Amul hikes milk prices:ಗುಜರಾತ್​ ಹೊರತುಪಡಿಸಿ ಮಿಕ್ಕೆಲ್ಲ ರಾಜ್ಯಗಳಲ್ಲಿ ಹಾಲಿನ ದರ ಪ್ರತಿ ಲೀಟರ್​ಗೆ 2 ರೂಪಾಯಿ ಏರಿಕೆ

ಗುಜರಾತ್​ : Amul hikes milk prices : ಸಧ್ಯ ದೇಶದಲ್ಲಿ ಸಾಲು ಸಾಲು ಹಬ್ಬಗಳ ಋತು ಆರಂಭಗೊಂಡಿದೆ. ಈ ನಡುವೆಯೇ ಗುಜರಾತ್​ ಕೋ ಆಪರೇಟಿವ್​ ಮಿಲ್ಕ್​ ಮಾರ್ಕೆಟಿಂಗ್​ ಫೆಡರೇಶನ್​ ಲಿಮಿಟೆಡ್​ ತನ್ನ ಉತ್ಪನ್ನಗಳಲ್ಲಿ ಒಂದಾದ ಅಮುಲ್​ ಬ್ರ್ಯಾಂಡ್​ನ ಹಾಲಿನ ದರವನ್ನು ಏರಿಕೆ ಮಾಡಿದೆ. ಪ್ರತಿ ಲೀಟರ್​ ಅಮುಲ್​ ಹಾಲಿಗೆ 2 ರೂಪಾಯಿ ಏರಿಕೆ ಮಾಡಲಾಗಿದ್ದು ಈ ಬೆಲೆ ಏರಿಕೆಯು ಗುಜರಾತ್​ ರಾಜ್ಯವನ್ನು ಹೊರತುಪಡಿಸಿ ಮಿಕ್ಕೆಲ್ಲ ರಾಜ್ಯಗಳಿಗೆ ಅನ್ವಯವಾಗಲಿದೆ. ಪೂರ್ಣ ಕೆನೆಯುಕ್ತ ಹಾಲಿನ ಬೆಲೆಯು ಲೀಟರ್​ಗೆ ಅರವತ್ತೊಂದು ರೂಪಾಯಿಗಳಿಂದ ಅರವತ್ತಮೂರು ರೂಪಾಯಿಗಳವರೆಗೆ ಏರಿಕೆ ಕಂಡಿದೆ. ಇದು ಜನಸಾಮಾನ್ಯರ ಜೇಬಿಗೆ ಹಬ್ಬದ ಸಂದರ್ಭದಲ್ಲಿಯೇ ಕತ್ತರಿ ಹಾಕಿದಂತಾಗಿದೆ. ಅಮುಲ್​​ ಗೋಲ್ಡ್​ ಹಾಗೂ ಎಮ್ಮೆಯ ಹಾಲಿನ ದರವನ್ನು ಲೀಟರ್​ಗೆ ಎರಡು ರೂಪಾಯಿ ಏರಿಕೆ ಮಾಡಿದೆ.


ಗುಜರಾತ್​ನಲ್ಲಿ ಈ ವರ್ಷದ ಅಂತ್ಯದಲ್ಲಿ ಚುನಾವಣೆ ಕೂಡ ಇರುವುದರಿಂದ ಈ ರಾಜ್ಯದಲ್ಲಿ ಮಾತ್ರ ಅಮುಲ್​ ಹಾಲಿನ ದರದಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ಗುಜರಾತ್​ ಹೊರತುಪಡಿಸಿ ಮಿಕ್ಕೆಲ್ಲ ರಾಜ್ಯಗಳಲ್ಲಿ ಅಮುಲ್​ ಕೆನೆಭರಿತ ಹಾಲು, ಗೋಲ್ಡ್​ ಹಾಗೂ ಎಮ್ಮೆ ಹಾಲಿನ ಬೆಲೆಯನ್ನು ಲೀಟರ್​ಗೆ ಎರಡು ರೂಪಾಯಿ ಏರಿಕೆ ಮಾಡಲಾಗಿದೆ ಎಂದು ಗುಜರಾತ್​ ಕೋ ಆಪರೇಟಿವ್​ ಮಿಲ್ಕ್​ ಮಾರ್ಕೆಟಿಂಗ್​ ಫೆಡರೇಷನ್​ ಲಿಮಿಟೆಡ್​​ನ ಎಂಡಿ ಆರ್​ಎಸ್​ ಸೋಧಿ ಹೇಳಿಕೆ ನೀಡಿದ್ದಾರೆ.


ಹಾಲಿನ ಕೊಬ್ಬಿನ ದರಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ದರವನ್ನು ಹೆಚ್ಚಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮದರ್​ ಡೈರಿಯ ಸಂಗ್ರಹಣೆ ವೆಚ್ಚದಲ್ಲಿನ ಹೆಚ್ಚಳವನ್ನು ಸರಿದೂಗಿಸಲು ಬೆಲೆಗಳನ್ನು ಹೆಚ್ಚಿಸಲಾಗಿದೆ. ಗುಜರಾತ್​​ನ ಇತರೆ ಕೆಲವು ಮಾರುಕಟ್ಟೆಗಳಲ್ಲಿ ಕೊಬ್ಬಿನ ಬೆಲೆ ಏರಿಕೆಯಿಂದಾಗಿ ಗೋಲ್ಡ್​ ಹಾಗೂ ಎಮ್ಮೆ ಹಾಲಿನ ಬೆಲೆಯನ್ನು ಲೀಟರ್​ಗೆ ಎರಡು ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ ಎಂದು ಆರ್​ಎಸ್​ ಸೋಧಿ ಹೇಳಿದರು.

ಇದನ್ನು ಓದಿ : APJ Abdul Kalam Birthday : ಭಾರತದ “ಕ್ಷಿಪಣಿ ಮಾನವ ” ಡಾ. ಎಪಿಜೆ ಅಬ್ದುಲ್‌ ಕಲಾಂ ಜನ್ಮ ದಿನಾಚರಣೆ

ಇದನ್ನೂ ಓದಿ : BCCI may lose 955 crore: ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಮೋದಿ ಸರ್ಕಾರ, ವಿಶ್ವಕಪ್ ಆಯೋಜನೆಗೆ 955 ಕೋಟಿ ಟ್ಯಾಕ್ಸ್

Amul hikes milk prices by Rs 2 per litre, except in poll-bound Gujarat

Comments are closed.