BCCI may lose 955 crore: ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಮೋದಿ ಸರ್ಕಾರ, ವಿಶ್ವಕಪ್ ಆಯೋಜನೆಗೆ 955 ಕೋಟಿ ಟ್ಯಾಕ್ಸ್

ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್’ಗೆ (ICC Cricket World Cup 2023) ಭಾರತ ಆತಿಥ್ಯ ವಹಿಸಲಿದ್ದು, ಈಗಾಗಲೇ ತೆರೆಮರೆಯ ಸಿದ್ಧತೆಗಳು ಆರಂಭವಾಗಿವೆ. ಆದರೆ 2011ರ ನಂತರ ಭಾರತದಲ್ಲಿ ವಿಶ್ವಕಪ್ ಆಯೋಜಿಸುವ ಸಂಭ್ರಮದಲ್ಲಿರುವ ಬಿಸಿಸಿಐಗೆ (BCCI) ಕೇಂದ್ರ ಸರ್ಕಾರ ದೊಡ್ಡ ಶಾಕ್ ಕೊಟ್ಟಿದೆ. ಭಾರತದಲ್ಲಿ ವಿಶ್ವಕಪ್ ಆಯೋಜಿಸಲು 955 ಕೋಟಿ ರೂಪಾಯಿಗಳನ್ನು (BCCI may lose 955 crore) ಕೇಂದ್ರ ಸರ್ಕಾರಕ್ಕೆ ಬಿಸಿಸಿಐ ತೆರಿಗೆ ಮೂಲಕ ಕಟ್ಬಬೇಕಿದೆ. ಇಡೀ ವಿಶ್ವಕಪ್ ಟೂರ್ನಿಗೆ ಭಾರತ ಸರ್ಕಾರ 21.84% ಟ್ಯಾಕ್ಸ್ ಹಾಕಿದ್ದು, ಇದನ್ನು ಬಿಸಿಸಿಐ ಭರಿಸಬೇಕಿದೆ.

ವಿಶ್ವಕಪ್ ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಭಾರತ ಸರ್ಕಾರದಿಂದ ಯಾವುದೇ ತೆರಿಗೆ ವಿನಾಯಿತಿ ಪಡೆಯದೇ ಇದ್ದರೆ, 955 ಕೋಟಿ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ಬಿಸಿಸಿಐ ಪಾವತಿಸಬೇಕಿದೆ. ಐಸಿಸಿ ನಿಯಮದ ಪ್ರಕಾರ ವಿಶ್ವಕಪ್’ಗೆ ಆತಿಥ್ಯ ವಹಿಸುವ ರಾಷ್ಟ್ರ ಸ್ಥಳೀಯ ಸರ್ಕಾರದಿಂದ ಟ್ಯಾಕ್ಸ್ ವಿನಾಯಿತಿ ಪಡೆಯಬೇಕು. ಒಂದು ವೇಳೆ ಟ್ಯಾಕ್ಸ್ ವಿನಾಯಿತಿ ಸಿಗದಿದ್ದರೆ ವಿಶ್ವಕಪ್ ಟೂರ್ನಿಗೆ ಯಾವ ರಾಷ್ಟ್ರ ಆತಿಥ್ಯ ವಹಿಸುತ್ತದೆಯೋ, ಅದೇ ರಾಷ್ಟ್ರ ಸಂಪೂರ್ಣ ತೆರಿಗೆಯನ್ನು ಪಾವತಿಸಬೇಕು.


ಭಾರತ ಸರ್ಕಾರ ಐಸಿಸಿ ವಿಶ್ವಕಪ್’ಗೆ ಟ್ಯಾಕ್ಸ್ ವಿನಾಯಿತಿ ನೀಡುವ ಸಾಧ್ಯತೆ ಕಡಿಮೆ. 2016ರ ಐಸಿಸಿ ಟಿ20 ವಿಶ್ವಕಪ್’ಗೆ ಆತಿಥ್ಯ ವಹಿಸಿದ್ದ ಭಾರತ ಆಗ 193 ಕೋಟಿ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಿತ್ತು. ಈಗ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ 955 ಕೋಟಿ ರೂಪಾಯಿ ತೆರಿಗೆ ಪಾವತಿಸುವ ಅನಿವಾರ್ಯತೆ ಎದುರಾಗಲಿದೆ. ತೆರಿಗೆ ಪ್ರಮಾಣವನ್ನು 21.84%ನಿಂದ 10.92%ಗೆ ಇಳಿಸುವ ನಿಟ್ಟಿನಲ್ಲಿ ಬಿಸಿಸಿಐ ಈಗಾಗ್ಲೇ ಕಾರ್ಯೋನ್ಮುಖವಾಗಿದ್ದು, ಕೇಂದ್ರ ಹಣಕಾಸು ಸಚಿವಾಲಯದ ಜೊತೆ ಚೌಕಾಸಿಗೆ ಇಳಿದಿದೆ.

ಐಸಿಸಿ ಪಾಲಿಗೆ ಬಿಸಿಸಿಐ ಎಂಟಿಎಂ ಇದ್ದ ಹಾಗೆ. 2016ರಿಂದ 2023 ವರೆಗೆ ಐಸಿಸಿ ಆದಾಯದಲ್ಲಿ ಬಿಸಿಸಿಐ ಪಾಲು 3336 ಕೋಟಿ ರೂಪಾಯಿ. 2023ರ ವಿಶ್ವಕಪ್ ಪ್ರಸಾರದ ಹಕ್ಕಿನಿಂದ ಐಸಿಸಿ ಕನಿಷ್ಠ 4400 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಲ್ಲಿದೆ. ಐಸಿಸಿ ವಿಶ್ವಕಪ್ ಟೂರ್ನಿ ಮುಂದಿನ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯಲಿದ್ದು, 12 ವರ್ಷಗಳ ನಂತರ ಭಾರತ ವಿಶ್ವಕಪ್’ಗೆ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ : M S Dhoni : ಸಚಿನ್ ತೆಂಡೂಲ್ಕರ್ ಅವರಂತೆ ಆಡಲು ಬಯಸಿದ್ದೆ ಆದ್ರೆ, ಮಹೇಂದ್ರ ಸಿಂಗ್ ಧೋನಿ ಹೇಳಿದ್ದೇನು..?

ಇದನ್ನೂ ಓದಿ : T20 World Cup 2022 : ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ 16 ನಾಯಕರ ಫೋಟೋ ಸೆಷನ್, ನಾಳೆ ಶುರು ಚುಟುಕು ಕ್ರಿಕೆಟ್ ಮಹಾಯುದ್ಧ

BCCI may lose 955 crore before the ICC Cricket World Cup 2023

Comments are closed.