ಸತ್ತ ಮಗನನ್ನು ಬದುಕಿಸಿದ ತಾಯಿ : ಅಂತ್ಯಕ್ರೀಯೆ ಹೊತ್ತಲ್ಲಿ ನಡೆಯಿತು ಪವಾಡ ..!!

ಹರಿಯಾಣ : ಆ ಮಗುವನ್ನು ಟೈಪಾಯಿಡ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಮಗು ಸಾವನ್ನಪ್ಪಿರೋದಾಗಿ ಘೋಷಿಸಿದ್ದರು. ಅಷ್ಟೇ ಅಲ್ಲ ಮಗುವಿನ ಶವವನ್ನೂ ಪೋಷಕರಿಗೆ ಹಸ್ತಾಂತರ ಮಾಡಿದ್ರು. ಇನ್ನೇನು ಮಗುವಿನ ಅಂತ್ಯಕ್ರೀಯೆ ಮಾಡಬೇಕು ಅನ್ನೋ ಹೊತ್ತಲ್ಲೇ ಅಲ್ಲೊಂದು ಪವಾಡ ನಡೆದಿದೆ.

ಹರಿಯಾಣದ ಬಹದ್ದೂರ್ ಜಿಲ್ಲೆಯ ಫೋರ್ಟ್ ಮೊಹಲ್ಲಾ ನಿವಾಸಿ ವಿಜಯ್ ಶರ್ಮಾ ಅವರ ಮೊಮ್ಮಗ ಕುನಾಲ್ ಶರ್ಮಾ ಮೇ 26ರಂದು ಸಾವನ್ನಪ್ಪಿರೋ ಕುರಿತು ದೆಹಲಿ ಆಸ್ಪತ್ರೆಯ ವೈದ್ಯರು ಘೋಷಣೆ ಮಾಡಿದ್ದರು. ತಂದೆ ಹಿತೇಶ್‍ ಹಾಗೂ ತಾಯಿ ಜಾನ್ವಿ ಅವರಿಗೆ ಮೃತದೇಹವನ್ನು ಹಸ್ತಾಂತರ ಮಾಡಿದದರು. ಮಗುವಿನ ಮೃತದೇಹವನ್ನು ಮನೆಗೆ ಕೊಂಡೊಯ್ದು ತಾಯಿ ರೋಧಿಸೋದಕ್ಕೆ ಶುರುಮಾಡಿದ್ರು. ಮತ್ತೆ ಎದ್ದು ಬಾ ಎಂದು ಬೇಡುತ್ತಾ, ದೇವರಲ್ಲಿ ಪರಿ ಪರಿಯಾಗಿ ಪ್ರಾರ್ಥಿಸಿದ್ದಾರೆ.

ಎಲ್ಲಾ ವಿಧಿವಿಧಾನಗಳಿಗೆ ಸಿದ್ದತೆ ಮಾಡಿಕೊಳ್ಳುವಾಗಲೇ ಪ್ಯಾಕ್ ಮಾಡಿರುವ ಮೃತದೇಹದಲ್ಲಿ ಚಲನೆ ಕಾಣಿಸಿದೆ. ಕೂಡಲೇ ಮೃತದೇಹದ ಪ್ಯಾಕ್ ಓಪನ್ ಮಾಡುತ್ತಿದ್ದಂತೆಯೇ ಕುನಾಲ್ ಉಸಿರಾಡುತ್ತಿರೋದು ಅರಿವಿಗೆ ಬಂದಿದೆ. ಅಲ್ಲದೇ ಬಾಯಿಯ ಮೂಲಕ ಉಸಿರಾಟ ನಡೆಸುತ್ತಿರೋದು ತಿಳಿಯುತ್ತಿದ್ದಂತೆಯೇ ಎದೆಯನ್ನು ಜೋರಾಗಿ ಒತ್ತುವುದಕ್ಕೆ ಶುರು ಮಾಡಿದ್ದಾರೆ. ಇದರಿಂದಾಗಿ ಕುನಾಲ್ ಉಸಿರಾಡೋದಕ್ಕೆ ಶುರು ಮಾಡಿದ್ದ.

ಕೂಡಲೇ ಕುನಾಲ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಸ್ಪತ್ರೆಯ ವೈದ್ಯರು ಶೇ.15ರಷ್ಟು ಹುಡುಗ ಬದುಕೋದಕ್ಕೆ ಸಾಧ್ಯವೇ ಇಲ್ಲಾ ಎಂದು ತಿಳಿಸಿದ್ದಾರೆ. ಆದರೆ ಇದೀಗ ಕೆಲವು ದಿನಗಳ ಕಾಲ ಚಿಕಿತ್ಸೆಯನ್ನು ಪಡೆದ ನಂತರದಲ್ಲಿ ಕುನಾಲ್ ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ತಲುಪಿದ್ದಾನೆ. ಮನೆ ಮಗ ಮನೆಗೆ ಬರುತ್ತಿದ್ದಂತೆಯೇ ಕುಟುಂಬ ಸಂಭ್ರಮದಲ್ಲಿ ತೇಲಾಡುತ್ತಿದ್ರೆ, ಜನರು ಮಾತ್ರ ಇದೊಂದು ಪವಾಡ ಅಂತಾನೇ ಹೇಳುತ್ತಿದ್ದಾರೆ.

Comments are closed.