ದ. ಕ. ಜಿಲ್ಲೆಯಲ್ಲಿ ಕೊರೋನಾ ಸಂಖ್ಯೆ ಕಡಿಮೆಯಾಗದಿರಲು ನಿಜವಾದ ಕಾರಣ ಏನು? ಆಡಳಿತ ವೈಫಲ್ಯವೇ ? ಸರಕಾರವನ್ನು ಪ್ರಶ್ನಿಸಿದ ರಮಾನಾಥ ರೈ.

ಮಂಗಳೂರು : ಕರ್ನಾಟಕದ ಇತರೆಡೆ ಕೋವಿಡ್ ಸಂಖ್ಯೆಗಳು ಕಡಿಮೆ ಯಾಗುತ್ತಿವೆ. ಆದರೆ ದಕ್ಷಿಣ ಕನ್ನಡದಲ್ಲಿ ಸಂಖ್ಯೆಗಳು ಕಡಿಮೆಯಾಗು ತ್ತಿಲ್ಲ. ಇದರ ಬಗ್ಗೆ ಸಾರ್ವಜನಿಕರಲ್ಲಿ ಹಲವಾರು ಗೊಂದಲಗಳಿವೆ. ನಿಜವಾದ ಕಾರಣ ಏನು ಎಂಬುದನ್ನು ಉಸ್ತುವಾರಿ ಸಚಿವರು ಜನತೆಗೆ ತಿಳಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.

ಟ್ವೀಟ್ ಮೂಲಕ ಸರ್ಕಾರವನ್ನು ಆಗ್ರಹಿಸಿದ ಅವರು ಇದಕ್ಕೆ ಆಡಳಿತ ವೈಫಲ್ಯ ಕಾರಣವೇ? ಅಥವಾ ಇನ್ಯಾವುದೇ ಕಾರಣ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಸ್ಮಾರ್ಟ್ ಸಿಟಿ ರಸ್ತೆ ಅಗೆತ ಹಾಗೂ ಇನ್ನಿತರ ವಿಷಯಗಳು ಹರಿದಾಡುತ್ತಿವೆ. ನಿಜವಾದ ಕಾರಣ ಏನು ಎಂಬುದನ್ನು ಜವಾಬ್ದಾರಿ ಸ್ಥಾನದಲ್ಲಿರುವ ಉಸ್ತುವಾರಿ ಸಚಿವರು ಪ್ರಾಮಾಣಿಕ ವಾಗಿ ಜನತೆಗೆ ತಿಳಿಸಬೇಕಾಗಿದೆ ಎಂದು ರಮನಾಥ ರೈ ಆಗ್ರಹಿಸಿದ್ದಾರೆ.

ಆಡಳಿತ ವೈಫಲ್ಯ ವಾಗಿರಬೇಕು ಅಥವಾ ಇನ್ನಾವುದೇ ಕಾರಣ ಇರಬೇಕು. ಜವಾಬ್ದಾರಿಯುತ ಉಸ್ತುವಾರಿ ಸಚಿವರು ಈ ಕಾರಣವನ್ನು ಜನತೆ ಮುಂದಿಡಬೇಕು. ಇಲ್ಲದೆ ಹೋದರೆ ಸರಕಾರ ಹಾಗೂ ಆಡಳಿತ ವ್ಯವಸ್ಥೆಗೆ ಕೆಟ್ಟ ಹೆಸರು ಬರಲಿದೆ ಎಂದು ಅವರು ಹೇಳಿದ್ದಾರೆ.

Comments are closed.