Bail granted to president: ಉಡುಪಿಯ ಕಮಲಾಕ್ಷಿ ಸೊಸೈಟಿಯ ಅವ್ಯವಹಾರ ಪ್ರಕರಣ : ಅಧ್ಯಕ್ಷನಿಗೆ ಜಾಮೀನು ಮಂಜೂರು

ಉಡುಪಿ: (Bail granted to president) ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸೊಸೈಟಿ ಹೆಸರಲ್ಲಿ ಕೋಟ್ಯಾಂತರ ರೂ. ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಸೊಸೈಟಿ ಅಧ್ಯಕ್ಷ ಬಿವಿ ಲಕ್ಷ್ಮಿನಾರಾಯಣನಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬ್ರಹ್ಮಾವರದ ಮಟಪಾಡಿಯ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಅರೋಪಿಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ಜನವರಿ ಎರಡರಂದು ಸೆನ್‌ ಠಾಣಾ ಪೊಲೀಸರು ಬಿವಿ ಲಕ್ಷ್ಮಿನಾರಾಯಣ(Bail granted to president)ನನ್ನು ಹೆಚ್ಚಿನ ತನಿಖೆಗೆ ನ್ಯಾಯಾಲಯದ ಮುಖಾಂತರ ಐದು ದಿನಗಳ ಅವಧಿಗೆ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದರು.

ಪ್ರಕರಣದ ವಿಚಾರಣೆ ವೇಳೆಯಲ್ಲಿ ಆರೋಪಿ ಬಿವಿ ಲಕ್ಷ್ಮಿನಾರಾಯಣ ಫೈನಾನ್ಸ್‌ ನಲ್ಲಿ ಠೇವಣಿದಾರರಿಂದ ಪಡೆದ ಹಣದಿಂದ ನಲವತ್ತಕ್ಕೂ ಹೆಚ್ಚು ಕಡೆಗಳಲ್ಲಿ ಜಮೀನು ಖರೀದಿಸಿದ್ದ ಎಂಬ ವಿಚಾರ ತಿಳಿದು ಬಂದಿದೆ. ಕಿದಿಯೂರು, ಗುಂಡಿಬೈಲು, ಹಿರಿಯಡ್ಕ, ಬ್ರಹ್ಮಾವರ ಸೇರಿದಂತೆ ನಲವತ್ತಕ್ಕೂ ಹೆಚ್ಚು ಕಡೆ ಜಮೀನು ಖರೀದಿಸಿದ್ದರು. ಆದರೆ ಕೋವಿಡ್‌ ಬಳಿಕ ವ್ಯವಹಾರ ಸಂಪೂರ್ಣ ಸ್ಥಗಿತಕೊಂಡ ಕಾರಣ ಠೇವಣಿದಾರರಿಗೆ ಹಣ ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ.

ಅಲ್ಲದೇ ಠೇವಣಿದಾರರ ಹಣದಿಂದ ಭೂಮಿ ಖರೀದಿಸಲು ಮತ್ತು ಮಾರಾಟ ಮಾಡಲು ಕೋಪರೇಟಿವ್‌ ಬ್ಯಾಂಕ್‌ ಒಂದರ ಅಧ್ಯಕ್ಷರು ಸಹಕಾರ ನೀಡಿದ್ದರು ಎಂದು ತಿಳಿದುಬಂದಿದೆ. ಇವರು ಕಮಿಷನ್‌ ಆಧಾರದಲ್ಲಿ ವ್ಯವಹಾರವನ್ನು ಕುದುರಿಸುತ್ತಿದ್ದರು ಎಂದು ವಿಚಾರಣೆ ನಡೆಸುತ್ತಿದ್ದ ವೇಳೆ ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಮಂದಿ ಠೇವಣಿದಾರರು ಪೊಲೀಸರಿಗೆ ದೂರು ನೀಡಿದ್ದು, ಕೋಟ್ಯಾಂತರ ಹಣ ವ್ಯವಹಾರ ನಡೆಸಿದ ಬಿವಿ ಲಕ್ಷ್ಮಿನಾರಾಯಾಣ ಅವರ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಾರಿ ನಿರ್ದೇಶನಾಲಯ ಪ್ರಕರಣದ ಮಾಹಿತಿ ಕಲೆ ಹಾಕಿದೆ. ಅಲ್ಲದೇ ಈ ಹಿಂದೆ ಬಿವಿ ಲಕ್ಷ್ಮಿನಾರಾಯಣ ವ್ಯವಸ್ಥಾಪಕರಾಗಿದ್ದ ಉಡುಪಿ ಟೌನ್‌ ಕೋಪರೇಟಿವ್‌ ಬ್ಯಾಂಕ್‌ ನ ವ್ಯವಹಾರದ ಬಗ್ಗೆ ಮಾಹಿತಿ ನೀಡುವಂತೆ ಬ್ಯಾಂಕ್‌ ಗೆ ನೋಟಿಸ್‌ ನೀಡಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Father get suicide: ಕುಂದಾಪುರ : ಮಗು ಅನಾರೋಗ್ಯದಿಂದ ಸಾವು, ತಂದೆ ಆತ್ಮಹತ್ಯೆ

Bail granted to president: Udupi Kamalakshi Society embezzlement case: President granted bail

Comments are closed.