AAP Govt in Delhi Under Threat : ಪತನದ ಭೀತಿಯಲ್ಲಿ ದೆಹಲಿಯ ಆಪ್​ ಸರ್ಕಾರ : ಸಂಪರ್ಕಕ್ಕೆ ಸಿಗದ ಶಾಸಕರು

ದೆಹಲಿ : AAP Govt in Delhi Under Threat : ಸಂಪೂರ್ಣ ದೇಶವನ್ನು ಕೇಸರಿಮಯ ಮಾಡಲು ಬಿಜೆಪಿಯು ಇನ್ನಿಲ್ಲದ ರಣತಂತ್ರವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬಳಕೆ ಮಾಡುತ್ತಲೇ ಇದೆ. ತಾಜಾ ಉದಾಹರಣೆ ಎಂಬಂತೆ ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಉರುಳಿದ್ದು ನೆನಪಿದ್ದಿರಬಹುದು.ಬಿಹಾರದಲ್ಲಿಯೂ ಇಂತಹದ್ದೊಂದು ಪ್ರಯತ್ನವನ್ನೂ ಬಿಜೆಪಿ ಮಾಡಿತ್ತು ಆದರೆ ಯಶಸ್ವಿಯಾಗುವಲ್ಲಿ ಸೋತಿತ್ತು. ಇದೀಗ ಬಿಜೆಪಿಯ ಕಣ್ಣು ದೆಹಲಿ ಸರ್ಕಾರದ ಮೇಲೆ ಬಿದ್ದಿದೆಯೇ ಎಂಬ ಅನುಮಾನ ಮೂಡಿದೆ. ಬಿಜೆಪಿಯು ನಮ್ಮ ಶಾಸಕರನ್ನು ಸೆಳೆದುಕೊಳ್ಳುತ್ತಿದೆ ಎಂದು ಆಮ್​ ಆದ್ಮಿ ಪಕ್ಷ ಆರೋಪ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿಗಳ ನಿವಾಸದಲ್ಲಿ ಆಮ್​ ಆದ್ಮಿ ಪಕ್ಷದ ಶಾಸಕರ ಮಹತ್ವದ ಸಭೆಯನ್ನು ಕರೆದಿದೆ.


ದೆಹಲಿಯಲ್ಲಿ ಕೇಜ್ರಿವಾಲ್​​ ನೇತೃತ್ವದ ಸರ್ಕಾರವನ್ನು ಉರುಳಿಸಬೇಕೆಂದು ಬಿಜೆಪಿಯು ಆಪ್​ನ ಶಾಸಕರಿಗೆ ಬೆದರಿಕೆ ಹಾಗಗೂ ಆಮಿಷವೊಡ್ಡುತ್ತಿದೆ ಎಂದು ಆಮ್​ ಆದ್ಮಿ ಪಕ್ಷ ಆರೋಪ ಮಾಡುತ್ತಿದೆ. ಬಿಜೆಪಿಗೆ ಆಪ್​ ಪಕ್ಷ ಮಾತ್ರ ವಿರೋಧಿಯಾಗಿರೋದ್ರಿಂದ ಬಿಜೆಪಿಯು ಈ ರೀತಿ ಹುನ್ನಾರ ನಡೆಸಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಆರೋಪಿಸಿದ್ದಾರೆ .


ಆಮ್​ ಆದ್ಮಿ ಪಕ್ಷದ ನಾಯಕ ಸೌರಭ್​ ಭಾರಧ್ವಾಜ್​​ ಈ ವಿಚಾರವಾಗಿ ಮಾತನಾಡಿದ್ದು ರಾಷ್ಟ್ರ ರಾಜಧಾನಿಯಲ್ಲಿ ಕೇಜ್ರಿವಾಲ್​ ನೇತೃತ್ವದ ಸರ್ಕಾರವನ್ನು ಪತನಗೊಳಿಸಲು ಆಪ್​ ಶಾಸಕರಿಗೆ 20 ಕೋಟಿ ರೂಪಾಯಿಗಳನ್ನು ಬಿಜೆಪಿ ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷವನ್ನು ಕೆಳಗಳಿಸಬೇಕೆಂದು ಬಿಜೆಪಿಯು ಆಪ್​ನ ಶಾಸಕರಿಗೆ 20 ಕೋಟಿ ರೂಪಾಯಿ ಆಫರ್​ ಮಾಡಿದೆ ಎಂದು ಸೌರಭ್​ ಸುದ್ದಿಗೋಷ್ಠಿ ಕರೆದು ಆರೋಪಿಸಿದ್ದರು.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆದಿದ್ದ ಆಪ್​​ ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ಸಂಸದ ಸಂಜಯ್​ ಸಿಂಗ್​ ಕೂಡ ಇದೇ ಆರೋಪ ಮಾಡಿದ್ದಾರೆ.ಬಿಜೆಪಿಯು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕುದುರೆ ವ್ಯಾಪಾರ ನಡೆಸುತ್ತಿದೆ. ಮಹಾರಾಷ್ಟ್ರದಲ್ಲಿ ಇದೇ ಬಿಜೆಪಿ ರಣತಂತ್ರ ಹೂಡಿ ಶಾಸಕರನ್ನು ಖರೀದಿ ಮಾಡಿ ಮಹಾ ಅಘಾಡಿ ಸರ್ಕಾರವನ್ನು ಪತನಗೊಳಿಸಿತ್ತು. ಇದೀಗ ಬಿಜೆಪಿಯ ಕಣ್ಣು ದೆಹಲಿಯ ಮೇಲೆ ಬಿದ್ದಿದೆ. ಇವರ ಹಣದ ಆಫರ್​ ಒಪ್ಪದೇ ಹೋದಲ್ಲಿ ಅಂತಹ ಶಾಸಕರಿಗೆ ಇಡಿ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ : Heavy Rainfall alert: ಮುಂದಿನ 3 ದಿನ ಭಾರಿ ಮಳೆ ಎಚ್ಚರಿಕೆ: ಶಾಲೆಗಳಿಗೆ ರಜೆ

ಇದನ್ನೂ ಓದಿ : Twist in Ramachari serial:ರಾಮಾಚಾರಿ ಮನೆಯಲ್ಲಿ ಪತ್ತೆಯಾಯ್ತು ಡ್ರಗ್ಸ್​ : ವರ್ಕೌಟ್​ ಆಗುತ್ತಾ ಚಾರು-ಮಾನ್ಯತಾ ಪ್ಲಾನ್​

AAP Govt in Delhi Under Threat : Several MLAs Remain Untraceable Ahead of Meeting at CM Arvind Kejriwal’s Residence

Comments are closed.