APJ Abdul Kalam Birthday : ಭಾರತದ “ಕ್ಷಿಪಣಿ ಮಾನವ ” ಡಾ. ಎಪಿಜೆ ಅಬ್ದುಲ್‌ ಕಲಾಂ ಜನ್ಮ ದಿನಾಚರಣೆ

ನವದೆಹಲಿ : ಇಂದು ಭಾರತದ ಪ್ರಸಿದ್ಧ ಏರೋಸ್ಪೇಸ್‌ ವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿಯಾದ ಡಾ. ಎಪಿಜೆ ಅಬ್ದುಲ್‌ ಕಲಾಂ (APJ Abdul Kalam Birthday)ಅವರ 91ನೇ ವರ್ಷದ ಜನ್ಮ ದಿನ.ಅಬ್ದುಲ್‌ ಕಲಾಂ ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ದೇಶದ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದರು. ಹಾಗಾಗಿ ಅವರು ಮಕ್ಕಳನ್ನು ಆರಾಧಿಸುತ್ತಿದ್ದರು. ಆದ್ದರಿಂದ ಅಕ್ಟೋಬರ್‌ 15 ಅವರ ಜನ್ಮ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸುತ್ತಾರೆ. ಇನ್ನೂ ಕಲಾಂ ಅವರು ಉತ್ತಮ ರಾಜಕಾರಣಿ ಮತ್ತು ಬಾಹ್ಯಾಕಾಶ ವಿಜ್ಞಾನಿ ಮಾತ್ರವಲ್ಲದೇ ಒಳ್ಳೆಯ ಶಿಕ್ಷಕರು ಆಗಿ ಕೂಡ ಕಾರ್ಯನಿರ್ವಹಿದ್ದಾರೆ. ಹಾಗೆ ಭಾರತಕ್ಕೆ ಈ ಮೂರು ಕ್ಷೇತ್ರದಲ್ಲೂ ಅಪಾರ ಕೊಡುಗೆಗಳನ್ನು ನೀಡಿದ್ದಾರೆ.

ಅಬ್ದುಲ್‌ ಕಲಾಂ ಅವರು 1931 ಅಕ್ಟೋಬರ್ 15ರಂದು ತಮಿಳುನಾಡು ರಾಜ್ಯದ ರಾಮೇಶ್ವರನಲ್ಲಿ ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಜೈನುಲಬ್ದೀನ್‌ ದೋಣಿ ಮಾಲೀಕರಾಗಿದ್ದರು, ತಾಯಿ ಅಶಿಮಾ ಗೃಹಿಣಿಯಾಗಿದ್ದರು. ಅವರ ತಂದೆ ತಾಯಿಗೆ ಇವರು ಆರು ಜನ ಮಕ್ಕಳಲ್ಲಿ ಕಿರಿಯರಾಗಿದ್ದರು. ಕಡು ಬಡತನದಲ್ಲಿ ಜನಸಿದ ಇವರು ತಂದೆಗೆ ಆರ್ಥಿಕವಾಗಿ ಸಹಾಯ ಮಾಡಲು ಬಾಲ್ಯದಲ್ಲೇ ದಿನ ಪತ್ರಿಕೆಯನ್ನು ಮನೆ ಮನೆಗಳಿಗೆ ಹಾಕುವ ಕೆಲಸವನ್ನು ಮಾಡುತ್ತಿದ್ದರು. ಬಾಲ್ಯದಿಂದಲೇ ಚುರುಕಾಗಿದ್ದ ಇವರು ಗಣಿತದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಗಣಿತ ವಿಷಯಕ್ಕೆ ಹೆಚ್ಚಿನ ಸಮಯವನ್ನು ನೀಡಿ ಅಧ್ಯಯನ ಮಾಡುತ್ತಿದ್ದರು.

ಅವರು ರಾಮನಾಥಪುರಂ ಶ್ವಾರ್ಟ್ಜ್ ಮೆಟ್ರಿಕ್ಯುಲೇಷನ್ಶಾ ಶಾಲೆಯಲ್ಲಿ ಶಿಕ್ಷಣ ಮುಗಿಸಿ ಮುಂದೆ ತಿರುಚಿರಾಪಳ್ಳಿಯಲ್ಲಿ ಸೇಂಟ್‌ ಜೋಸೆಫ್ಸ್‌ ಕಾಲೇಜಿಗೆ ಸೇರಿಕೊಳ್ಳುತ್ತಾರೆ. 1954ರಲ್ಲಿ ಮದ್ರಾಸ್‌ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆಯತ್ತಾರೆ. ನಂತರದ ದಿನಗಳಲ್ಲಿ ಮದ್ರಾಸ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್‌ ಮಾಡುತ್ತಾರೆ. ಅಧ್ಯಯನ ನಂತರ ನಾಲ್ಕು ದಶಕಗಳ ಕಾಲ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದಲ್ಲಿ ವಿಜ್ಞಾನಿ ಮತ್ತು ವಿಜ್ಞಾನದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಭಾರತದ ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಕ್ಷಿಪಣಿ ಅಭಿವೃದ್ಧಿ ಪ್ರಯತ್ನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಹೀಗೆ ಈ ತಂತ್ರಜ್ಞಾನದ ಅಭಿವೃದ್ಧಿಯ ಅಧ್ಯಯನದಿಂದ ಇವರು ಭಾರತದಲ್ಲಿ “ಕ್ಷಿಪಣಿ ಮಾನವ” ಎಂಬ ಹೆಸರಿನಿಂದಲೇ ಚಿರಪರಿಚಿತರಾದ್ದರು.

ಇದನ್ನೂ ಓದಿ : Mouvin Godinho : ಕುಡಿದವರನ್ನು ಮನೆಗೆ ತಲುಪಿಸುವುದು ಬಾರ್‌ ಮಾಲೀಕರ ಜವಾಬ್ಧಾರಿ : ಸಚಿವರ ಆದೇಶ

ಇದನ್ನೂ ಓದಿ : Congress Party’s Bharat Jodo Yatra :ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೆ ಕಮಲ‌ ಕಲಿಗಳಿಂದ ಠಕ್ಕರ್

ಇದನ್ನೂ ಓದಿ : Bhanvar lal Died : ಕಾಂಗ್ರೆಸ್ ಹಿರಿಯ ನಾಯಕ ಭನ್ವರ್‌ ಲಾಲ್‌ ಶರ್ಮಾ ವಿಧಿವಶ

1998ರಲ್ಲಿ ನೆಡೆದ ಭಾರತದ ಪೋಖ್ರಾನ್‌-2 ಪರಮಾಣು ಪರೀಕ್ಷೆಯಲ್ಲಿ ಸಾಂಸ್ಥಿಕವಾಗಿ, ತಾಂತ್ರಿಕವಾಗಿ ಹಾಗೂ ರಾಜಕೀಯವಾಗಿ ಒಂದು ಪ್ರಮುಖ ಪಾತ್ರವಹಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ನಂತರ 2002ರಲ್ಲಿ ಭಾರತೀಯ ಜನತಾ ಪಕ್ಷ ಹಾಗು ವಿರೋಧ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಇವೆರಡರ ಬೆಂಬಲದೊಂದಿಗೆ ಭಾರತದ 11ನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಸರಳತೆ, ಪ್ರಮಾಣಿಕತೆ ಮತ್ತು ಮೇಧಾವಿತನದ ಸಾಕಾರದಂತಿರುವ ಕಲಾಂ ಅವರು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದ್ದರು. ಇವರು ಜುಲೈ 25 2002ರಿಂದ 2007 ಜುಲೈ 25ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರಪತಿ ಸೇವೆಯನ್ನು ಸಲ್ಲಿಸಿದ ನಂತರ ದಿನಗಳಲ್ಲಿ ಪುನಃ ಶಿಕ್ಷಣ, ಬರವಣಿಗೆ ಮತ್ತು ಸಾರ್ವಜನಿಕ ಸೇವೆಯ ಜೀವನಕ್ಕೆ ಮರಳಿದರು. ಇವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಹತ್ತಾರು ಗ್ರಂಥಗಳನ್ನು ಕೂಡ ರಚಿಸಿದ್ದಾರೆ. “ವಿಂಗ್ಸ್‌ ಆಫ್‌ ಫೈರ್”‌ ಎಂಬುದು ಇವರ ಆತ್ಮಕಥನವಾಗಿದೆ. ಇನ್ನೂ ಇವರು ತಮ್ಮ “ಇಂಡಿಯಾ ಮೈ ಡ್ರೀಮ್‌”, “ಇಂಡಿಯಾ 2020” ಎಂಬ ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇಷೆಗಳನ್ನು ಆ ದಿನಗಳಲ್ಲೇ ಹಾಕಿಕೊಟ್ಟಿದ್ದಾರೆ.

APJ Abdul Kalam Birthday : India’s “Missile Man” Dr. APJ Abdul Kalam Birth Anniversary

Comments are closed.