Viral Video : ದೇಶ ಕಾಯೋ ಯೋಧರೊಂದಿಗೆ ನರ್ತಿಸಿದ ಬಾಲಿವುಡ್ ನಟ ಅಕ್ಷಯ್ ಕುಮಾರ್

ನವದೆಹಲಿ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದೀಗ ದೇಶ ಕಾಯೋ ಯೋಧರೊಂದಿಗೆ ನರ್ತಿಸೋ ಮೂಲಕ ಸುದ್ದಿಯಲ್ಲಿದ್ದಾರೆ. ಕಾಶ್ಮೀರದ ಬಿಎಸ್ಎಫ್ ಯೋಧರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿರುವ ತಮ್ಮ ಶಿಬಿರದಲ್ಲಿರುವ ಬಿಎಸ್ಎಫ್ ಯೋಧರನ್ನು ನಟ ಅಕ್ಷಯ್ ಕುಮಾರ್ ಭೇಟಿ ಮಾಡಿದ್ದಾರೆ. ಯೋಧರ ಜೊತೆಗೆ ಕೆಲಹೊತ್ತು ಕಾಲ ಕಳೆದ ಅಕ್ಷಯ್ ಕುಮಾರ್ ಯೋಧರು ಹಾಗೂ ಸ್ಥಳೀಯರ ಜೊತೆ ಸೇರಿ ಹಾಡಿ ಕುಳಿಯುವ ಮೂಲಕ ಭರ್ಜರಿ ಮನರಂಜನೆಯನ್ನು ನೀಡಿದ್ದಾರೆ. ಅಲ್ಲದೇ ಯೋಧರ ಜೊತೆಗೆ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾರೆ.

ನಟ ಅಕ್ಷಯ್ ಕುಮಾರ್ ಆಗಮನದ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಸೇರಿದ್ದಾರೆ. ಆದ್ರೆ ಡ್ಯಾನ್ಸ್ ಮಾಡುವ ವೇಳೆಯಲ್ಲಿ ನಟ ಅಕ್ಷಯ್ ಕುಮಾರ್ ಮಾಸ್ಕ್ ಧರಿಸಿಲ್ಲ. ಅಲ್ಲದೇ ಸಾಮಾಜಿಕ ಅಂತರ ಪಾಲನೆ ಮಾಡಿಲ್ಲ ಅನ್ನೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಈ ಹಿಂದೆಯೂ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹಾಗೂ ಇತರ ಬಾಲಿವುಡ್ ನಟರು ಕೂಡ ಯೋಧರ ಜೊತೆಗೆ ಕಾಲ ಕಳೆದಿದ್ದರು. ದೇಶ ಕಾಯೋ ಯೋಧರನ್ನು ಭೇಟಿ ಮಾಡುವ ಮೂಲಕ ಅಕ್ಷಯ್ ಕುಮಾರ್ ಇದೀಗ ದೇಶ ಭಕ್ತಯನ್ನು ಸಾರುವ ಕಾರ್ಯವನ್ನು ಮಾಡುತ್ತಿದ್ದಾರೆ.

Comments are closed.