16 ಕೋಲು ಆಯದ ಏಕೈಕ ಕರಾವಳಿಯ ಗರಡಿ :  ಎರ್ಮಾಳ್ ಗರಡಿಯಲ್ಲಿ ಎ.11ರಿಂದ ವಾರ್ಷಿಕ ನೇಮೋತ್ಸವ

ಉಡುಪಿ : ತುಳುನಾಡಲ್ಲೇ 16 ಕೋಲು ಆಯದ ಏಕೈಕ ಗರಡಿ ಎಂದು ಖ್ಯಾತಿ ಹೊಂದಿರುವ ಎರ್ಮಾಳು ಗರಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವಾರ್ಷಿಕ ನೇಮೋತ್ಸವ ಏಪ್ರಿಲ್ 11ರಂದು  ಜರುಗಲಿದೆ.

ಜನಪದದಲ್ಲಿ ಸಂದು ದಾಂತಿ ಗರಡಿ ಎಂಬ ಖ್ಯಾತಿಗೆ ಪಾತ್ರವಾಗಿರುವ 66 ಗರಡಿಗಳಲ್ಲಿಯೇ ಎರ್ಮಾಳ್ ಗರಡಿ ವಿಶೇಷ ವಾಸ್ತುಶಿಲ್ಪಕ್ಕೆ ಉಲ್ಲೇಖಗೊಂಡಿದೆ. ತಂದೊಳಿಗೆ ಮರಗಳ ಸಾಲಿರುವ ಹಾಡಿಯ ಪ್ರದೇಶದಲ್ಲಿ ನೆಲೆನಿಂತಿವೆ.

16 ಕೋಲು ಆಯದಲ್ಲಿ ಏಕೈಕ ಮರದಿಂದ ಕಟ್ಟಿಸಲ್ಪಟ್ಟ 66 ಗರಡಿ ಗಳಲ್ಲಿ 6 ಕಂಬದ ಇಲ್ಲದ ಗರೋಡಿ ಇದೆಂದು ಪ್ರಸಿದ್ಧಿ ಪಡಿದಿವೆ. ಈ ರೀತಿಯ ಉಲ್ಲೇಖ ಪಾಡ್ದನಗಳಲ್ಲಿ ಈ ಗರಡಿಯ ಬಗ್ಗೆ ಬಂದಿರುವುದು ಈ ಗರಡಿ ಕೋಟಿ- ಚೆನ್ನಯರ ವಿಷಯದಲ್ಲಿ ವಿಶೇಷ ಸ್ಥಾನಮಾನ ಪಡೆದಿದೆ.

ಉಡುಪಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಎರ್ಮಾಳು ಬಳಿ ಇರುವ ಈ ಗರಡಿ 66 ಗರಡಿಗಳಲ್ಲಿ ವಿಶೇಷವಾದ ಗರಡಿ ಎಂಬ ಖ್ಯಾತಿಗೆ ಪಾತ್ರವಾಗಿದೆ.

9 ರಿಂದ ಆರಂಭಗೊಂಡು ಏಪ್ರಿಲ್ 16 ರವರೆಗೆ ವಿಶೇಷ ಕಾರ್ಯಕ್ರಮ ಗಳು ಈ ಗರಡಿಯಲ್ಲಿ ಜರುಗಲಿವೆ.

Comments are closed.