snake : ಮನೆಗೆ ಬಂದ ಹಾವನ್ನೇ ಮೃತಪಟ್ಟ ಪತಿಯೆಂದು ನಂಬಿದ ಪತ್ನಿ ಮಾಡಿದ್ದೇನು ಗೊತ್ತಾ?

ಬಾಗಲಕೋಟೆ : snake : ಮೂಢನಂಬಿಕೆಗಳಿಗೆ ಬೆಲೆ ಕೊಡದಂತೆ ಸರ್ಕಾರಗಳು ಎಷ್ಟೆ ಬಾರಿ ಜನರಿಗೆ ಮನವರಿಕೆ ಮಾಡಿದರೂ ಸಹ ಕೆಲವರು ಮಾತ್ರ ಎಚ್ಚೆತ್ತು ಕೊಳ್ಳುವುದೇ ಇಲ್ಲ. ಕೆಲವೊಮ್ಮೆ ಈ ಮೂಢನಂಬಿಕೆಗಳು ನಮ್ಮ ಜೀವಕ್ಕೆ ಸಂಚಕಾರ ತರಬಹುದು. ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಬಾಗಲಕೋಟೆ ಜಿಲ್ಲೆಯ ರಬಕವಿ – ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದ ತನ್ನ ಪತಿ ಹಾವಿನ ರೂಪದಲ್ಲಿ ಮನೆಗೆ ಮರಳಿದ್ದಾರೆ ಎಂದು ನಂಬಿ ಅದರೊಂದಿಗೆ ನಾಲ್ಕು ದಿನಗಳ ಕಾಲ (woman who lived with the snake) ವಾಸಿಸಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ.

ಕುಲಹಳ್ಳಿ ಗ್ರಾಮಕ್ಕೆ ಸೇರಿದ ಮೌನೇಶ್​ ಎಂಬವರು ಕಳೆದ 2 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಪತಿಯ ಸಾವಿನ ಬಳಿಕ ಪತ್ನಿ ಶಾರದಾ ಕಂಬಾರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ಶಾರದಾ ಕಂಬಾರ ಮನೆಗೆ ಕೇರೆ ಹಾವೊಂದು ನುಗ್ಗಿದೆ. ಈ ಹಾವನ್ನು ಮನೆಯಿಂದ ಓಡಿಸುವುದನ್ನು ಬಿಟ್ಟು ಶಾರದಾ ಮೃತಪಟ್ಟಿದ್ದ ತನ್ನ ಪತಿಯು ಹಾವಿನ ರೂಪದಲ್ಲಿ ಮನೆಗೆ ಮರಳಿದ್ದಾರೆ ಎಂದು ನಂಬಿದ್ದಾಳೆ.

ಹಾವಿನೊಂದಿಗೆ ಶಾರದಾ ವಾಸ ಮಾಡುತ್ತಿರುವ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದಿದೆ. ಕೂಡಲೇ ಶಾರದಾ ನಿವಾಸಕ್ಕೆ ತೆರಳಿದ ಗ್ರಾಮಸ್ಥರು ಹಾವಿನೊಂದಿಗೆ ವಾಸಿಸುವುದು ಅಪಾಯಕಾರಿ ಎಂದು ಬುದ್ಧಿ ಹೇಳಲು ಯತ್ನಿಸಿದ್ದಾರೆ. ಆದರೆ ಇದೇ ನನ್ನ ಪತಿ ನಾನು ಹಾವಿನೊಂದಿಗೇ ಇರುತ್ತೇನೆ ಎಂದು ಶಾರದಾ ವಾದಿಸಿದ್ದಾರೆ. ಕೊನೆಗೆ ಹೇಗೋ ಮಾಡಿ ಶಾರದಾ ಮನವೊಲಿಸಿದ ಗ್ರಾಮಸ್ಥರು ಹಾವನ್ನು ಚಾಪೆಯ ಸಹಾಯದಿಂದ ಹಿಡಿದು ಬೇರೆಡೆಗೆ ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.

ಇದನ್ನು ಓದಿ : ಕಮರಿಗೆ ಉರುಳಿದ ಬಸ್ : 22 ಸಾವು, 6 ಮಂದಿಗೆ ಗಾಯ

ಇದನ್ನೂ ಓದಿ : India To Tour West Indies : ಭಾರತ ವೆಸ್ಟ್‌ ಇಂಡಿಸ್‌ ಸರಣಿ : T20, ಏಕದಿನ ಸರಣಿ ವೇಳಾಪಟ್ಟಿ ಪ್ರಕಟ

The woman who lived with the snake

Comments are closed.