Anil Firojiya : ಕ್ಷೇತ್ರದ ಅಭಿವೃದ್ಧಿಗಾಗಿ 15 ಕೆ.ಜಿ ತೂಕ ಕಳೆದುಕೊಂಡ ಸಂಸದ.. ಸಿಕ್ತು 15 ಸಾವಿರ ಕೋಟಿ ರೂಪಾಯಿ ಅನುದಾನ

ಉಜ್ಜೈಯಿನಿ, ಮಧ್ಯ ಪ್ರದೇಶ : Anil Firojiya ಜನಪ್ರತಿನಿಧಿಗಳಾದವರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವನ್ನ ಕೇಳೋದು ಸಹಜ. ಆದ್ರೆ ಇಲ್ಲೊಬ್ಬ ಸಂಸದರು ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗಾಗಿ ತೂಕವನ್ನ ಕಳೆದುಕೊಂಡು ಅನುದಾನ ಪಡೆಯುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.

ಮಧ್ಯಪ್ರದೇಶದ ಉಜ್ಜೈಯಿನಿ ಕ್ಷೇತ್ರದ ಸಂಸದ ಅನಿಲ್ ಫಿರೋಜಿಯಾ ತಮ್ಮ ಸಂಸತ್ ಕ್ಷೇತ್ರದ ಅಭಿವೃದ್ಧಿಗಾಗಿ ಬರೋಬ್ಬರಿ 15 ಕೆ.ಜಿ ತೂಕ ಕಳೆದುಕೊಂಡಿದ್ದಾರೆ. ಆ ಮೂಲಕ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹಾಕಿದ್ದ ಸವಾಲನ್ನ ಸ್ವೀಕರಿಸಿ, ಅದನ್ನ ಯಶಸ್ವಿಯಾಗಿ ಪೂರ್ಣಗೊಳಿಸಿ ಕ್ಷೇತ್ರಕ್ಕೆ 15 ಸಾವಿರ ಕೋಟಿ ರೂಪಾಯಿಗಳಷ್ಟು ಅನುದಾವನ್ನ ಪಡೆದುಕೊಂಡಿದ್ದಾರೆ.

ಏನಿದು ತೂಕ ಕಳೆದುಕೊಳ್ಳುವ ಸವಾಲು : ಉಜ್ಜೈಯಿನಿ ಕ್ಷೇತ್ರವನ್ನ ಪ್ರತಿನಿಧಿಸುವ ಸಂಸದ ಅನಿಲ್ ಫಿರೋಜಿಯಾ ಕಳೆದ ಫೆಬ್ರವರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ, ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ 15 ಸಾವಿರ ಕೋಟಿ ರೂಪಾಯಿ ಅನುದಾನ ನೀಡಬೇಕೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನ ಆಗ್ರಹಿಸಿದ್ರು. ಅಂದು ಅನಿಲ್ ತೂಕ 135 ಕೆ.ಜಿ ಗಿಂತಲೂ ಜಾಸ್ತಿ ಇತ್ತು. ಅಂದು ವೇದಿಕೆಯಲ್ಲೇ ಅನಿಲ್ ಫಿರೋಜಿಯಾ ಅವರಿಗೆ ಷರತ್ತು ಹಾಕಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ. ನೀವು ತೂಕ ಕಳೆದುಕೊಂಡರೆ ಕಳೆದುಕೊಳ್ಳುವ ಪ್ರತಿ ಕೆ.ಜಿ ತೂಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡೋದಾಗಿ ಹೇಳಿದ್ರು. ಇದನ್ನ ಸವಾಲಾಗಿ ಸ್ವೀಕರಿಸಿದ ಅನಿಲ್ ಅಂದಿನಿಂದ ತೂಕ ಕಳೆದುಕೊಳ್ಳುವ ಕೆಲಸಕ್ಕೆ ಮುಂದಾದ್ರು. ನಿತ್ಯ 8 ಕಿ.ಮೀ ವಾಕಿಂಗ್, ಸೈಕ್ಲಿಂಗ್, ವ್ಯಾಯಾಮ, ಯೋಗ ಮಾಡೋ ಮೂಲಕ ಇದೀಗ ಅನಿಲ್ 15ಕೆ.ಜಿ ಗಿಂತಲೂ ಹೆಚ್ಚು ತೂಕವನ್ನ ಕಳೆದುಕೊಂಡಿದ್ದಾರೆ. ಇದೀಗ ನಿತೀನ್ ಗಡ್ಕರಿ ಅವರು ನೀಡಿದ ಮಾತಿನಂತೆ 15 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಅದರಲ್ಲಿ 2300 ಕೋಟಿ ರೂಪಾಯಿ ಅನುದಾನವನ್ನ ಬಿಡುಗಡೆ ಮಾಡಿದ್ದಾರೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅನಿಲ್ ಫಿರೋಜಿಯಾ.135 ಕೆ.ಜಿ ಇದ್ದ ನಾನು ಈಗ 100 ಕೆ.ಜಿಗೆ ನನ್ನ ತೂಕವನ್ನ ಇಳಿಸಿಕೊಳ್ಳುತ್ತಿದ್ದಾನೆ. ಈಗಾಗಲೇ 15 ಕೆ.ಜಿ ತೂಕ ಕಳೆದುಕೊಂಡಿರೋ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನೂ ತೂಕ ಕಳೆದುಕೊಳ್ಳಲು ಸಿದ್ದ ಎಂದಿದ್ದಾರೆ. ನಿತಿನ್ ಗಡ್ಕರಿಯವರು ಅನುದಾನ ಬಿಡುಗಡೆ ಮಾಡಿರೋದಕ್ಕೆ  ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ : Diwali 2022 Guildlines : ದೀಪಾವಳಿಗೆ ಮಾಲಿನ್ಯ ಮಂಡಳಿ ಹೊಸ ರೂಲ್ಸ್ : ರಾತ್ರಿ 8 ರಿಂದ 10ರ ವರೆಗೆ ಹಸಿರು ಪಟಾಕಿಗೆ ಅವಕಾಶ

ಇದನ್ನೂ ಓದಿ : AAI Recruitment 2022 : AAI ನೇಮಕಾತಿ 2022 : ಜೂನಿಯರ್‌ ಮತ್ತು ಸೀನಿಯರ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : India Post Department : ಅಂಚೆ ಕಚೇರಿಯಲ್ಲಿ 399 ರೂ.ಪಾವತಿಸಿದ್ರೆ ಸಿಗುತ್ತೆ ರೂ 10 ಲಕ್ಷ

Anil Firojiya MP lost 15 kg weight to get grant for constituency development work

Comments are closed.