ಸೆಕ್ಸ್ ಗೆ ಒತ್ತಾಯಿಸಿ ಪತ್ನಿಯರಿಗೆ ಟಾರ್ಚರ್ : ವನಿತಾ ಸಹಾಯವಾಣಿ ಗೆ ದಾಖಲಾಯ್ತು 193 ಪ್ರಕರಣ !

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಉದ್ಬವಿಸಿದ ಸಮಸ್ಯೆಗಳು ಅಷ್ಟಿಷ್ಟಲ್ಲಾ. ಲಾಕ್ ಡೌನ್ ನಿಂದಾಗಿ ಮನೆಯೊಳಗೆ ಜನರೆಲ್ಲಾ ಬಂಧಿಯಾಗಿದ್ದಾರೆ. ಆದ್ರೀಗ ಕೊರೊನಾ ಸಾಂಸಾರಿಕ ಕಲಹಕ್ಕೂ ಕಾರಣವಾಗಿದ್ದು, ಪತಿ ಸೆಕ್ಸ್ ಗಾಗಿ ಟಾರ್ಚರ್ ಕೊಡ್ತಿದ್ದಾರೆ ಅಂತಾ ಆರೋಪಿಸಿ ಪತ್ನಿಯರು ವನಿತಾ ಸಹಾಯವಾಣಿಗೆ ದೂರು ಕೊಡ್ತಿದ್ದಾರೆ. ಇದುವರೆಗೂ ಬರೋಬ್ಬರಿ 620ಕ್ಕೂ ಅಧಿಕ ಕೌಟುಂಬಿಕ ಕಲಹದ ಕೇಸ್ ದಾಖಲಾಗಿದ್ದು, ಚಿತ್ರವಿಚಿತ್ರ ಕೇಸ್ ಗಳಿಂದಾಗಿ ಮಹಿಳಾ ಸಹಾಯವಾಣಿ ಅಧಿಕಾರಿಗಳೇ ತಲೆನೋವಾಗಿ ಪರಿಣಮಿಸಿದೆ.

ಕೋವಿಡ್ 19 ಅಬ್ಬರ ಜೋರಾಗುತ್ತಲೇ ಸಿಬ್ಬಂಧಿಗಳು ಮನೆಯಿಂದಲೇ ಕಾರ್ಯನಿರ್ವಹಿಸೋದಕ್ಕೆ ಶುರು ಮಾಡಿದ್ದಾರೆ. ಸದಾ ಕೆಲಸ, ಕಚೇರಿಯಲ್ಲಿ ಬ್ಯುಸಿಯಾಗಿರುತ್ತಿದ್ದ ಗಂಡ ಮನೆಯಲ್ಲಿದ್ದಾರೆ ಅಂತಾ ಸಾಕಷ್ಟು ಮಹಿಳೆಯರು ಖುಷಿಯಾಗಿದ್ದರು. ಸಂಸಾರದಲ್ಲಿ ಸಾಮರಸ್ಯ ಏರ್ಪಡುತ್ತೆ ಅಂತಾನೂ ಭಾವಿಸಿಕೊಂಡಿದ್ದರು.

ಆದ್ರೀಗ ಬೆಂಗಳೂರಿನ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹೊಂದಿಕೊಂಡಿರುವ ವನಿತಾ ಸಹಾಯವಾಣಿಗೆ ಲಾಕ್ ಡೌನ್ ಆದಾಗಿನಿಂದಲೂ ನೂರಾರು ಪೋನ್ ಕರೆಗಳು ಬರುತ್ತಿದೆ. ಅಲ್ಲದೇ ಲಾಕ್ ಡೌನ್ ಅವಧಿಯಲ್ಲಿ ಬರೋಬ್ಬರಿ 620 ಸಾಂಸಾರಿಕ ಕಲಹದ ಕೇಸುಗಳು ದಾಖಲಾಗಿವೆ. ಅದ್ರಲ್ಲೂ ಪತಿ ತನಗೆ ಸೆಕ್ಸ್ ಗಾಗಿ ಪತ್ನಿಗೆ ಹಿಂಸೆ ಕೊಟ್ಟ ಕೇಸುಗಳೇ ಅತೀ ಹೆಚ್ಚಿದೆ. ನಿಮಗೆ ಆಶ್ಚರ್ಯವೆನಿಸಿದ್ರೂ ನಂಬಲೇ ಬೇಕು. ಇದುವರೆಗೂ ಸೆಕ್ಸ್ ಗಾಗಿ ಪೀಡಿಸಿದ ಪತಿಯ ವಿರುದ್ದ ಬರೋಬ್ಬರಿ 193 ಮಂದಿ ಮಹಿಳಾ ಸಹಾಯವಾಣಿಗೆ ದೂರುಕೊಟ್ಟಿದ್ದಾರೆ.

ಕೊರೊನಾ ಸೋಂಕು ಕಾಣಸಿಕೊಂಡ ನಂತರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ-193 ಕೇಸ್ ಗಳು, ಮಹಿಳೆಗೆ ರಸ್ತೆಯಲ್ಲಿ ಸಮಸ್ಯೆ ಬಂದಾಗ ಸ್ಥಳಕ್ಕೆ ತೆರಳಿ ಹೊಯ್ಸಳ ಸಹಾಯ-8 ಕೇಸ್ ಗಳು, ಕುಟುಂಬದಲ್ಲಿ ಪ್ರನಿತ್ಯ ಗಲಾಟೆ-56, ಮಕ್ಕಳ ಮೇಲಿನ ದೌರ್ಜನ್ಯ-6 ಕೇಸ್ ಗಳು ಸೇರಿದಂತೆ 620 ಪ್ರಕರಣಗಳು ದಾಖಲಾಗಿವೆ. ಆದ್ರೆ ಸೆಕ್ಸ್ ಗಾಗಿ ಪೀಡಿಸುತ್ತಿರುವ ಗಂಡ ಹೆಂಡಿರ ಸಮಸ್ಯೆಯನ್ನು ಬಗೆಹರಿಸೋಕೆ ಆಗದೆ ವನಿತಾ ಸಹಾಯವಾಣಿ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಮುಕ್ತಿ ದೊರಕಿಸುವ ಸಲುವಾಗಿ ಆರಂಭಿಸಲಾಗಿರುವ ಮಹಿಳಾ ಸಹಾಯವಾಣಿ ಲಾಕ್ ಡೌನ್ ಸಂದರ್ಭದಲ್ಲಿಯೂ ಬೆಳಗ್ಗೆ 8 ರಿಂದ ಸಂಜೆ 8 ಗಂಟೆಯ ವರೆಗೂ ಕಾರ್ಯನಿರ್ವಹಿಸುತ್ತಿದೆ. ಡಿಸಿಪಿ ಇಶಾ ಪಂತ್ ಸೇರಿದಂತೆ 8 ಮಂದಿ ಆಪ್ತ ಸಮಾಲೋಚಕಿರು, ಮಹಿಳಾ ಕಾನ್ಸ್ಟೇಬಲ್ ಪ್ರತಿಯೊಬ್ಬ ಮಹಿಳೆಯರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಲಾಕ್ ಡೌನ್ ಸಮಯದಲ್ಲಿಯಾದ್ರೂ ಜನರು ಸಾಂಸಾರಿಕವಾಗಿ ನೆಮ್ಮದಿಯಾಗಿರ್ತಾರೆ ಅಂತಾ ಎಲ್ಲರೂ ಬಾವಿಸಿಕೊಂಡಿದ್ದಾರೆ. ಆದರೆ ಲಾಕ್ ಡೌನ್ ಇದೀಗ ಸಾಂಸಾರಿಕ ಕಲಹಕ್ಕೆ ಕಾರಣವಾಗುತ್ತಿದೆ. ಒಟ್ಟಿನಲ್ಲಿ ಗಂಡ ಹೆಂಡಿರ ಜಗಳ ಇದೀಗ ಮಹಿಳಾ ಸಹಾಯವಾಣಿ ಸಿಬ್ಬಂಧಿಗಳಿಗೆ ತಲೆನೋವು ತರಿಸಿರುವುದು ಮಾತ್ರ ಸುಳ್ಳಲ್ಲ.

Leave A Reply

Your email address will not be published.