Tirumala temple : ತಿರುಪತಿ ತಿರುಮಲ ದೇವಸ್ಥಾನದ ಕಾಣಿಕೆಯಲ್ಲಿ ಹೊಸ ದಾಖಲೆ : ₹ 10 ಕೋಟಿ ದೇಣಿಗೆ ನೀಡಿದ ಭಕ್ತರು

Andhra Pradesh: ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ದೇವಸ್ಥಾನಕ್ಕೆ (Tirumala temple) ಭಕ್ತರು ನೀಡುವ ದೇಣಿಗೆ ಅಪಾರ. ಇದು ವಿಶ್ವದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿಯೂ ಒಂದು. ಅತ್ಯಂತ ಶ್ರೀಮಂತ ಭಕ್ತರನ್ನು ಹೊಂದಿರುವ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭಕ್ತರು ಲಕ್ಷ ಹಾಗೂ ಕೋಟಿಗಟ್ಟಲೇ ಮೌಲ್ಯದ ಹಣಗಳನ್ನು ಕಾಣಿಕೆ ರೂಪದಲ್ಲಿ ನೀಡುತ್ತಾರೆ. ಇದೀಗ ದೇಣಿಗೆ ಸಂಗ್ರಹ ವಿಚಾರದಲ್ಲಿ ತಿರುಮಲ ತಿರುಪತಿ ದೇಗುಲವು ಹೊಸದೊಂದು ದಾಖಲೆಯನ್ನು ಬರೆದಿದೆ. ತಮಿಳುನಾಡು ಮೂಲದ ಶ್ರೀ ವೆಂಕಟೇಶ್ವರನ ಭಕ್ತರೊಬ್ಬರು ತಿರುಪತಿ ದೇವಸ್ಥಾನಕ್ಕೆ 7 ಕೋಟಿ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಸೋಮವಾರ ಒಂದೇ ದಿನ 10 ಕೋಟಿ ರೂಪಾಯಿ ಹಣ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಇದು ತಿರುಮಲ ದೇವಸ್ಥಾನದಲ್ಲಿ ಒಂದೇ ದಿನದಲ್ಲಿ ಸಂಗ್ರಹವಾದ ಅತ್ಯಂತ ದೊಡ್ಡ ಮೊಟ್ಟದ ದೇಣಿಗೆ ಎಂಬ ಹೊಸ ದಾಖಲೆಯನ್ನು ಬರೆದಿದೆ.

ತಮಿಳುನಾಡಿನ ತಿರುನೆಲ್ವೇಲಿಯ ಭಕ್ತ ಗೋಪಾಲ ಬಾಲಕೃಷ್ಣನ್ ಅವರು ಅನ್ನದಾನ ಟ್ರಸ್ಟ್ ಸೇರಿದಂತೆ ಟಿಟಿಡಿಯ ಏಳು ಟ್ರಸ್ಟ್‌ಗಳಿಗೆ ಏಳು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಅಲ್ಲದೆ, ಎ ಸ್ಟಾರ್ ಟೆಸ್ಟಿಂಗ್ ಮತ್ತು ಇನ್‌ಸ್ಪೆಕ್ಷನ್ ಪ್ರೈವೇಟ್ ಲಿಮಿಟೆಡ್, ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದರೆ, ಬಾಲಕೃಷ್ಣ ಫ್ಯೂಯಲ್ ಸ್ಟೇಷನ್ ಆರ್ಗನೈಸೇಶನ್ ಶ್ರೀವಾಣಿ ಟ್ರಸ್ಟ್‌ಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದೆ. ಅಲ್ಲದೆ, ಸೀಹಬ್ ಇನ್‌ಸ್ಪೆಕ್ಷನ್ ಸರ್ವಿಸಸ್ ಈ ದಿನದಂದು ಎಸ್‌ವಿ ವೇದ ಪರಿರಕ್ಷಣಾ ಟ್ರಸ್ಟ್‌ಗೆ ಒಂದು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ.

ಇದನ್ನು ಓದಿ : India To Tour West Indies : ಭಾರತ ವೆಸ್ಟ್‌ ಇಂಡಿಸ್‌ ಸರಣಿ : T20, ಏಕದಿನ ಸರಣಿ ವೇಳಾಪಟ್ಟಿ ಪ್ರಕಟ

ಆಯಾ ದಾನಿಗಳ ಚೆಕ್‌ಗಳನ್ನು ಟಿಟಿಡಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿಗೆ ಹಸ್ತಾಂತರಿಸಲಾಯಿತು.

ಇದನ್ನೂ ಓದಿ : Nigeria church : ಚರ್ಚ್‌ನಲ್ಲಿ ಗುಂಡಿನ ಚಕಮಕಿ : 50 ಮಂದಿ ಸಾವು, ಹಲವರಿಗೆ

ಇದನ್ನೂ ಓದಿ : Nagaraja temple : ನಾಗದೋಷ, ಕಾಳಸರ್ಪ ದೋಷವನ್ನುನಿವಾರಣೆ ಮಾಡ್ತಾನೆ ನಾಗರಾಜ : ಇಲ್ಲಿ ಭಕ್ತರನ್ನು ಕಾಯುತ್ತೆ 30 ಸಾವಿರ ಸರ್ಪಗಳು

Andhra Pradesh: Record Rs 10 crore donations to Tirumala temple

Comments are closed.