಲ್ಲೇ ಆತ್ಮಹತ್ಯೆಗೆ ಯತ್ನಿಸಿದ ದಂಪತಿ, ನಮಗೆ ನ್ಯಾಯ ಬೇಕು , ನ್ಯಾಯ ಸಿಗುವ ವರೆಗೂ ನಾವು ಬಿಡುವುದಿಲ್ಲ. ನಮ್ಮ ಜೀವನದ ಜೊತೆ ಸರ್ಕಾರ ಆಟವಾಡುತ್ತಿದೆ . ನಲವತ್ತು ಲಕ್ಷ ಸಾಲ ಮಾಡಿ ಮನೆಯನ್ನು ಕಷ್ಟ ಪಟ್ಟು ಕಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಮನೆಯನ್ನು ತೆರವು ಮಾಡದಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೂ ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ : Bengaluru Rains : ರಾಜ್ಯದಲ್ಲಿ ವರುಣಾರ್ಭಟ ; ಕರಾವಳಿ, ಮಲೆನಾಡಲ್ಲಿ ಯೆಲ್ಲೋ ಅಲರ್ಟ್‌

ರಾಜ್ಯ ಸರಕಾರ ಜನಸಾಮಾನ್ಯರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ. ಕಷ್ಟಪಟ್ಟು ಸಾಲ ಸೋಲ ಮಾಡಿ ಬಡವರು ಕಟ್ಟಿಸಿದ ಮನೆಯನ್ನು ಒಡೆಯುವ ಬಿಬಿಎಂಪಿ, ರಾಜಕಾರಣಿಗಳು, ಉದ್ಯಮಿಗಳ ಮನೆಯನ್ನು ತೆರವು ಮಾಡದೇ ಅಮಾನವೀಯವಾಗಿ ವರ್ತಿಸುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

(Operation Demolishan) Anger is being expressed against the Rajkaluva encroachment clearance operation undertaken by BBMP. In order to save their house, two couples tried to commit suicide by pouring petrol in front of the house. He also cursed the government and BBMP.

Comments are closed.