SSC CGL exam : ಉದ್ಯೋಗಾಕಾಂಕ್ಷಿಗಳ ಗಮನಕ್ಕೆ : ಎಸ್​ಎಸ್​ಸಿ ಸಿಜಿಎಲ್​ ಪರೀಕ್ಷೆಗೆ ದಿನಾಂಕ ನಿಗದಿ

SSC CGL exam ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು ಹಾಗೂ ಇಲಾಖೆಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಸಿಬ್ಬಂದಿ ನೇಮಕಾತಿ ಆಯೋಗವು ಶುಭ ಸುದ್ದಿಯನ್ನು ನೀಡಿದೆ. ಕಂಬೈನ್ಡ್​ ಗ್ರ್ಯಾಜುವೇಟ್​ ಲೆವೆಲ್​ ಪರೀಕ್ಷೆಯ 1ನೇ ಶ್ರೇಣಿಯನ್ನು ಏಪ್ರಿಲ್​ 2022ರಲ್ಲಿ ನಡೆಸಲಾಗುವುದು ಎಂದು ಘೋಷಣೆ ಮಾಡಿದೆ.

ಕಂಬೈನ್ಡ್​ ಗ್ರ್ಯಾಜುಯೇಟ್​ ಲೆವೆಲ್​ ಪರೀಕ್ಷೆಗೆ ನೋಂದಣಿಯು ಇದೇ ತಿಂಗಳ 23ನೇ ತಾರೀಖಿನಿಂದ ಆರಂಭಗೊಳ್ಳಲಿದೆ ಎಂದು ಸಿಬ್ಬಂದಿ ನೇಮಕಾತಿ ಆಯೋಗವು ಮಾಹಿತಿ ನೀಡಿದೆ. ಎಸ್​ಎಸ್​ಸಿ ಸಿಜಿಎಲ್​ ದೇಶದಲ್ಲಿ ನಡೆಯುವ ಅತೀದೊಡ್ಡ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಗೆ ಹಾಜರಾಗಬಯಸುವ ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಯು ಕನಿಷ್ಟ ವಿದ್ಯಾರ್ಹತೆಯಾಗಿದೆ.

ಎಸ್​ಎಸ್​ಸಿ ಸಿಜಿಎಲ್ ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳು, ಸಚಿವಾಲಯ ಹಾಗೂ ಇಲಾಖೆಗಳಲ್ಲಿ​ ವಿವಿಧ ಗ್ರೂಪ್​ ಬಿ ಹಾಗೂ ಗ್ರೂಪ್​ ಸಿ ಹದ್ದೆಗಳಿಗೆ ನೇಮಕಾತಿ ನಡೆಸಲು ಮುಂದಾಗಿದೆ. ದಾಖಲೆಗಳ ಪರಿಶೀಲನೆಗೆ ಕರೆಯಲಾಗುವ ಎಲ್ಲಾ ಅಭ್ಯರ್ಥಿಗಳು ಕನಿಷ್ಟ ಶೈಕ್ಷಣಿಕ ಅರ್ಹತೆಯನ್ನು ಪುರಾವೆಯಾಗಿ ತೋರಿಸುವ ಸಲುವಾಗಿ ಮೂರು ವರ್ಷಗಳ ಪದವಿ ಅಂಕಪಟ್ಟಿಯನ್ನು ಹಾಜರುಪಡಿಸಬೇಕಾಗುತ್ತದೆ. ಈ ಪುರಾವೆಗಳನ್ನು ತೋರಿಸಲು ವಿಫಲರಾಗುವ ಅಭ್ಯರ್ಥಿಗಳನ್ನು ಆಯೋಗವು ರದ್ದುಪಡಿಸಲಿದೆ.

ಎಸ್​ಎಸ್​ಸಿ ಸಿಜಿಎಲ್ ಹುದ್ದೆಗಳಿಗೆ ಎರಡು ಕಂಪ್ಯೂಟರ್​ ಆಧಾರಿತ ಪರೀಕ್ಷೆಗಳನ್ನು ನಡೆಸಿದ ಅದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ವಿವರಣಾತ್ಮಕ ಪೇಪರ್ ಮತ್ತು ಕಂಪ್ಯೂಟರ್ ಪ್ರಾವೀಣ್ಯತೆಯ ಪರೀಕ್ಷೆ / ಡೇಟಾ ಎಂಟ್ರಿ ಕೌಶಲ್ಯ ಪರೀಕ್ಷೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ ತಾತ್ಕಾಲಿಕ ಉತ್ತರ ಕೀಗಳನ್ನು ಪರೀಕ್ಷೆಯ ನಂತರ ಆಯೋಗದ ವೆಬ್‌ಸೈಟ್‌ನಲ್ಲಿ ಇರಿಸಲಾಗುತ್ತದೆ

ಇದನ್ನು ಓದಿ : SBI Recruitment 2021 : ಪದವೀಧರರಿಗೆ ಎಸ್‌ಬಿಐನಲ್ಲಿದೆ 1,200 CBO ಹುದ್ದೆ, 36,000 ರೂ. ವೇತನ

ಇದನ್ನು ಓದಿ : Aishwarya Rai Bachchan: ನಟಿ ಐಶ್ವರ್ಯಾ ರೈ ಬಚ್ಚನ್‌ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ

ಇದನ್ನೂ ಓದಿ : Mumbai Indians IPL 2022: ಹಾರ್ದಿಕ್‌ ಪಾಂಡ್ಯ, ಟ್ರೆಂಟ್‌ ಬೌಲ್ಟ್‌ ಅವರನ್ನು ಕರೆತರಲಿದೆ ಮುಂಬೈ ಇಂಡಿಯನ್ಸ್‌

ಇದನ್ನೂ ಓದಿ :Second Hand electric bikes Market: ಅಪ್‌ವೇ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ಬೈಕ್‌ ಖರೀದಿಸಲು, ಮಾರಲು ಹೊಸದೊಂದು ಸ್ಟಾರ್ಟ್‌ಅಪ್

SSC CGL exam in April, registration begins on December 23 at ssc.nic.in portal

Comments are closed.