Home Remedy for Memory Power: ಅತಿಯಾದ ಮರೆವು ಕಾಡುತ್ತಿದೆಯೇ ? ಹಾಗಿದ್ದರೆ ಇಲ್ಲಿದೆ ಸುಲಭ ಪರಿಹಾರ

ಆಧುನಿಕ ಜೀವನ ಶೈಲಿಯಲ್ಲಿ ಬಹುತೇಕರಿಗೆ ಮರೆವಿನ ಕಾಯಿಲೆ ಕಾಡುತ್ತಿದೆ. (Home Remedy for Memory Power)ಸಣ್ಣಪುಟ್ಟ ವಿಚಾರಗಳನ್ನೂ ನೆನಪಿನಲ್ಲಿ ಇಟ್ಟುಕೊಳ್ಳುವುದು ಬಲು ಕಷ್ಟ ಎನಿಸಿಬಿಡುತ್ತದೆ. ಒಂದು ಗಳಿಗೆ ಅಥವಾ ಒಂದು ನಿಮಿಷದ ಹಿಂದೆ ಹೇಳಿರುವ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಲಾಗದಷ್ಟು ಮರೆವು ಇರುತ್ತದೆ. ಅವರು ನೆನಪು ಇಟ್ಟುಕೊಳ್ಳಬೇಕು ಅಂದರೂ ಕೂಡ ನೆನಪು ಇಟ್ಟುಕೊಳ್ಳಲಾದಷ್ಟು ಮರೆವು ಕಾಡುತ್ತಿರುತ್ತದೆ. ಇದಕ್ಕೆ ಕಾರಣ ಪೌಷ್ಟಿಕಾಂಶದ ಕೊರತೆ ಒಂದಾದರೆ, ಇನ್ನೊಂದು ಒತ್ತಡದ ಜೀವನ ಶೈಲಿ ಕೂಡ ಆಗಿರುತ್ತದೆ. ಹಾಗೆ ಮಾನಸಿಕ ಒತ್ತಡದಿಂದಲೂ ಮರೆವು ಉಂಟಾಗುತ್ತದೆ. ಹೀಗಾಗಿ ಕೆಲವರಲ್ಲಿ ಮರೆವು ಅತಿಯಾಗಿ ಕಾಡುತ್ತಿರುತ್ತದೆ. ಆದರಿಂದ ದೀರ್ಘಕಾಲದವರೆಗೆ ನೆನಪಿನಶಕ್ತಿಯನ್ನು ಕಾಯ್ದಿರಿಸಿಕೊಳ್ಳಲು ಮನೆಯಲ್ಲೇ ಮನೆಮದ್ದುಗಳನ್ನು ಮಾಡಿಕೊಳ್ಳಬಹುದಾಗಿದೆ. ಆ ಮನೆಮದ್ದುಗಳು ಯಾವುದು ಹಾಗೂ ಹೇಗೆ ಬಳಸುವುದು ಎಂದು ತಿಳಿಯೋಣ.

ಜೀರಿಗೆ ಮತ್ತು ಜೇನುತುಪ್ಪ :

ಚೆನ್ನಾಗಿ ಹುರಿದು ಪುಡಿ ಮಾಡಿ ಇಟ್ಟುಕೊಂಡ ಜೀರಿಗೆಯಲ್ಲಿ ಅರ್ಧ ಟೀ ಸ್ಪೂನ್‌ನಷ್ಟು ಜೀರಿಗೆ ಪೌಡರ್‌ ಮತ್ತು ಒಂದು ಟೀ ಸ್ಪೂನ್‌ನಷ್ಟು ಜೇನುತುಪ್ಪವನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ಇದನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದನ್ನು ಪ್ರತಿದಿನ ಸೇವಿಸುವುದರಿಂದ ನೆನಪಿನ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಇದನ್ನು ಮಕ್ಕಳು ಹಾಗೂ ದೊಡ್ಡವರು ಕೂಡ ಬಳಸಬಹುದಾಗಿದೆ.

ಬಾದಾಮಿ ಮತ್ತು ಹಾಲು :

ಪ್ರತಿದಿನ ರಾತ್ರಿ 7 ಬಾದಾಮಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿ ಇಡಬೇಕು. ರಾತ್ರಿ ಪೂರ್ತಿ ನೆನೆದಿರುವುದರಿಂದ ಬಾದಾಮಿಯು ಬೆಳಗ್ಗಿನ ಹೊತ್ತಿಗೆ ಉಬ್ಬಿಕೊಂಡಿರುವುದರಿಂದ ಅದರ ಸಿಪ್ಪೆಯನ್ನು ತೆಗೆಯಲು ಸುಲಭವಾಗುತ್ತದೆ. ಬೆಳಗ್ಗಿನ ಸಮಯದಲ್ಲಿ ಸಿಪ್ಪೆ ತೆಗೆದ ಬಾದಾಮಿ ತಿಂದ ತಕ್ಷಣನೇ ಬೆಚ್ಚಗಿನ ಹಾಲುನ್ನು ಕುಡಿಯುವುದರಿಂದ ವೀಕ್‌ ಮೆಮೊರಿ ಇರುವರಿಗೆ ಬಹಳಷ್ಟು ಸಹಾಯ ಮಾಡುತ್ತದೆ. ಇದನ್ನು ಬೆಳೆಯುವ ಮಕ್ಕಳಿಗೆ ತುಂಬಾ ಉಪಯೋಗವಾಗುತ್ತದೆ. ಪ್ರತಿದಿನ ತಪ್ಪದೇ ಮಕ್ಕಳಿಗೆ ಇದನ್ನು ಕೊಡುವುದರಿಂದ ನೆನಪಿನಶಕ್ತಿಯನ್ನು ಹೆಚ್ಚಾಗಿಸುತ್ತದೆ.

ಇದನ್ನೂ ಓದಿ : Weight Loss Tips : ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆ ? ಇಲ್ಲಿದೆ ಸುಲಭ ಪರಿಹಾರ

ಇದನ್ನೂ ಓದಿ : World Sight Day 2022 : ನಿಮ್ಮ ಕಣ್ಣಿನ ದೃಷ್ಟಿಯ ಬಗ್ಗೆ ಕಾಳಜಿವಹಿಸಿ; ಕಣ್ಣಿನ ಕಾಯಿಲೆಗಳನ್ನು ತಡೆಯುವ ಆಹಾರಗಳು

ಇದನ್ನೂ ಓದಿ : World Arthritis Day 2022 : ಸಂಧಿವಾತ ದೂರಮಾಡುವ 5 ಬೆಸ್ಟ್‌ ಟಿಪ್ಸ್‌ : ಮೂಳೆಗಳ ಆರೋಗ್ಯ ಹೀಗೆ ಕಾಪಾಡಿಕೊಳ್ಳಿ

ಚಕ್ಕೆ(ಸಿನ್ನಮೋಮಮ್)ಮತ್ತು ಜೇನುತುಪ್ಪ :

ಪುಡಿ ಮಾಡಿದ ಚಕ್ಕೆ ಪೌಡರ್‌ನಲ್ಲಿ ಒಂದು ಚಿಟಿಕೆಯಷ್ಟು ಪುಡಿಯನ್ನು ಹಾಗೂ ಒಂದು ಟೀ ಸ್ಪೂನ್‌ನಷ್ಟು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ಇದನ್ನು ಪ್ರತಿದಿನ ರಾತ್ರಿ ಮಲಗುವ ಮುಂಚೆ ಸೇವಿಸಬೇಕು. ಚಕ್ಕೆ ಪೌಡರ್‌ ನೆನಪಿನಶಕ್ತಿಯನ್ನು ಜಾಸ್ತಿ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಇದನ್ನು ಪ್ರತಿದಿನ ರಾತ್ರಿ ತಪ್ಪದೇ ಮಲಗುವ ಮುಂಚೆ ಸೇವಿಸಬೇಕು.

Home Remedy for Memory Power :Suffering from excessive forgetfulness? If so then here is an easy solution

Comments are closed.