Amarnath : ಮೇಘಸ್ಫೋಟದ ಕರಾಳ ಅನುಭವವನ್ನು ಬಿಚ್ಚಿಟ್ಟ ಅಮರನಾಥ ಯಾತ್ರಾರ್ಥಿಗಳು

ಜಮ್ಮು & ಕಾಶ್ಮೀರ : Amarnath : ದಕ್ಷಿಣ ಕಾಶ್ಮೀರದ ಪವಿತ್ರ ಅಮರನಾಥ ಗುಹೆಯ ಬಳಿಯಲ್ಲಿ ಮೇಘಸ್ಫೋಟ ಸಂಭವಿಸಿದ್ದು ಕನಿಷ್ಟ 16 ಮಂದಿ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಇನ್ನು ಮೇಘಸ್ಫೋಟಕ್ಕೆ ತುತ್ತಾದ ಅಮರನಾಥ ಗುಹೆಯಿಂದ ಸೋನಾಮಾರ್ಗ್​ನ ಬಾಲ್ಟಾಲ್​​ ಬೇಸ್ ಕ್ಯಾಂಪ್​ ತಲುಪುವಲ್ಲಿ ಯಶಸ್ವಿಯಾದ ಕೆಲವು ಯಾತ್ರಾರ್ಥಿಗಳು ತಮಗಾದ ಘೋರ ಅನುಭವವನ್ನು ವಿವರಿಸಿದ್ದಾರೆ.


ಉತ್ತರ ಪ್ರದೇಶದ ಯಾತ್ರಾರ್ಥಿ ದೀಪಕ್ ಚೌಹಾಣ್​ ಎಂಬವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು. ಮೇಘಸ್ಫೋಟವಾಗುತ್ತಿದ್ದಂತೆಯೇ ಅಲ್ಲಿ ಕಾಲ್ತುಳಿತದ ಪರಿಸ್ಥಿತಿ ಎದುರಾಯ್ತು. ಆದರೆ ಭಾರತೀಯ ಸೇನೆಯ ಸಿಬ್ಬಂದಿ ನಮಗೆ ತುಂಬಾನೇ ಸಹಾಯ ಮಾಡಿದರು. ನೀರಿನ ರಭಸಕ್ಕೆ ಅನೇಕ ಪೆಂಡಾಲ್​ಗಳು ಕೊಚ್ಚಿ ಹೋದವು ಎಂದು ಹೇಳಿದ್ದಾರೆ.


ಮಹಾರಾಷ್ಟ್ರ ಮೂಲದ ಮತ್ತೊಬ್ಬ ಯಾತ್ರಾರ್ಥಿ ಸುಮಿತ್​ ಎಂಬವರು ಈ ವಿಚಾರವಾಗಿ ಮಾತನಾಡಿದ್ದು, ಮೇಘಸ್ಫೋಟದಿಂದ ಉಂಟಾದ ಪ್ರವಾಹವು ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನೇ ಕೊಚ್ಚಿಕೊಂಡು ಸಾಗಿತ್ತು. ಮೇಘಸ್ಫೋಟ ನಡೆದ ಸ್ಥಳದಿಂದ ನಾವು ಕೇವಲ 2 ಕಿಲೋಮೀಟರ್​ ದೂರದಲ್ಲಿ ಇದ್ದೆವು ಎಂದು ಹೇಳಿದ್ದಾರೆ .


ಮೇಘಸ್ಫೋಟ ಉಂಟಾಗುತ್ತಿದೆ ಎಂಬುದನ್ನೇ ನಮ್ಮ ಬಳಿ ನಂಬಲು ಸಾಧ್ಯವಾಗಲಿಲ್ಲ.ಸ್ವಲ್ಪ ಸಮಯದ ಬಳಿಕ ನಾವು ನೀರನ್ನು ಮಾತ್ರ ನೋಡಿದೆವು. ಬೋಲೆನಾಥನ ಕೃಪೆಯಿಂದ ನಾವು ಏಳೆಂಟು ಜನರ ಗುಂಪು ಪ್ರಾಣಾಪಾಯದಿಂದ ಪಾರಾದೆವು. ಆದರೆ ಅಲ್ಲಿದ್ದ ಅನೇಕ ಜನರು ಹಾಗೂ ಅವರ ಲಗೇಜ್​ಗಳೆಲ್ಲ ಕೊಚ್ಚಿ ಹೋಗುತ್ತಿದ್ದುದ್ದನ್ನು ನೋಡುವಾಗ ಮನಸ್ಸಿಗೆ ಘಾಸಿಯೆನಿಸುತ್ತಿತ್ತು ಎಂದು ಮತ್ತೊಬ್ಬ ಯಾತ್ರಿಕ ಹೇಳಿದ್ದಾರೆ.
ಮೇಘ ಸ್ಫೋಟ ನಡೆದು ಕೇವಲ 10 ನಿಮಿಷಗಳಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆ ನೀರಿನಲ್ಲಿ ಹೆಚ್ಚಿನ ಸಂಖ್ಯೆಯ ಬಂಡೆಗಳು ಕೊಚ್ಚಿ ಹೋಗಿವೆ. ಯಾತ್ರೆಗೆ ಸುಮಾರು 15 ಸಾವಿರ ಮಂದಿ ಯಾತ್ರಾರ್ಥಿಗಳು ಬಂದಿದ್ದರು. ಭಾರೀ ಮಳೆಯ ಹೊರತಾಗಿಯೂ ಯಾತ್ರಾರ್ಥಿಗಳು ಬರುತ್ತಲೇ ಇದ್ದರು ಎಂದು ಹೇಳಿದರು.

ಇದನ್ನು ಓದಿ : ravindra jadeja : ಸಿಎಸ್​ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ ರವೀಂದ್ರ ಜಡೇಜಾ

ಇದನ್ನೂ ಓದಿ : amarnath yatra : ಅಮರನಾಥ ಯಾತ್ರೆಯಲ್ಲಿರುವ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸೂಕ್ತ ಕ್ರಮ : ಸಿಎಂ ಬೊಮ್ಮಾಯಿ

Amarnath: Rescued pilgrims narrate horrifying experiences of witnessing cloudburst

Comments are closed.