American bloggers video viral: ಭಾರತದ ಭವ್ಯ ಸಂಸ್ಕೃತಿಯನ್ನು ಕೊಂಡಾಡಿದ ಅಮೇರಿಕಾದ ಬ್ಲಾಗರ್‌

ದೆಹಲಿ: (American bloggers video viral) ಭಾರತ ದೇಶವೂ ಹಲವು ಸಂಸ್ಕೃತಿಗಳ ಆಗರ. ಭಾರತದ ಪ್ರತಿಯೊಂದು ಮೂಲೆ ಮೂಲೆಯೂ ಶ್ರೀಮಂತ ಪರಂಪರೆಯ ಚೈತನ್ಯದಿಂದ ಕೂಡಿದೆ ಎಂದು ಅಮೇರಿಕಾದ ಬ್ಲಾಗರ್‌ ಐಟನ್‌ ಒಬ್ಬರು ದೆಹಲಿಯಲ್ಲಿನ ಹಳೆಯ ಗುರುದ್ವಾರದ ಬಗ್ಗೆ ತಮ್ಮ ವಿಶೇಷ ಅನುಭವವನ್ನು ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್‌ ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ವಿಶೇಷ ಅನುಭವವನ್ನು ಬಣ್ಣಿಸಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಗುರುದ್ವಾರಕ್ಕೆ ಭೇಟಿ ನೀಡಿದಾಗ ಅಲ್ಲಿಯ ಜನ ಎಷ್ಟು ಮಂತ್ರಮುಗ್ಧರು ಎಂಬ ಬಗ್ಗೆ ವಿವರಿಸಿದ್ದಾರೆ. ಅವರು ಹಂಚಿಕೊಂಡ ವಿಡಿಯೋದಲ್ಲಿ ತಮ್ಮ ಕುಟುಂಬದೊಂದಿಗೆ ಪ್ರಾಚೀನ ಗುರುದ್ವಾರದ ಅಡುಗೆಮನೆಯಲ್ಲಿ ಕುಳಿತುಕೊಂಡಿರುವುದನ್ನು ಕಾಣಬಹುದು.

ಅಡುಗೆ ಮನೆಯ ಒಳಭಾಗದಲ್ಲಿ ಪ್ರತಿ ಗಂಟೆಗೆ ನಾಲ್ಕು ಸಾವಿರ ರೊಟ್ಟಿಗಳನ್ನು ಉತ್ಪಾದಿಸುವ ಸ್ವಯಂಚಾಲಿತ ರೊಟ್ಟಿ ತಯಾರಿಸುವ ಯಂತ್ರದ ಬಗ್ಗೆ ಅವರು ಆಶ್ಷರ್ಯಚಕಿತರಾಗಿ ಮಾತನಾಡಿದ್ದಾರೆ. ಅಲ್ಲದೇ ತಾವೂ ಕೂಡ ರೊಟ್ಟಿ ಮಾಡಲು ಪ್ರಯತ್ನ ಪಟ್ಟಿರುವುದರ ಬಗ್ಗೆಯೂ ಕೂಡ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ. ಇದೊಂದು ನಂಬಲಾಗದ ಅನುಭವ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೇ ಭಾರತ ದೇಶ ಹಲವು ಸಂಸ್ಕೃತಿಗಳ ಆಗರವಾಗಿದೆ. ಪ್ರತಿಯೊಂದು ಮೂಲೆ ಮೂಲೆಯೂ ಶ್ರೀಮಂತ ಪರಂಪರೆಯ ಚೈತನ್ಯದಿಂದ ಕೂಡಿದೆ ಎಂದು ದೇಶದ ಭವ್ಯ ಸಂಸ್ಕೃತಿಯ ಬಗ್ಗೆ ಹೊಗಳಿದ್ದಾರೆ.

ಭಾರತೀಯ ಭವ್ಯ ಸಂಸ್ಕೃತಿಯನ್ನು ವರ್ಣಿಸಿದ ಐಟನ್‌ ಅವರಿಗೆ ಹಲವು ಸಾಮಾಜಿಕ ಬಳಕೆದಾರರು ಪ್ರಶಂಸಿದ್ದಾರೆ. ಅಲ್ಲದೇ ಭಾರತದ ಸೌಂದರ್ಯವನ್ನು ಅನುಭವಿಸಿದ್ದಲ್ಲದೇ ಅದರ ಬಗ್ಗೆ ವರ್ಣಿಸಿರುವುದಕ್ಕೆ ಐಟನ್‌ ಅವರು ಶ್ಲಾಘನೆಗೆ ಒಳಗಾಗಿದ್ದಾರೆ. ಸದ್ಯ ಅವರು ಹಂಚಿಕೊಂಡ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಈಗ ಒಂದು ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ : Sharechat layoff: ಶೇರ್‌ ಚಾಟ್‌ ನಲ್ಲೂ ಉದ್ಯೋಗ ಕಡಿತ: ಶೇ. 20 ರಷ್ಟು ಉದ್ಯೋಗಿಗಳ ವಜಾ

ಇದನ್ನೂ ಓದಿ : ಗೃಹಸಾಲಗಳ ಮೇಲಿನ ಬಡ್ಡಿದರ ಇಳಿಕೆ ಸದ್ಯಕ್ಕೆ ಅಸಾಧ್ಯ : ಆರ್‌ಬಿಐ ಗವರ್ನರ್ ಎಚ್ಚರಿಕೆ

ಇದನ್ನೂ ಓದಿ : ಹಳೆಯ ಪಿಂಚಣಿ ಯೋಜನೆ ವಿಸ್ತರಣೆ : ಈ ಜನರಿಗೆ ಸಿಗುವ ಲಾಭವೆಷ್ಟು ಗೊತ್ತಾ ?

American bloggers video viral: An American blogger praised the great culture of India

Comments are closed.