ನಿತ್ಯವೂ 2 ಲಕ್ಷ ಮಂದಿಗೆ ಕೊರೊನಾ, 3000 ಮಂದಿ ಸಾವು : ಅಮೇರಿಕಾ ತಜ್ಞರ ಆಂತರಿಕ ವರದಿಗೆ ಬೆಚ್ಚಿಬಿದ್ದ ಡೋನಾಲ್ಡ್ ಟ್ರಂಪ್ !

0

ನ್ಯೂಯಾರ್ಕ್ : ಡೆಡ್ಲಿ ಮಹಾಮಾರಿ ದೊಡ್ಡಣ್ಣ ಅಮೇರಿಕಾವನ್ನು ಬೆಚ್ಚಿ ಬೀಳಿಸಿದೆ. ಲಕ್ಷಾಂತರ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ರೆ, ಸಾವಿರಾರು ಮಂದಿಯನ್ನು ಕೊರೊನಾ ಬಲಿ ಪಡೆದಿದೆ. ಆದ್ರೀಗ ಅಮೇರಿಕಾ ತಜ್ಞರು ನಡೆಸಿರೋ ಸಮೀಕ್ಷೆ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನೇ ನಡುಗಿಸಿದೆ.

ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಇಂದು ವಿಶ್ವದ ನೂರಾರು ರಾಷ್ಟ್ರಗಳನ್ನು ಆತಂಕ ಮೂಡಿಸಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಅಮೇರಿಕಾ ಗಿರಗಿರನೆ ತಿರುಗಿ ಬಿದ್ದಿದೆ. ಕೋವಿಡ್ -19 ಸೋಂಕನ್ನು ನಿಯಂತ್ರಿಸಲಾಗಿದೆ ಅಮೇರಿಕಾ ಕಂಡ ಕಂಡ ದೇಶಗಳಿಗೆ ಮೊರೆಯಿಡುತ್ತಿದೆ.

ಭಾರತದಿಂದ ಟನ್ ಗಟ್ಟಲೆ ಔಷಧ ಪೂರೈಕೆ ಮಾಡಿದ್ದರೂ ಅಮೇರಿಕಾದಲ್ಲಿ ವರ್ಕೌಟ್ ಆಗ್ತಿಲ್ಲ. ನಿತ್ಯವೂ ನೂರಾರು ಸಂಖ್ಯೆಯಲ್ಲಿ ಜನರು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ವೈದ್ಯಕೀಯ ತಜ್ಞರು ಡೆಡ್ಲಿ ಮಾರಿಗೆ ಔಷಧ ಸಂಶೋಧನೆ ನಡೆಸುತ್ತಿದ್ದಾರೆ. ಆದ್ರಿನ್ನೂ ಖಚಿತ ಔಷಧಿ ಮಾತ್ರ ಲಭ್ಯವಾಗಿಲ್ಲ.

ಈ ನಡುವಲ್ಲೇ ಅಮೇರಿಕಾ ಸರಕಾರ ತಜ್ಞ ವೈದ್ಯರಿಂದ ಕೊರೊನಾ ಕುರಿತು ಸಮೀಕ್ಷೆಯೊಂದನ್ನು ನಡೆಸಲಾಗಿತ್ತು, ತಜ್ಞ ವೈದ್ಯರು ನಡೆಸಿರುವ ಸಂಶೋಧನಾ ಸಮೀಕ್ಷೆಯ ವರದಿ ಈಗಾಗಲೇ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೈ ಸೇರಿದೆ. ವರದಿ ನೋಡಿದ್ದ ಟ್ರಂಪ್ ಅರೆಕ್ಷಣ ದಂಗಾಗಿ ಹೋಗಿದ್ದಾರೆ.

ಅಮೇರಿಕಾದಲ್ಲಿ ಈಗಾಗಲೇ 13,20,000 ಮಂದಿ ಕೊರೊನಾ ಮಹಾಮಾರಿಗೆ ತುತ್ತಾಗಿದ್ದಾರೆ. ಅದ್ರಲ್ಲೂ 79,198 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಬರೋಬ್ಬರಿ 1,926 ಮಂದಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅದ್ರಲ್ಲೂ ಒಂದೇ ದಿನ 25,969 ಮಂದಿ ಕೊರೊನಾ ಮಹಾಮಾರಿಗೆ ತುತ್ತಾಗಿದ್ದಾರೆ.

ಇಷ್ಟೊಂದು ಸಂಖ್ಯೆಯಲ್ಲಿ ಕೊರೊನಾ ಸೋಂಕು ಅಮೇರಿಕಾವನ್ನು ಕಾಡುತ್ತಿದೆ. ಈ ನಡುವಲ್ಲೇ ತಜ್ಞರು ಜೂಲ್ 1ರ ವರೆಗೆ ಅಮೇರಿಕಾದಲ್ಲಿ ನಿತ್ಯವೂ 2 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗಲಿದ್ದಾರೆ. ಅಲ್ಲದೇ ಪ್ರತಿನಿತ್ಯ 3,000ಕ್ಕೂ ಅಧಿಕ ಮಂದಿ ಬಲಿಯಾಗಲಿದ್ದಾರೆ ಅಂತಾ ವರದಿ ನೀಡಿದ್ದಾರೆ.

ಮಾತ್ರವಲ್ಲ ತಜ್ಞ ವೈದ್ಯರ ಸೀಕ್ರೆಟ್ ರಿಪೋರ್ಟ್ ಇದೀಗ ಅಮೇರಿಕಾದ ಬುಡವನ್ನೇ ಅಲುಗಾಡಿಸುತ್ತಿದ್ದು, ಈ ಸೀಕ್ರೆಟ್ ರಿಪೋರ್ಟ್ ಇದೀಗ ಸೋರಿಕೆಯಾಗಿದೆ. ತಜ್ಞ ವೈದ್ಯರು ಸಿದ್ದಪಡಿಸಿರುವ ವರದಿ ಬಹಿರಂಗವಾಗುತ್ತಿದ್ದಂತೆಯೇ ಅಮೇರಿಕಾದ ಜನರು ಕೂಡ ಬೆಚ್ಚಿಬಿದ್ದಿದ್ದಾರೆ.

Leave A Reply

Your email address will not be published.